ಕರ ಸೇವಕರಿಗೆ ಹೃದಯ ಸ್ಪರ್ಶಿ ಸನ್ಮಾನ

ಸಂಜೆವಾಣಿ ವಾರ್ತೆ,
ವಿಜಯಪುರ, ಜ.23 :ಶ್ರೀ ಗಜಾನನ ಉತ್ಸವ ಮಹಾಮಂಡಳ ವತಿಯಿಂದ
ಅಯೋಧ್ಯೆ ಭವ್ಯ ರಾಮ ಮಂದಿರ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಇದರ ಅಂಗವಾಗಿ ರಾಮಮಂದಿರದ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಬೃಹತ್ ಗಾತ್ರದ 1್ಠ020 ಅಡಿಯ ಐಇಆ ಪರದೆಯನ್ನು ಹಾಕಿ ಭಕ್ತರಿಗೆ ನೇರ ಪ್ರಸಾರ ಮೂಲಕ ಶ್ರೀರಾಮರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ರಾಮ ನಂದಿರ ಲೋಕಾರ್ಪಣೆ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಮಾಡಲಾಗಿತ್ತು.
ಕನ್ನೂರ ಶಾಂತಿ ಕುಟೀರದ ಪರಮ ಪೂಜ್ಯ ಶ್ರೀ ಕೃಷ್ಣ ಸಂಪಗಾವಕರ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಸಂಸದ ರಮೇಶ ಜಿಗಜಿಣಗಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಅನಿಲ ಅವಳೇ , ಗೋಪಾಲ ಘಟಕಾಂಬಳೆ, ಭೀಮಾಶಂಕರ ಹದನೂರ ಹಾಗೂ ಇತರೆ ಗಣ್ಯರು ಶ್ರೀ ರಾಮನ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು 1992 ರಲ್ಲಿ ಅಯೋಧ್ಯೆಗೆ ಹೋದ ಘಟನೆಗಳನ್ನು ಸವಿವರವಾಗಿ ಹೇಳಿದರು. ಪ್ರಾಣದ ಹಂಗೂ ತೊರೆದು ನಾವು ಮಾಡಿದ ಹೋರಾಟ ಇಂದು ಶ್ರೀರಾಮನ ಭವ್ಯವಾದ ಮಂದಿರ ನಿರ್ಮಾಣವಾಗುವ ಮೂಲಕ ಸಾರ್ಥಕವಾಗಿದೆ. ಇಂದು ಮಂದಿರ ನೋಡುವ ಖುಷಿಗೆ ಪಾರವೇ ಇಲ್ಲ ಎಂದು ಭಾವುಕ ನುಡಿಯನ್ನು ಆಡಿದರು
ನಂತರ ಕರ ಸೇವಕರಿಗೆ ಸನ್ಮಾನ ಸಮಾರಂಭದಲ್ಲಿ ಭಾಗಿಯಾದ ಮಾಜಿ ಸಚಿವ ಪಟ್ಟಣಶೆಟ್ಟಿ ಅವರು, ರೇವಣಸಿದ್ದಪ್ಪ ಮಣೂರು, ಆರ್.ಆರ್. ಪಾಟೀಲ , ಸುರೇಶ ಆಸಂಗಿ ,ಶರಣು ಬೀರಕಬ್ಬಿ , ಸುರೇಶ ಜಮಖಂಡಿ, ಲಕ್ಷ್ಮಣ ಹಜೇರಿ, ಪ್ರಹ್ಲಾದ ಹಜೇರಿ, ಮಲ್ಲಿನಾಥ ಶೇಲಾರ್, ರಮೇಶ ಕೆಂಗಲಗುತ್ತಿ, ರವಿ ಹಾವಣ್ಣನವರ, ಪ್ರದೀಪ ತೇಲಿ, ನಾಗರಾಜ ಹಡಪದ, ಮೋಹನ ಕುಲಕರ್ಣಿ , ಶಾಮ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
ಬಳಿಕ ಬಂದ ಭಕ್ತರಿಗೆ ಸುಮಾರು 150 ಕಿಲೋ ಹಾಲು ಹುಗ್ಗಿ ಮತ್ತು ಸುಮಾರು 300 ಕಿಲೋ ಅನ್ನ ಸಾಂಬಾರದ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಈರಣ್ಣ ಪಟ್ಟಣಶೆಟ್ಟಿ, ನಾಗರಾಜ ಲಂಬು, ಕಲ್ಲುಗೌಡ ಹರನಾಳ , ಸಿದ್ದು ಮಲ್ಲಿಕಾರ್ಜುನಮಠ , ಗುರು ಗೊಲಗೇರಿ , ಸಂತೋಷ ಜಾಧವ, ರಾಘು ಕುಲಕರ್ಣಿ, ರಾಜು ಹುನ್ನೂರ, ಸಂಪತ ಕುವಳ್ಳಿ, ಕಾಂತು ಶಿಂಧೆ , ರಾಜು ಸೂರ್ಯವಂಶಿ, ರಮೇಶ ರೇಷ್ಮಿ, ಅನಿಲ ಉಪ್ಪಾರ, ರವಿ ಮುಕಾರ್ತಿಹಾಳ, ಸಚಿನ ಅಡಕಿ, ಆನಂದ ಮುಚ್ಛಂಡಿ, ನಿಖಿಲ್ ಮ್ಯಾಗೇರಿ, ಅಖಿಲ ಶೀಲವಂತ ಮುಂತಾದ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಹಾಜರಿದ್ದರು.