ಕಲಬುರಗಿಗೆ 350 ರೆಮೆಡೆಸಿವಿರ್ ಇಂಜೆಕ್ಷನ್

ಕಲಬುರಗಿ ಏ 28: ಇಂದು ಬೆಳಿಗ್ಗೆ ಬೆಂಗಳೂರಿನಿಂದ ವಿಮಾನದ ಮೂಲಕ 350 ರೆಮೆಡೆಸಿವಿರ್ ಇಂಜೆಕ್ಷನ್‍ನ ಬಾಟಲುಗಳನ್ನು ಸಂಸದ ಡಾ.ಉಮೇಶ್ ಜಾಧವ್ ಅವರು ನಗರಕ್ಕೆ ತಂದರು.
ಕಲಬುರಗಿಯ ಆಸ್ಪತ್ರೆಗಳಿಗೆ ರೆಮೆಡೆಸಿವಿರ್ ಇಂಜೆಕ್ಷನ್ ಸ್ಟಾಕ್ ಇಲ್ಲ ಎಂದು ಸಹಾಯಕ ಡ್ರಗ್ ಕಂಟ್ರೋಲರ್ ಅವರು ಸಂಸದ ಡಾ. ಉಮೇಶ್ ಜಾಧವ್ ಅವರ ಗಮನಕ್ಕೆ ತಂದರು. ಸಂಸದರು ಕಳೆದ ರಾತ್ರಿ 1 ಗಂಟೆಗೆ ಬೆಂಗಳೂರಿನ ಡ್ರಗ್ ಕಂಟ್ರೋಲ್ ಮುಖ್ಯಾಲಯಕ್ಕೆ ಧಾವಿಸಿ ತುರ್ತು ಅಗತ್ಯಕ್ಕಾಗಿ 350 ಬಾಟಲುಗಳನ್ನು ಮಂಜೂರು ಮಾಡಿಸಿದ್ದಾರೆ ಮತ್ತು ಇತರ 460 ಬಾಟಲುಗಳನ್ನು ಇಂದು ಸಂಜೆ ವೇಳೆಗೆ ಕಲಬುರಗಿಗೆ ರವಾನಿಸಲಾಗುವುದು ಎಂದು ಸಂಸದರು ತಿಳಿಸಿದ್ದಾರೆ
ಈ ಮಂಜೂರಾದ 350 ಬಾಟಲುಗಳನ್ನು ತಲುಪಲು ಇನ್ನೂ 1 ದಿನ ಬೇಕಾಗಬಹುದಾಗಿತ್ತು. ಮತ್ತು 29 ರಂದು ಬೆಳಿಗ್ಗೆ ಹೊತ್ತಿಗೆ ತಲುಪುತ್ತಿರಲಿಲ್ಲ.ಆದ್ದರಿಂದ ಸಂಸದ ಡಾ.ಉಮೇಶ್ ಜಾಧವ್ ಅವರು ಈ ಚುಚ್ಚುಮದ್ದನ್ನು ವಿಮಾನದ ಮೂಲಕ ಕಲಬುರಗಿಗೆ ಕೊಂಡೊಯ್ಯಲು ನಿರ್ಧರಿಸಿದರು