ಕಲಬುರಗಿಗೆ ಸರ್ಕಾರಿಜಮೀನುಗಳ ಸಂರಕ್ಷಣಾ ಸಮಿತಿ ಭೇಟಿ

ಕಲಬುರಗಿ,ಜು.25:ವಿಧಾನಸಭಾ ಸದಸ್ಯ ಹಾಗೂ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾದ ಕೆ.ಜಿ. ಭೋಪಯ್ಯ ಅವರ ನೇತೃತ್ವದ ಏಳು ಜನ ಸದಸ್ಯರನ್ನೊಳಗೊಂಡ ಸಮಿತಿಯು ಬೆಂಗಳೂರಿನಿಂದ ವಿಮಾನದ ಮೂಲಕ ಜುಲೈ 26 ರಂದು ಮಂಗಳವಾರ ಮಧ್ಯಾಹ್ನ 1.55 ಗಂಟೆಗೆ ಕಲಬುರಗಿಗೆ ಆಗಮಿಸಲಿದೆ.
ವಿಧಾನಸಭಾ ಸದಸ್ಯರಾದ ವಿಶ್ವನಾಥ ಎಸ್.ಆರ್., ಎ.ಟಿ. ರಾಮಸ್ವಾಮಿ, ರಾಜಶೇಖರ ಬಸವರಾಜ ಪಾಟೀಲ, ಎಸ್.ಎ. ರಾಮದಾಸ್, ಎಸ್. ರಘು ಹಾಗೂ ಜಿ.ಎಲ್.ಪಿ.ಸಿ. ಸದಸ್ಯ ಕಾರ್ಯದರ್ಶಿಗಳು ಮತ್ತು ಕೆ.ಪಿ.ಎಲ್.ಸಿ. ವ್ಯವಸ್ಥಾಪಕ ನಿರ್ದೇಶಕ ಪಿ. ವಸಂತಕುಮಾರ್ ಇವರನ್ನೊಳಗೊಂಡ ಸಮಿತಿ ಭೇಟಿ ನೀಡಲಿದೆ.
ಸಮಿತಿಯು ಅಂದು ಮಧ್ಯಾಹ್ನ 3 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೀದರ ಮತ್ತು ಕಲಬುರಗಿ ಜಿಲ್ಲೆಗಳ ಮುಜರಾಯಿ ಇಲಾಖೆಗೆ ಸೇರಿದ ಸ್ಥಿರ ಮತ್ತು ಚರಾಸ್ತಿಗಳ ಸಮಗ್ರ ಮಾಹಿತಿ ಪರಾಮರ್ಶೆ, ಒತ್ತುವರಿ, ಭೂ ಕಬಳಿಕೆ, ನ್ಯಾಯಾಲಯದ ಪ್ರಕರಣಗಳ ಪರಿಶೀಲನೆ ಕುರಿತು ಸಮಿತಿ ಸಭೆ ನಡೆಸಿ, ಸಂಜೆ 6 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ಬೀದರ ಜಿಲ್ಲೆಗೆ ಪ್ರಯಾಣ ಬೆಳೆಸಲಿದೆ.