ಕಲಬುರಗಿಯಲ್ಲಿ ಎನ್.ಸಿ.ಸಿ.ಯ ಸಿ.ಎ.ಟಿ.ಸಿ-1 ಕ್ಯಾಂಪ್

ಕಲಬುರಗಿ,ನ.13-32 ಕರ್ನಾಟಕ ಬಟಾಲಿಯನ್ ಎನ್.ಸಿ.ಸಿ.ವತಿಯಿಂದ ಖಣದಾಳದ ಶ್ರೀಗುರು ವಿದ್ಯಾಪೀಠದಲ್ಲಿ ಸಿ.ಎ.ಟಿ.ಸಿ-1 ಕ್ಯಾಂಪ್ .11 ರಿಂದ ಪ್ರಾರಂಭಗೊಂಡಿದ್ದು, ಸುಮಾರು 400 ಎನ್.ಸಿ.ಸಿ.ಕೆಡೆಟ್ ಗಳು ಮತ್ತು 50 ಜನ ಸಿಬ್ಬಂದಿಗಳು ಈ ಕ್ಯಾಂಪಿನಲ್ಲಿ ಭಾಗವಹಿಸಿದ್ದಾರೆ.
ಈ ಕ್ಯಾಂಪ್ ನ.20ರವರೆಗೆ ಒಟ್ಟು 10 ದಿನಗಳ ಕಾಲ ನಡೆಯುವುದು. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಉದ್ದೇಶದಿಂದ 10 ದಿನಗಳವರೆಗೆ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಎನ್.ಸಿ.ಸಿ.ಚಟುವಟಿಕೆಗಳು ನಿರಂತರವಾಗಿ ನಡೆಯಲಿವೆ. ಬೆಳಿಗ್ಗೆ 5 ರಿಂದ 7 ರವರೆಗೆ ಪಿ.ಟಿ. 7 ರಿಂದ 8 ರವರೆಗೆ ಅಲ್ಪೋಪಹಾರ, 8 ರಿಂದ 10 ರವರೆಗೆ ಡ್ರಿಲ್, 10 ರಿಂದ 1 ರವರೆಗೆ ಥೇರಿ ಮತ್ತು ಪ್ರಾಯೋಗಿಕ ತರಗತಿಗಳು, 1 ರಿಂದ 2 ರವರೆಗೆ ಭೋಜನವಿರಾಮ, 3 ರಿಂದ 4 ರವರೆಗೆ ಉಪನ್ಯಾಸ, 4 ರಿಂದ 5 ರವರೆಗೆ ಕ್ರೀಡೆ, 6 ರಿಂದ 7 ರವರೆಗೆ ರೋಲ್ ಕಾಲ್, 7 ರಿಂದ 8 ರವರೆಗೆ ಭೋಜನವಿರಾಮ, 8 ರಿಂದ 10 ರವರೆಗೆ ಸಾಂಸ್ಕøತಿಕ ಚಟುವಟಿಕೆಗಳು ನಡೆಯಲಿದ್ದು, ನ.12 ರಂದು ಸಿ.ಎ.ಟಿ.ಸಿ-1 ಕ್ಯಾಂಪ್ ಕಮಾಂಡೆಂಟ್ ಕರ್ನಲ್ ಸಂದೀಪ್ ಜಗತಾಪ್ ಅವರು ಕ್ಯಾಂಪ್ ಉದ್ಘಾಟಿಸಿ ಮಾತನಾಡಿದರು.
ಕ್ಯಾಂಪ್ ಅಡ್ಜಟೆಂಟ್ ಮೇಜರ್ ಗೌರಮ್ಮ ಪಾಟೀಲ, ಸುಬೇದಾರ ಮೇಜರ್ ಮಹೇಂದ್ರಸಿಂಗ್ ಹಾಗೂ ಎಲ್ಲಾ ಸಹಾಯಕ ಎನ್.ಸಿ.ಸಿ. ಅಧಿಕಾರಿಗಳು ಮತ್ತು ಪಿ.ಐ.ಸಿಬ್ಬಂದಿ ಕ್ಲ್ಯಾರಿಕಲ್ ಸಿಬ್ಬಂದಿ ಉಪಸ್ಥಿತರಿದ್ದರು.