ಕಲಗುರ್ತಿ ಕೋಲಿ ಸಮಾಜದ ಯುವಕನ ಸಾವಿಗೆ ಕಾರಣರಾದವರ ಬಂಧಿಸಿ

ಚಿತ್ತಾಪುರ:ಸೆ.1: ತಾಲೂಕಿನ ಕಲಗುರ್ತಿ ಗ್ರಾಮದ ಕಬ್ಬಲಿಗ ಸಮಾಜದ ಯುವಕ ದೇವಾನಂದ ಕೊರಬಾ ಸಾವಿಗೆ ಕಾರಣರಾದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ತಳವಾರ ಸಾಬಣ್ಣ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕೆ ಪ್ರಕಟಣೆ ನೀಡಿದ ಅವರು, ತಾಲೂಕಿನ ಕಲಗುತಿ ಗ್ರಾಮದ ಕಬ್ಬಲಿಗ ಸಮಾಜದ ದೇವಾನಂದ ರಾಮಚಂದ್ರ ಕೊರಬಾ ಮನೆಯ ಮುಂದೆ ಕಾರು ನಿಲ್ಲಿಸಿದ ವಿಷಯಕ್ಕೆ ಯುವಕ ಮತ್ತು ದೇವಾನಂದ ಇಬ್ಬರ ಮದ್ಯೆ ಜಗಳವಾಗಿತ್ತು. ಸ್ಥಳೀಯ ಮುಖಂಡರೊಬ್ಬರು ನಿಮ್ಮ ಮನೆಯ ಮುಂದೆ ಕಾರನ್ನು ನಿಲ್ಲಿಸಿದರೆ ಏನಾಯಿತು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆದು, ಬೆದರಿಸಿದ್ದರು. ಮಾಡಬೂಳ ಪೆÇಲೀಸ್ ಠಾಣೆಯ ಪಿಎಸ್‍ಐ ದೇವಾನಂದ ಅವರನ್ನು ಠಾಣೆಯಲ್ಲಿ ಹೆದರಿಸಿ ಸಂಜೆವರೆಗೂ ಕೂಡಿಸಿಕೊಂಡು ಬೆದರಿಸಿ, ಹಿಂಸೆಕೊಟ್ಟು ವಾಪಸ್ ಮನೆಗೆ ಕಳಿಸಿದ್ದರು. ಈ ಮಾನಸಿಕ ಕಿರುಕುಳ ತಾಳಲಾರದೆ ದೇವಾನಂದ ವಿಷ ಕುಡಿದು ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ರಾಜಕೀಯ ಮುಖಂಡರ ದಬ್ಬಾಳಿಕೆ, ದೌರ್ಜನ್ಯ, ಬೆದರಿಕೆ, ಪೆÇಲೀಸರು ಹೊಡೆಯುವುದು, ಬೆದರಿಕೆ ಹಾಕಿರುವುದರಿಂದ ದೇವಾನಂದ ಮಾನಸಿಕವಾಗಿ ಹಿಂಸೆಗೊಳಗಾಗಿ ತುಂಬಾ ಭಯಗೊಂಡು ಆತ್ಮಹತ್ಯ ಮಾಡಿಕೊಂಡಿದ್ದಾನೆ. ದೇವಾನಂದ ವಿರುದ್ದ ಯಾವ ಪ್ರಕರಣ ದಾಖಲಾಗದೆ, ಯಾವ ಪ್ರಕರಣದಲ್ಲೂ ಆರೋಪಿಯಾಗದೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದವರನ್ನು ಶಿಕ್ಷಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಕಾರಣ ಈ ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ನಡೆಸಿ ದೇವಾನಂದ ಕುಟುಂಬಸ್ಥರಿಗೆ ನ್ಯಾಯ ಒದಗಿಸಿ ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.