ಕರ್ಮಭೂಮಿ ಜಾನಪದ ಕಲಾ ಸಂಘ ವತಿಯಿಂದ ಜಾನಪದ ಉತ್ಸವ

ಬೀದರ:ಜ.19:ಕರ್ಮಭೂಮಿ ಜಾನಪದ ಕಲಾ ಸಂಘ ಚೊಂಡಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೀದರ ಇವರುಗಳ ಸಂಯುಕ್ತಾಶ್ರಯದಲ್ಲಿ ಬೀದರ ನಗರದ ಡಾ. ಬಿ.ಆರ್. ಅಂಬೇಡ್ಕರ ಭವನ, ಜೈಭೀಮ ನಗರ ನೌಬಾದ ಬೀದರನಲ್ಲಿ ಜನೇವರಿ 17 ರಂದು ಬೀದರ ತಾಲೂಕು ಜಾನಪದ ಉತ್ಸವ ಕಾರ್ಯಕ್ರಮ ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟಕರಾಗಿ ರಹೀಂ ಖಾನ್ ಶಾಸಕರು ಬೀದರ ಉತ್ತರ, ಅಧ್ಯಕ್ಷತೆ ಅರವಿಂದಕುಮಾರ ಅರಳಿ, ಮಾನ್ಯ ಶಾಸಕರು, ವಿಧಾನ ಪರಿಷತ್ತು, ಬೆಂಗಳೂರು, ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಿಬ್ಬಂದಿ ವರ್ಗದವರು, ಎಂ.ಜಿ. ದೇಶಪಾಂಡೆ ಸಾಹಿತಿಗಳು, ದಿಲಿಪ ಭೋಸ್ಲೆ, ಸುಧಾಕರ ರಾಜಗೀರಾ, ದಯಾನಂದ ನೌಲೆ, ಪ್ರೇಮಕುಮಾರ ಕಾಂಬಳೆ, ರಾಮಚಂದ್ರ ಅಮಲಾಪೂರ ಮುಖಂಡರು ಜೈಭೀಮ ನಗರ ನೌಬಾದ ಬೀದರ, ವಿಶೇಷ ಉಪನ್ಯಾಸಕರಾಗಿ ಎಂ.ಜಿ. ಗಂಗನಪಳ್ಳಿ ಭಾಗವಹಿಸಿದರು.
ಪ್ರಾಸ್ತಾವಿಕ ನುಡಿ ಶ್ರೀ ಶಂಕರ ಚೊಂಡಿ ಅಧ್ಯಕ್ಷರು, ಕರ್ಮಭೂಮಿ ಜಾನಪದ ಕಲಾ ಸಂಘ (ರಿ) ಚೊಂಡಿ, ಕಾರ್ಯಕ್ರಮದ ನಿರೂಪಣೆಯನ್ನು ದಯಾನಂದ ನೌಲೆ, ಕಾರ್ಯಕ್ರಮದ ವಂದನಾರ್ಪಣೆಯನ್ನು ಶ್ರೀಮತಿ ಡಿಲೈಮಾ ಮಾಡಿದರು.
ಈ ಸಂದರ್ಭದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದ್ದು, ಪ್ರಾರ್ಥನಾ ಗೀತೆ ಪ್ರಹ್ಲಾದ ಮತ್ತು ತಂಡ ಬೀದರ, ಜಾನಪದ ಶರೀ ವಿಶ್ವನಾಥ ಸಂಗೋಳಗಿ ಮತ್ತು ತಂಡ, ತೊಟ್ಟಿಲು ಪದ ಶ್ರೀಮತಿ ಲಕ್ಷ್ಮಿ ಮತ್ತು ತಂಡ ಚಿದ್ರಿ, ಬುಲಾಯಿ ಪದ ಶ್ರೀಮತಿ ಶ್ರೀದೇವಿ ಮತ್ತು ತಂಡ ಬೀದರ, ಬೀಸುವ ಪದಗಳು ಶ್ರೀಮತಿ ಚಂದ್ರಮ್ಮ ಮತ್ತು ತಂಡ ಯರನಳ್ಳಿ, ಕೋಲಾಟ ಶ್ರೀ ರಘುನಾಥ ಮತ್ತು ತಂಡ ನಿರ್ಣಾ, ಭೀಮ ಗೀತೆ ಶ್ರೀಮತಿ ಮಲ್ಲಮ್ಮ ಮತ್ತು ತಂಡ ಜೈಭೀಮನಗರ, ಸೋಬಾನ ಪದ ಶ್ರೀಮತಿ ಅಂಜಮ್ಮ ಮತ್ತು ತಂಡ ತಡಪಳ್ಳಿ, ತತ್ವ ಪದ ಬಾಜಿರಾವ ಮತ್ತು ತಂಡ ವಿದ್ಯಾನಗರ, ಬುಲಾಯಿ ಪದ ಶ್ರೀಮತಿ ರೇಷ್ಮಾ ಮತ್ತು ತಂಡ ಬೀದರ, ಚರ್ಮವಾದ್ಯ ಕಲ್ಲಪ್ಪ ಮತ್ತು ತಂಡ ಚೊಂಡಿ ಹಾಗೂ ಹಂತಿ ಪದ ರಾಜಪ್ಪ ಮತ್ತು ತಂಡ ಇಸ್ಲಾಂಪೂರ ನೆರವೇರಿಸಿಕೊಡಲಿದ್ದಾರೆ.