ಕಲಬುರಗಿಗೂ ಕಾಲಿಟ್ಟ ಬ್ಲ್ಯಾಕ್ ಫಂಗಸ್ !

ಕಲಬುರಗಿ,ಮೇ.17-“ಜಿಲ್ಲೆಯಲ್ಲಿಯೂ ಕೂಡ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಬೆಳಕಿಗೆ ಬಂದಿವೆ ಎನ್ನುವ ಮಾಹಿತಿ ಇದೆ. ಅದನ್ನು ನಿಯಂತ್ರಿಸಲು ಬೇಕಾದ ಕ್ರಮಗಳ್ನು ಕೈಗೊಳ್ಳಲಾಗುವುದು. ಅದಿನ್ನೂ ಪ್ರಾರಂಭಿಕ ಹಂತದಲ್ಲಿದ್ದು, ಯಾರೂ ಭಯ ಪಡುವ ಅಗತ್ಯವಿಲ್ಲ” ಎಂದು ಸಂಸದ ಡಾ.ಉಮೇಶ್ ಜಾಧವ್ ತಿಳಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ” ಬ್ಲ್ಯಾಕ್ ಫಂಗಸ್ ಸೋಂಕಿತರ ಚಿಕಿತ್ಸೆಗೆ ಬೇಕಾದ ಮಾತ್ರೆಗಳನ್ನು ನಾನೇ ಖುದ್ದಾಗಿ ತರಿಸಿದ್ದೇನೆ. ಇಬ್ಬರಿಗೆ ಮೆಡಿಸಿನ್ ತರಿಸಲಾಗಿದೆ. ಕೊರೊನಾ ಸೋಂಕಿತರಿಗೆ ಸಕ್ಕರೆ ಖಾಯಿಲೆ ಇದ್ದರೆ ಮಾತ್ರ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದು ಎಲ್ಲಾ ಕೊರೊನಾ ಸೋಂಕಿತರಿಗೂ ಬರುವುದಿಲ್ಲ. ಹೀಗಾಗಿ ಯಾರೂ ಭಯ, ಆತಂಕ ಪಡುವ ಅಗತ್ಯವಿಲ್ಲ” ಎಂದರು.