ಕಲಬುರಗಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ಅಸ್ತಿತ್ವಕ್ಕೆ

ಕಲಬುರಗಿ:ಫೆ.12: ಜಿಲ್ಲೆಯಲ್ಲಿ ಕರ್ನಾಟಕ ರಕ್ಷಣಾ ವೇಧಿಕೆಯ ಸ್ವಾಭಿಮಾನಿ ಬಣವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಪಿ. ಕೃಷ್ಣೇಗೌಡರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡು, ನುಡಿ, ನೆಲ, ಜಲಗಳಲ್ಲದೇ ಸಾಮಾಜಿಕ ಸೇವೆ ಮಾಡುತ್ತ ಬಂದಿದ್ದು, ಸಂಘಟನೆ ಶೈಕ್ಷಣಿಕವಾಗಿ ಕಟ್ಟಕಡೆಯ ಜನರಿಗೆ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟಿದೆ. ಸುಮಾರು 48 ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಸೂರು ಇಲ್ಲದವರಿಗೆ ಆಸರೆಯಾಗುವಂತಹ ಉದ್ದೇಶವನ್ನು ಇಟ್ಟುಕೊಂಡಿದೆ ಎಂದರು.
ಸುಮಾರು 78 ಮನೆಗಳನ್ನು ಕಡು ಬಡವರಿಗೆ ನಿರ್ಮಾಣ ಮಾಡಿಕೊಟ್ಟಿದ್ದೇವೆ. ಸಂಘಟನೆಯು ಯಾವುದೇ ಸ್ವಾರ್ಥಕ್ಕಾಗಿ ನಿರ್ಮಾಣವಾಗಿಲ್ಲ. ಸುಮಾರು 30-31 ಜಿಲ್ಲೆಗಳಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ಸಂಘಟನೆಗಳು ತನ್ನ ಸ್ವಾರ್ಥಕ್ಕಾಗಿ ತನ್ನ ಬದುಕಿಗಾಗಿ ಸಾಮಾಜಿಕ ಚಿಂತನೆ ಇಲ್ಲದೇ ಕೆಲಸ ಮಾಡುತ್ತಿವೆ ಎಂದು ಹೇಳಿದ ಅವರು, ನಮ್ಮ ಸಂಘಟನೆಯು ತಾರ್ಕಿಕ ಅಂತ್ಯ ಕಾಣುವವರೆಗೂ ಹೋರಾಟ ಮಾಡಲಿದೆ ಎಂದರು.
ಸಂಘಟನೆಯ ನೂತನ ಜಿಲ್ಲಾಧ್ಯಕ್ಷರನ್ನಾಘಿ ಬಸವಲಿಂಗ್ ಎಸ್. ಹಾಲು ಹಾಗೂ ಜಿಲ್ಲಾ ಉಸ್ತುವಾರಿಗಳನ್ನಾಗಿ ನಾಗೇಸ್ ಎನ್. ಹಲಗಿ ಅವರನ್ನು ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉತ್ತರ ಕರ್ನಾಟಕದ ಅಧ್ಯಕ್ಷ ಲಕ್ಷ್ಮಣ್ ಜ. ಕಂಭಾಗಿ ಅವರು ಉಪಸ್ಥಿತರಿದ್ದರು.