ಕಲಬುರಗಿಯಲ್ಲಿ ಅಂಬೇಡ್ಕರ ಭಾವಚಿತ್ರಕ್ಕೆ ಅವಮಾನ ಮಾಡಿದ ದುಷ್ಕರ್ಮಿಗಳನ್ನು ಗಡಿಪಾರು ಮಾಡಿ:ಧರ್ಮರಾಯ ಸಾಲೋಟಗಿ

ಇಂಡಿ:ಜ.25:ಕಲಬುರಗಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ ಅವರ ಪುತ್ಥಳಿಗೆ ಅವಮಾನ ಮಾಡಿರುವ ಕಿಡಗೇಡಿಗಳ ಹಿಂದಿರುವ ಕಾಣದ ಕೈಗಳು ಯಾವವು ಎಂಬುದು ತನಿಖೆ ನಡೆಸಿ ತಪ್ಪಿಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.ದೇಶದ್ರೋಹಿ ಹಾಗೂ ಗೂಂಡಾ ಕಾಯ್ದೆ ಅಡಿಯಲ್ಲಿ ಅವರನ್ನು ಬಂಧಿಸಿ ಗಡಿಪಾರು ಮಾಡಬೇಕು.ರಾಷ್ಟ್ರ ನಾಯಕರ ಪುತ್ಥಳಿಗೆ ಅವಮಾನ ಮಾಡುವ ದೇಶದ್ರೋಹಿಗಳಿಗೆ ಗಲ್ಲುಶಿಕ್ಷೆ ವಿಧಿಸುವ ಕಾನೂನು ಜಾರಿಗೊಳಿಸಬೇಕು ಎಂದು ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಧರ್ಮರಾಯ ಸಾಲೋಟಗಿ ಹೇಳಿದರು.
ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಂಬೇಡ್ಕರ ಅವರು ಒಂದು ಜಾತಿ,ಧರ್ಮವನ್ನು ಮುಂದಿಕೊಟ್ಟುಕೊಂಡು ಸಂವಿಧಾನ ರಚನೆ ಮಾಡಿರುವುದಿಲ್ಲ. ಸರ್ವ ಜಾತಿ,ಧರ್ಮದಲ್ಲಿನ ಶೋಷಿತ ಜನರ ಒಳತಿಗಾಗಿ,ಅವರ ಅಭ್ಯುದ್ಯಯಕ್ಕಾಗಿ ಸಂವಿಧಾನ ರಚನೆ ಮಾಡಿದ್ದಾರೆ. ಮೀಸಲಾತಿ ಬೇಡುವಾಗ ಮಾತ್ರ ಅಂಬೇಡ್ಕರ ಅವರ ಸಂವಿಧಾನ,ಅಂಬೇಡ್ಕರ ಅವರ ನೆನಪಾಗುತ್ತದೆ. ರಾಷ್ಟ್ರ ನಾಯಕರು ಯಾರೇ ಆಗಿರಲಿ,ಅಂತವರನ್ನು ದೇಶ್ರೋಹಿಗಳು ಅವಮಾನ ಮಾಡಿದರೆ ಅವರ ಜಾತಿಯವರೇ ವಿರೋಧ,ಹೋರಾಟ ಮಾಡುವ ಮನೋಭಾವ ಬಸವಣ್ಣನವರು ಹುಟ್ಟಿದ ನಾಡಿನ ಜನರಲ್ಲಿ ಮೂಡಿರುವುದು ಕಳವಳಕಾರಿ ಸಂಗತಿ.
ಕೂಡಲೇ ಅಂಬೇಡ್ಕರ ಪುತ್ಥಳಿಗೆ ಅವಮಾನ ಮಾಡಿದ ದುರುಳರಿಗೆ ಕಠಿಣ ಕಾನೂನಿ ಅಡಿಯಲ್ಲಿ ಬಂಧಿಸಿದ ಅವರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ಅವರ ಆಸ್ತಿಪಾಸ್ತಿಗಳನ್ನು ಸರ್ಕಾರ ಮುಟ್ಟುಗೊಲು ಹಾಕಿಕೊಳ್ಳಬೇಕ.ಸರ್ಕಾರ ಇದಕ್ಕೆ ವಿಳಂಭ ನೀತಿ ಅನುಸರಿಸಿದರೆ ರಾಜ್ಯಾಧ್ಯಂತ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ.ಇದಕ್ಕೆ ಸರ್ಕಾರವೇ ಹೊಣೆಯನ್ನಾಗಿ ಮಾಡಬೇಕಾಗುತ್ತದೆ ಎಂದು ಧರ್ಮರಾಯ ಸಾಲೋಟಗಿ, ಸುನೀಲ ಗಾಯಕವಾಡ, ಮಲ್ಲಿಕಾರ್ಜುನ ಅರ್ಜನಾಳ, ಶಟ್ಟೆಪ್ಪ ಶಿವಪೂರ,ವಿಠಲ ಲಚ್ಯಾಣ, ರಾಜು ಶಿರಗೂರ, ಕಿರಣ ತೆಲಗ, ಮಲ್ಲಿಕಾರ್ಜುನ ಗೊರನಾಳ,ಸದಾಶಿವ ಆಲಮೇಲ, ಮಾರುತಿ ಮೈಲಾರಿ,ವಿಕಾಸ ಲೋಣಿ,ಶರಣು ಕಟ್ಟಿಮನಿ ಮೊದಲಾದವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.