ಕಲಬುರಗಿಯಲ್ಲಿ ಬಿಜೆಪಿ ಭೀಮ ಸಮಾವೇಶ: ಲೋಕಸಭಾ ಚುನಾವಣೆಗೆ ರಣಕಹಳೆ

ಕಲಬುರಗಿ:ಫೆ.26: ನಗರದ ಉದ್ಯಾನವನದ ಬಳಿ ಇರುವ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಫೆಬ್ರವರಿ 28ರಂದು ಬೆಳಿಗ್ಗೆ ಹನ್ನೊಂದು ಗಂಟೆಗೆ ಭಾರತೀಯ ಜನತಾ ಪಕ್ಷದ ಗ್ರಾಮಾಂತರ ಜಿಲ್ಲಾ ಮತ್ತು ನಗರ ಜಿಲ್ಲಾ ಎಸ್‍ಸಿ ಮೋರ್ಚಾ ವತಿಯಿಂದ ಭೀಮ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮೋರ್ಚಾದ ಜಿಲ್ಲಾಧ್ಯಕ್ಷ ಮರೆಪ್ಪ ಬಡಿಗೇರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನೆಯನ್ನು ವಿಜಯಪುರದ ಸಂಸದ ರಮೇಶ್ ಜಿಗಜಿಣಗಿ ಅವರು ಮಾಡುವರು. ಮುಖ್ಯ ಅತಿಥಿಗಳಾಗಿ ಸಮಾವೇಶಗಳ ಉಸ್ತುವಾರಿ ವಾದಿರಾಜ್ ಜಿ., ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ವಿಧಾನ ಪರಿಷತ್ ಸದಸ್ಯ ಚಲುವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಎನ್. ಮಹೇಶ್, ಮಹೇಂದ್ರ ಕೌತಾಳ್, ಮಹಾಪೌರ ವಿಶಾಲ್ ದರ್ಗಿ, ರಾಜ್ಯ ನಾಯಕ ಆರ್. ರುದ್ರಯ್ಯ ಮುಂತಾದವರು ಆಗಮಿಸುವರು ಎಂದರು.
ಶಾಸಕರಾದ ಬಸವರಾಜ್ ಮತ್ತಿಮೂಡ್, ಡಾ. ಅವಿನಾಶ್ ಜಾಧವ್, ಸಂಸದ ಡಾ. ಉಮೇಶ್ ಜಾಧವ್, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ಸುನೀಲ್ ವಲ್ಲ್ಯಾಪುರ, ಸಾಯಬಣ್ಣ ತಳವಾರ್, ಬಿ.ಜಿ. ಪಾಟೀಲ್, ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್, ಮಾಜಿ ಶಾಸಕರಾದ ಸುಭಾಷ್ ಆರ್. ಗುತ್ತೇದಾರ್, ರಾಜಕುಮಾರ್ ಪಾಟೀಲ್ ತೆಲ್ಕೂರ್, ದತ್ತಾತ್ರೇಯ್ ಪಾಟೀಲ್ ರೇವೂರ್, ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ನಗರ ಅಧ್ಯಕ್ಷ ಚಂದು ಪಾಟೀಲ್, ಜಿಲ್ಲೆಯ 8 ಮಂಡಲದ ಎಸ್‍ಸಿ ಮೋರ್ಚಾ ಪ್ರಮುಖರು, ಕಾರ್ಯಕರ್ತರು, ನಗರದ ಎಲ್ಲ ವಾರ್ಡ್‍ಗಳ ಎಸ್‍ಸಿ ಚಲುವಾದಿ ಪ್ರಮುಖರು ಮತ್ತು ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದು ಅವರು ಹೇಳಿದರು.
ಸಮಾವೇಶಕ್ಕೆ ಸುಮಾರು 2500 ಕಾರ್ಯಕರ್ತರು ಆಗಮಿಸುವರು. ಹೀಗಾಗಿ ಎಸ್‍ಸಿ ಮೋರ್ಚಾದ ಜಿಲ್ಲೆಯ ಎಲ್ಲ ಚಲುವಾದಿ ನಾಯಕರು ಮತ್ತು ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಮಹಾಪೌರ ವಿಶಾಲ್ ದರ್ಗಿ, ರಾಜ್ಯ ಉಪಾಧ್ಯಕ್ಷ ಅಂಬಾರಾಯ್ ಅಷ್ಠಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತವೀರ್ ಎಂ. ಬಡಿಗೇರ್, ಧರ್ಮಣ್ಣ ಇಟಗಾ ಮುಂತಾದವರು ಉಪಸ್ಥಿತರಿದ್ದರು.