ಕಲಬುರಗಿಗೆ ಪ್ರಧಾನಮಂತ್ರಿಗಳ ಭೇಟಿ: ಡ್ರೋನ್ ಕ್ಯಾಮೆರಾ ಉಪಯೋಗಿಸುವುದನ್ನು ನಿಷೇಧಿಸಿ ಡಿ.ಸಿ. ಆದೇಶ

ಕಲಬುರಗಿ,ಮೇ.01:ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಇದೇ ಮೇ 2 ಹಾಗೂ 3 ರಂದು ಕಲಬುರಗಿ ಜಿಲ್ಲೆಗೆ ಭೇಟಿ ನೀಡುವ ನಿಮಿತ್ತ ಭದ್ರತಾ ದೃಷ್ಟಿಯಿಂದ ಅವರು ಸಂಚರಿಸುವ ಈ ಕೆಳಕಂಡ ಮಾರ್ಗ ಮತ್ತು ತಂಗುವ ಪ್ರದೇಶಗಳ ಸುತ್ತಮುತ್ತ ಡ್ರೋನ್ ಕ್ಯಾಮೆರಾ ಉಪಯೋಗಿಸುವುದನ್ನು ಹಾಗೂ ಹಾರಿಸುವುದನ್ನು 2023ರ ಮೇ 2ರ ಬೆಳಗಿನ 6 ಗಂಟೆಯಿಂದ ಮೇ 3ರ ಮಧ್ಯಾಹ್ನ 12 ಗಂಟೆಯವರೆಗೆ ಸಿ.ಆರ್.ಪಿ.ಸಿ. ಕಲಂ 144 ರನ್ವಯ ನಿಷೇಧಿಸಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಯಶವಂತ್ ವಿ. ಗುರುಕರ್ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣ, ಮಾನ್ಯ ಪ್ರಧಾನಮಂತ್ರಿಗಳು ಹಾಗೂ ಬೆಂಗಾವಲು ಪಡೆ ಇರುವ ಸಾಗುವ ರೋಡ್ ಶೋ ಮತ್ತು ಎಲ್ಲಾ ಮಾರ್ಗ, ಐವಾನ್‍ಶಾಹಿ ಅತಿಥಿ ಗೃಹ ಹಾಗೂ ಸುತ್ತಮುತ್ತಲು, ಹೆಲಿಪ್ಯಾಡ್ (ಕಲಬುರಗಿ ಡಿ.ಎ.ಆರ್. ಪೊಲೀಸ್ ಮೈದಾನ) ಹಾಗೂ ಬದಲಾವಣೆ ಆಗುವ ಎಲ್ಲಾ ಮಾರ್ಗಗಳಲ್ಲಿ ಯಾವುದೇ ಡ್ರೋನ್ ಕ್ಯಾಮರಾ ಹಾರಿಸದಂತೆ ನಿಷೇಧಿಸಿ ಅವರು ಆದೇಶ ಹೊರಡಿಸಿದ್ದಾರೆ.