“ಕರ್ಮ ಸಾಫಲ್ಯಂ ‌” ರಾಷ್ಟ್ರಮಟ್ಟದ ಆಯುರ್ವೇದ ಕಾರ್ಯಾಗಾರ ಆರಂಭ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.29: ನಗರದ  ತಾರಾನಾಥ್ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇಂದು ಮತ್ತು ನಾಳೆ ಹಮ್ಮಿಕೊಂಡಿರುವ  “ಕರ್ಮ ಸಾಪಲ್ಯಂ”  ಎಂಬ ಉತ್ತರ ಬಸ್ತಿ ( ಬಂಜೆತನದಲ್ಲಿ ವಿಶಿಷ್ಟ ಚಿಕಿತ್ಸೆ ) ರಾಷ್ಟ್ರಮಟ್ಟದ ಆಯುರ್ವೇದ ಕಾರ್ಯಗಾರ ಆರಂಭಗೊಂಡಿದೆ.
ಮಹಾರಾಷ್ಟ್ರದ ಪ್ರಖ್ಯಾತ ಆಯುರ್ವೇದ ತಜ್ಞ ಡಾ. ರಾಮದಾಸ್ ಹಾವಡಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ,  ಆಯುರ್ವೇದ ಶಾಸ್ತ್ರದಲ್ಲಿ ಬಂಜೆತನಕ್ಕೆ ಪ್ರಮುಖ ಚಿಕಿತ್ಸಾ ವಿಧಾನ ವಾದ ಉತ್ತರ ವಸ್ತಿ ಚಿಕಿತ್ಸೆಯ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಡಾಕ್ಟರ್ ಸತೀಶ್ ಜಾಲಿಹಾಳ್ ಹಾಗೂ ಅನಿರುದ್ಧ್ ಅವರು  ವಿಷಯ ಮಂಡನೆ ಮಾಡಿದರು.
ಕಾಲೇಜಿನ ಪ್ರಾಂಶುಪಾಲೆ  ಡಾ. ಸಯ್ಯಾದ ಅತ್ತೆರಾ ಫಾತಿಮಾ (ಪ್ರಾಚಾರ್ಯರು) ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ರವಿ ಆರ್ ಚೌಹಾನ್  ಡಾ. ರಾಜೇಶ್ ಸೂಗೂರು, ಡಾ. ಖಂದಾಡೆ ಮನಿಷಾ, ಡಾ. ಶಿಲ್ಪ ಶ್ರೀ ಮೊದಲಾದವರು ಪಾಲ್ಗೊಂಡಿದ್ದರು.
ರಾಜ್ಯದ ವಿವಿಧ ಭಾಗಗಳಿಂದ ನುರಿತ ತಜ್ಞವೈದ್ಯರು, ನೂರಕ್ಕೂ ಹೆಚ್ಚು ಸ್ನಾತಕ ವೈದ್ಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.
ಡಾ. ದೊಡ್ಡಬಸಯ್ಯ ಕೆಂಡದಮಠ ಕಾರ್ಯಕ್ರಮದ ಸಂಯೋಜಕರಾಗಿದ್ದಾರೆ.

One attachment • Scanned by Gmail