
ಕಲಬುರಗಿ:ಎ.26:ಇಲ್ಲಿಗೆ ಸಮೀಪದ ಕಲಕುಟಗಾ ಗ್ರಾಮದಲ್ಲಿ ಶ್ರೀ ಬಸವೇಶ್ವರ ಯುವ ಸಂಘದ ವತಿಯಿಂದ ಬಸವೇಶ್ವರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
ಬಸವಣ್ಣನವರು ಕ್ರಾಂತಿಕಾರಕ ವಚನಗಳ ಮೂಲಕ ಸಾಮಾಜಿಕ ಅರಿವು ಮೂಡಿಸಿದ ಜಗತ್ತು ಕಂಡ ಅಪರೂಪದ ಕಾಯಕಯೋಗಿದ್ದಾರೆ. ಆಚರಣೆಯಲ್ಲಿದ್ದ ಹಲವು ಅನಿಷ್ಟ ಪದ್ಧತಿಗಳನ್ನು ಮುಕ್ತ ಮಾಡಲು ಸರ್ವಧರ್ಮಗಳ ವಚನಕಾರರನ್ನೊಳಗೊಂಡ ಅನುಭವ ಮಂಟಪವನ್ನು ಸ್ಥಾಪಿಸಿ ಕಾಯಕ ಮಂತ್ರವನ್ನು ಬೋಧಿಸಿದರು. ಮಕ್ಕಳು ಬಸವಣ್ಣನವರು ಹಾಕಿ ಕೊಟ್ಟ ತತ್ವಗಳನ್ನು ಪಾಲಿಸಿಕೊಂಡು ನಡೆಯಬೇಕು ಎಂದು ಸಮಾಜದ ಹಿರಿಯರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶರಣಪ್ಪ ಬಿರಾದಾರ, ಚಂದ್ರಕಾಂತ ಬಿರಾದಾರ, ರವಿ ಬಿರಾದಾರ, ಪ್ರಕಾಶ ಬಿರಾದಾರ, ಶರಣಪ್ಪ ಬಿರಾದಾರ, ಅಣ್ಣಾರಾವ ಗೋಳೆ, ಶೇಖರ ಪಾಟೀಲ್, ಶರಣಪ್ಪ ಪನಶೇಟ್ಟಿ, ಸಂತೋಷ ಚಿಂಚನಸೂರ, ರಮೇಶ ಬಿರಾದಾರ, ಅರವಿಂದ ಮಂಠಾಳೆ, ಶರಣು ಕಾಳಗಿ, ಚನ್ನಪ್ಪ ಕೊಟಗಿ, ನಾಗಪ್ಪ ಪನಶೇಟ್ಟಿ ಅನೀಲ ಬಿರಾದಾರ, ಹಣಮಂತ ರೇಕಳಕಿ, ಸಂಗಪ್ಪ ಕಾಳಗಿ, ಚಂದ್ರಕಾಂತ ಪನಶೇಟ್ಟಿ, ಶ್ರೀಶೈಲ ಬಿರಾದಾರ, ಯುವಕರು, ಹಿರಿಯರು, ಹೆಣ್ಣು ಮಕ್ಕಳು ಸೇರಿದಂತೆ ಇತರರಿದ್ದರು.