ಕಲಘಟಗಿ ಬಳಿ ಕರಡಿಗಳು ಪ್ರತ್ಯಕ್ಷ

ಹುಬ್ಬಳ್ಳಿ,ಜೂ23: ಕಲಘಟಗಿ ಸಮೀಪ ಮಂಗೇಶಕೆರೆ ಬಳಿ ಎರಡು ಕರಡಿ ಪ್ರತ್ಯಕ್ಷವಾಗಿವೆ. ಕಲಘಟಗಿ ಪಟ್ಟಣದಿಂದ ಎರಡು ಕಿ.ಮೀ ಅಂತರದಲ್ಲಿರುವ ಮಂಗೇಶಕೆರೆಯ ಬಳಿ ಕರಡಿಗಳನ್ನು ಕಂಡ ಸುತ್ತಮುತ್ತಲಿನ ಜನ ಭಯಭೀತರಾಗಿದ್ದಾರೆ.
ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಯುವಕರಿಗೆ ಕರಡಿ ಕಾಣಿಸಿಕೊಂಡಿದ್ದು, ಕರಡಿ ನೋಡಿದ ಯುವಕರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಅರೇ ಮಲೆನಾಡು ಪ್ರದೇಶವಾದ ಕಲಘಟಗಿ ತಾಲೂಕಿನಲ್ಲಿ ಕಳೆದ ಒಂದು ತಿಂಗಳಿಂದ ಮಳೆ ಆಗದ ಹಿನ್ನೆಲೆಯಲ್ಲಿ ಜಲಮೂಲ ಬತ್ತಿದೆ. ಜಲಮೂಲ ಇಲ್ಲದ ಕಾರಣ
ಅಲ್ಪಸ್ವಲ್ಪ ಉಳಿದ ಕರೆಗಳಲ್ಲಿನ ನೀರು ಕುಡಿಯಲು ಕಾಡುಪ್ರಾಣಿಗಳು ಬರುತ್ತಿವೆ. ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವುರಿಂದ ಈ ಭಾಗದ ಜಲಮೂಲಗಳತ್ತ ಲಗ್ಗೆ ಇಡುತ್ತಿವೆ ಎಂದು ಪ್ರಾಣಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಕರಡಿ ಪ್ರತ್ಯಕ್ಷವಾದರಿಂದ ಕಲಘಟಗಿ ಪಟ್ಟಣದ ಸುತ್ತಮುತ್ತಲಿ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಕರಡಿಗಳನ್ನು ಮತ್ತೆ ಕಾಡಿಗೆ ಅಟ್ಟಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.