ಕರ್ಫ್ಯೂ ವೇಳೆ ಸಂಚಾರ ನಿಯಂತ್ರಣಕ್ಕೆ ಬಿಗಿ ಕ್ರಮ

ದಾವಣಗೆರೆ,ಮೇ.01: ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಜನಜೀವನ 4 ತಾಸುಗಳಿಗೆಸೀಮಿತಗೊಂಡಿದ್ದು, ಇರುವ ಅಲ್ಪ ಸಮಯದಲ್ಲೇ ನಾಗರೀಕರು ತಮ್ಮ ಅಗತ್ಯಕೆಲಸಗಳನ್ನು ಪೂರೈಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಇನ್ನೂ ಹತ್ತು ಗಂಟೆಯ ಬಳಿಕ ಜಾರಿಯಾಗುವ ಜನತಾ ಕರ್ಫ್ಯೂ ವೇಳೆಯಲ್ಲಿ ಸಂಚರಿಸುವವರನ್ನು ನಿಯಂತ್ರಿಸಲು ಪೊಲೀಸರು ಬಿಗಿ ಕ್ರಮಕ್ಕೆ ಮುಂದಾಗಿದ್ದಾರೆ.
ಹೌದು… ನಗರದಲ್ಲಿ ಜನತಾ ಕರ್ಫ್ಯೂ ಜಾರಿಯಾದ ಮೊದಲ ದಿನ ಅಂಗಡಿ-ಮುಂಗಟ್ಟು ಬಂದ್ ಜನರು ಮನೆಯಿಂದ ಹೊರ ಬರದ ಕಾರಣ ದೇವನಗರಿ ಸ್ತಬ್ಧಗೊಂಡಿತ್ತು. ಆದರೆ, ಮಾರನೆಯ ದಿನದಿಂದ ನಿನ್ನೆಯ ವರೆಗೆ ಕರ್ಫ್ಯೂ ಸಮಯದಲ್ಲಿ ಜನರ ಮತ್ತು ವಾಹನಗಳ ಓಡಾಟ ತುಸು ಹೆಚ್ಚಾಗಿ ಕಂಡು ಬಂದಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಹೆಚ್ಚಾಗಿದ್ದರಿಂದ ರಸ್ತೆಯಲ್ಲಿ ಅನಗತ್ಯವಾಗಿ ಓಡಾಡುವವರನ್ನು ನಿಯಂತ್ರಿಸುವ ಸಲುವಾಗಿ ನಗದಲ್ಲಿಂದಿನಿAದ ಪೊಲೀಸರು ಬಿಗಿ ಕ್ರಮಕ್ಕೆ ಕೈಗೊಳ್ಳುತ್ತಿರುವ ದೃಶ್ಯ ಅಲ್ಲಲ್ಲಿ ಕಂಡು ಬಂತು.
ಅಗತ್ಯ ವಸ್ತುಗಳಾದ ಹಾಲು, ಹಣ್ಣು, ದಿನಸಿ, ಪೇಪರ್, ಮದ್ಯ ಖರೀದಿಗೆ ಅವಕಾಶ ಕಲ್ಲಿಸಿದ್ದ ಬೆಳಿಗ್ಗೆ 6ರಿಂದ 10 ಗಂಟೆಯೊಳಗಿನ ಅವಧಿಯಲ್ಲಿ ಸಾರ್ವಜನಿಕರು ತಮಗೆ ಜೀವನ ನಡೆಞಸಲು ಬೇಕಾದ ಅವಶ್ಯ ವಸ್ತುಗಳನ್ನು ಖರೀದಿಸಿದರು. ಹತ್ತು ಗಂಟೆಯಾದರೂ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟು ಮುಚ್ಚಲು ಮುಂದಾಗಿರಲಿಲ್ಲ. ಹೀಗಾಗಿ ಪೊಲೀಸರು ಲಾಠಿ ಹಿಡಿದು ಅಂಗಡಿಗಳನ್ನು ಬಂದ್ ಮಾಡಿಸಿದರು.
ಇನ್ನೂ ಜನತಾ ಕರ್ಫ್ಯೂ ಜಾರಿಯಾದ ಹತ್ತು ಗಂಟೆ ಬಳಿಕವೂ ಸಾರ್ವಜನಿಕರು ರಸ್ತೆಗಳಲ್ಲಿ ಓಡಾಡುತ್ತಿರುವುದನ್ನು ಕಂಡ ಪೊಲೀಸರು, ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ನಿಂತು ಕರ್ಫ್ಯೂ ವೇಳೆಯಲ್ಲೂ ಓಡಾಡುತ್ತಿರುವವರನ್ನು ತಡೆದು ವಿಚಾರಿಸಿ, ಅನಗತ್ಯವಾಗಿ ಓಡಾಡುತ್ತಿರುವವರನ್ನು ಎಚ್ಚರಿಸಿ ಮನೆಗೆ ಕಳುಹಿಸಿದರು. ಇನ್ನೂ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುತ್ತಿದ್ದರು. ಅಲ್ಲದೆ, ಬೈಕ್ ಮತ್ತು ಕಾರುಗಳಲ್ಲಿ ಓಡಾಡುತ್ತಿರುವವರನ್ನು ತಡೆದು ಕಾರಣ ವಿಚಾರಿಸಿ, ವಾಹನಗಳ ದಾಖಲೆ ತಪಾಸಣೆ ನಡೆಸಿ ದಾಖಲೆ ಸರಿಯಾಗಿ ಇಲ್ಲದಿದ್ದರೆ ಮತ್ತು ಹೆಲ್ಮೇಟ್ ಧರಿಸದವರಿಗೆ ದಂಡ ವಿಧಿಸಿದರು.
ಪೊಲೀಸರು ಕೈ ಅಡ್ಡ ಅಂದಾಗ ನಿಲ್ಲಿಸದ ವಾಹನ ಸವಾರರನ್ನು ಬೆನ್ನು ಹತ್ತಿ ಹಿಡಿಯುತ್ತಿದ್ದ ದೃಶ್ಯಗಳು ಸಹ ಅಲ್ಲಲ್ಲಿ ಕಂಡು ಬಂತು. ಕೆಲೆವೆಡೆ ಅನಗತ್ಯ ಸಂಚಾರ ತಡೆಯಲು ಲಾಠಿ ಬೀಸಿದ ಘಟನೆಗಳು ಸಹ ವರಿಯಾಗಿವೆ.