ಕಲಬುರಗಿಯಲ್ಲಿ ಪ್ರತಿ ವರ್ಷ ಟೂರ್ನಿ ಆಯೋಜಿಸಲು ಉತ್ಸುಕ

ಕಲಬುರಗಿ,ಡಿ.1: ಕಲಬುರಗಿಯಲ್ಲಿ ನಡೆಯುತ್ತಿರುವ ಐ.ಟಿ.ಎಫ್ ಟೂರ್ನಿಗೆ ನಿರೀಕ್ಷೆ ಮೀರಿ ಸ್ಪಂದನೆ ವ್ಯಕ್ತವಾಗಿದೆ. ಬೆಂಗಳೂರು, ಮುಂಬೈ ನಡೆತುವ ಟೂರ್ನಿಗೆ ಬೆರಳಣಿಕೆಯಲ್ಲಿ ಪ್ರೇಕ್ಷಕರ ಇರಲ್ಲ. ಆದರೆ ಕಲಬುರಗಿಯಲ್ಲಿ ವಿಭಿನ್ ಸ್ಥಿತಿ ಕಂಡಿದ್ದೇವೆ. ಆಟಗಾರರನ್ನು ಹುರಿದುಬಿಸಲು ನೂರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಬರುತ್ತಿದ್ದು, ಟೆನಿಸ್ ಬೆಳವಣಿಗೆಯ ನಿರೀಕ್ಷೆ ಗರಿಗೆದರಿದೆ.
ಟೂರ್ನಿಯ ಅಯೋಜನೆಗೆ ಜಿಲ್ಲಾಡಳಿತ ಆತಿಥ್ಯ, ಸಹಕಾರ ಎಲ್ಲವು ಅಚ್ಚುಕಟ್ಟಾಗಿ ಮಾಡಿದೆ. ಮುಂದಿನ ದಿನದಲ್ಲಿ ಕಲ್ಯಡಣ ಕರ್ನಾಟಕ ಭಾಗದಲ್ಲಿ ಟೆನಿಸ್ ಬೆಳವಣಿಗೆಗೆ ಕಲಬುರಗಿಯೇ ನಮಗೆ ಬೇಸ್ ಪಾಯಿಂಟ್ ಆಗಿದೆ. ಪ್ರತಿ ವರ್ಷ ಇದೇ ರೀತಿಯ ಸಹಕಾರ ದೊರೆತಲ್ಲಿ ಇಲ್ಲಿ ಐ.ಟಿ‌.ಎಫ್ ಮತ್ತು ಆಲ್ ಇಂಡಿಯಾ ರ‌್ಯಾಂಕಿಂಗ್ ಜ್ಯೂನಿಯರ್ ಟೂರ್ನಿ ಆಯೋಜಿಸಲು ಉತ್ಸುಕರಾಗಿದ್ದೇವೆ ಎಂದು ಕೆ.ಎಸ್.ಎಲ್‌.ಟಿ.ಎ ಗೌರವ ಜಂಟಿ ಕಾರ್ಯದರ್ಶಿ ಸುನೀಲ ಯಜಮಾನಾ ತಿಳಿಸಿದರು.