ಕಲಬುರಗಿಜಿಲ್ಲೆ: ಶೇ 64.85 ಸಾಕ್ಷರತೆ

ಕಲಬುರಗಿ,ಜು 13: ಕಲಬುರಗಿ ಜಿಲ್ಲೆಯು ಶೇ 64.85 ಹಾಗೂ ಯಾದಗಿರಿ ಜಿಲ್ಲೆ ಶೇ 51.83 ಸಾಕ್ಷರತೆ ಹೊಂದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.ಅಧಿವೇಶನದಲ್ಲಿ ವಿಧಾನ ಪರಿಷತ್ ಡಾ.ಬಿ.ಜಿ ಪಾಟೀಲ ಪ್ರಶ್ನೆಗೆ ಉತ್ತರಿಸಿರುವ ಅವರು,ಕಲಬುರಗಿಯಲ್ಲಿ ಪುರುಷರು ಶೇ 74.38 ಮಹಿಳೆಯರು ಶೇ 55.09 ಯಾದಗಿರಿ ಜಿಲ್ಲೆಯಲ್ಲಿ ಪುರುಷರು ಶೇ 62.25 ,ಮಹಿಳೆಯರು ಶೇ 41.38 ಸಾಕ್ಷರರಾಗಿದ್ದಾರೆ. 2022-23 ರಿಂದ 2026-27 ರವರೆಗೆ ಎರಡೂ ಜಿಲ್ಲೆಗಳಲ್ಲಿ ಕೇಂದ್ರ ಪುರಸ್ಕøತ ನವಭಾರತ ಸಾಕ್ಷರತಾ ಕಾರ್ಯಕ್ರಮ ಅನುಷ್ಠಾನದಲ್ಲಿದ್ದು,ರಾಜ್ಯ ಸಾಕ್ಷರತಾ ಕಾರ್ಯಕ್ರಮಗಳ ಮೂಲಕ ಪ್ರಗತಿ ಸಾಧಿಸಲು ಕ್ರಮ ವಹಿಸಲಾಗಿದೆ.ಕಲಬುರಗಿ ಜಿಲ್ಲೆಯಲ್ಲಿ 410,ಯಾದಗಿರಿಯಲ್ಲಿ 467 ಕಲಿಕಾಕೇಂದ್ರ ಪ್ರಾರಂಭವಾಗಿವೆ ಎಂದು ತಿಳಿಸಿದ್ದಾರೆ