ಕಲಬುರಗಿಗೆ ಬಂದ 12 ಸಾವಿರ ಕೋವಿಶೀಲ್ಡ್ ವ್ಯಾಕ್ಸಿನ್

ಕಲಬುರಗಿ,ಜ.14-ಬೆಂಗಳೂರಿನಿಂದ 12 ಸಾವಿರ ಡೋಸ್ ಕೋವಿಶೀಲ್ಡ್ ವ್ಯಾಕ್ಸಿನ್ ನನ್ನು ಸೂಕ್ತ ಪೊಲೀಸ್ ಭದ್ರತೆಯಲ್ಲಿ ಕಲಬುರಗಿಗೆ ತರಲಾಗಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ್ ಮಾಲಿ ಅವರು ಸ್ವೀಕರಿಸಿ ದಾಸ್ತಾನು ಮಾಡಿದ್ದಾರೆ.
ಜಿಲ್ಲಾ ಆಸ್ಪತ್ರೆ, ಆರು ತಾಲ್ಲೂಕು ಅಸ್ಪತ್ರೆ ಹಾಗೂ ಗೊಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ 100 ಆರೋಗ್ಯ ಕಾರ್ಯಕರ್ತರಿಗೆ ಅಂದರೆ ಒಟ್ಟು 800 ಮಂದಿಗೆ ಜ.16 ರಂದು ಕೋವಿಡ್ ವ್ಯಾಕ್ಸಿನ್ ನೀಡಲಾಗುತ್ತಿದೆ.
ಬೆಂಗಳೂರಿನಿಂದ ಕಲಬುರಗಿಗೆ ಪೊಲೀಸ್ ಭದ್ರತೆಯಲ್ಲಿ ವ್ಯಾಕ್ಸಿನ್ ತರಲಾಗಿದ್ದು, ಯಾದಗಿರಿ ಜಿಲ್ಲಾ ಗಡಿಯಿಂದ ಕಲಬುರಗಿ ಪೊಲೀಸರು ವ್ಯಾಕ್ಸಿನ್ ಹಾಗೂ ಸಿಬ್ಬಂದಿ ಇದ್ದ ವಾಹನಕ್ಕೆ ಭದ್ರತೆ ಒದಗಿಸಿ ವ್ಯಾಕ್ಸಿನ್ ತರಲಾಗಿದೆ.
ಕೋವಿಶೀಲ್ಡ್ ವ್ಯಾಕ್ಸಿನ್ ನನ್ನು ನಾಳೆ ಜಿಲ್ಲೆಯ ಎಲ್ಲಾ ತಾಲ್ಲೂಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ರವಾನಿಸಲಾಗುವುದು. ನಾಡಿದ್ದು, ಲಸಿಕೆ ನೀಡಲಾಗುವುದು. 21,147 ಫಲಾನುಭಗಳ ಹೆಸರು ನಿನ್ನೆಯವರಿಗೆ ನೋಂದಣಿಯಾಗಿದ್ದು, ಹಂತಹಂತವಾಗಿ ಲಸಿಕೆ ನೀಡಲಾಗುವುದು. ಜಿಲ್ಲೆಯಲ್ಲಿ ಒಟ್ಟು 135 ಕೇಂದ್ರ ( ಆರೋಗ್ಯ ಸಂಘ- ಸಂಸ್ಥೆ)ಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್ ಹಾಕಲಾಗುತ್ತಿದ್ದು, ಜನವರಿ 16ರಂದು 8 ಕೇಂದ್ರಗಳಲ್ಲಿ ಹಾಗೂ ಜ.18ರಿಂದ ಇನ್ನುಳಿದ ಸಂಸ್ಥೆಗಳಲ್ಲಿನ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಲಾಗುತ್ತದೆ. ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜಶೇಖರ್ ಮಾಲಿ “ಸಂಜೆವಾಣಿ”ಗೆ ತಿಳಿಸಿದರು.