ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ

ಜಗಳೂರು.ಏ.೨೨:  ಎರಡನೇ ಅಲೆ ಕೊರೋನ ಪ್ರಾರಂಭವಾಗಿದ್ದು ಎಲ್ಲರೂ ಮಾಸ್ಕ ಗಳನ್ನು ಹಾಕಿಕೊಳ್ಳಬೇಕು ಬಟ್ಟೆ, ಕಿರಣಿ ಅಂಗಡಿ ಮತ್ತು ಹೋಟೆಲ್ ಗಳಲ್ಲಿ ಬೇಕರಿಗಳಲ್ಲಿ ಯಾರು ಬಂದರೆ ಮಾಸ್ಕ್ ಗಳನ್ನು ಹಾಕಿದರೆ ಮಾತ್ರ ವಸ್ತುಗಳನ್ನು ನೀಡಿ ಇಲ್ಲವಾದರೆ ನೀಡಬೇಡಿ ಎಂದು ಪಿ.ಎಸ್.ಐ ಸಂತೋಷ್ ಬಾಗೋಜಿ ತಿಳಿಸಿದರು.ಪಟ್ಟಣ ಪಂಚಾಯಿತಿ ವತಿಯಿಂದ ಮುಖ್ಯ ಅಧಿಕಾರಿ ರಾಜು ಡಿ ಬಣಕರ್  ಹಾಗೂ ಪೊಲೀಸ್ ಇಲಾಖೆ ಆರಕ್ಷಕ ಉಪ ನಿರೀಕ್ಷಕರಾದ ಸಂತೋಷ್ ಬಾಗೋಜಿ ಅವರು ಕೊರೊನಾ ವೈರಸ್ ಜಾಗೃತಿ ಮೂಡಿಸುವ ಮೂಲಕ ಜಗಳೂರು ಪಟ್ಟಣದ ಬಟ್ಟೆ ಅಂಗಡಿಗಳಿಗೆ ಭೇಟಿ ನೀಡಿ ಮೊದಲನೇ ಹಂತದಲ್ಲಿ ಮಾಸ್ಕ ಹಾಕದವರಿಗೆ ದಂಡವನ್ನು ಹಾಕಲಾಗುತ್ತದೆ.ನಂತರ ಎರಡನೆಯ ಬಾರಿ ಮಾಸ್ಕ್ ಹಾಕದಿದ್ದರೆ ಕೇಸ್ ದಾಖಲುಮಾಡ
ಲಾಗುತ್ತದೆ ಎಂದು ಪೊಲೀಸ್ ಇಲಾಖೆಯವರು ತಿಳಿಸಿದರು.ನಂತರ ಪ.ಪಂ ಮುಖ್ಯ ಅಧಿಕಾರಿ ರಾಜು.ಡಿ ಬಣಕಾರ್ ಮಾತನಾಡಿ ಪ್ರತಿಯೊಂದು ಬಟ್ಟೆ ಅಂಗಡಿಗಳಲ್ಲಿ ಕಿರಾಣಿ ಅಂಗಡಿಗಳಲ್ಲಿ ಸ್ಯಾನಿಟೈಸರ್ ಕಡ್ಡಾಯವಾಗಿ ಇರಬೇಕು ಬೀದಿ ಬದಿ ವ್ಯಾಪಾರ ಮಾಡುವ ಪಾನಿಪುರಿ ಅಂಗಡಿಗಳು  ಐಸ್ ಕ್ರೀಮ್ ಅಂತವರಿಗೆ ಯಾವುದೇ ವಸ್ತುಗಳನ್ನು ಹೊರಗಡೆ ಇಡಬೇಡಿ ರಸ್ತೆ ಮೇಲೆ ಓಡಾಡುವಂತಹ ವಾಹನಗಳ ತಿನ್ನುವಂತಹ ವಸ್ತುಗಳಿಗೆ ಧೂಳು ಹತ್ತುತ್ತದೆ ಎಂದು ತಿಳಿಸಿದರು ರಸ್ತೆಗಳಲ್ಲಿ  ಓಡಾಡುವಂತಹ ಸಾರ್ವಜನಿಕರು  ಮಾಸ್ಕ ಗಳನ್ನು ಹಾಕಿಕೊಳ್ಳಬೇಕು ಮತ್ತು ಇದೇ ಸಂದರ್ಭದಲ್ಲಿ 25 ಕೆಜಿ ಪ್ಲಾಸ್ಟಿಕ್ ಮತ್ತು 5800 ರೂಪಾಯಿಗಳನ್ನು ದಂಡ ಹಾಕಲಾಗಿದೆ ಎಂದು  ತಿಳಿಸಿದರು.
ರಾತ್ರಿ 9:00 ಗಂಟೆಯಿಂದ ಬೆಳಿಗ್ಗೆ 6:00 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿ
ರುತ್ತದೆ ಆದ್ದರಿಂದ ಸಾರ್ವಜನಿಕರು ಪಟ್ಟಣದಲ್ಲಿ ಅನವಶ್ಯಕವಾಗಿ ಯಾರು ತಿರುಗಾಡ ಬಾರದು ಹಾಗೇನಾದರೂ ಓಡಾಟ ಮಾಡಿದ್ದಲ್ಲಿ ಅಂಥವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗುತ್ತದೆ ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ  ಪ.ಪಂ ಮುಖ್ಯ ಅಧಿಕಾರಿ ರಾಜು.ಡಿ ಬಣಕಾರ್ ಪ.ಪಂ ಕಂದಾಯ ನಿರೀಕ್ಷಕರಾದ ಸಂತೋಷ್ ಪೊಲೀಸ್ ಸಿಬ್ಬಂದಿಗಳು ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಇತರರು ಭಾಗವಹಿಸಿದ್ದರು.