ಕರ್ಫ್ಯೂಗೆ ಮಸ್ಕಿಯಲ್ಲಿ ಉತ್ತಮ ಬೆಂಬಲ

ಮಸ್ಕಿ.ಏ.೨೯- ಕಿಲ್ಲರ್ ಕೊರೋನಾ ಕಟ್ಟಿ ಹಾಕಲು ಸರಕಾರ ೧೪ ದಿನಗಳ ವರೆಗೆ ಕರ್ಫ್ಯೂ ವಿಧಿಸಿರುವ ಹಿನ್ನೆಲೆಯಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿದ್ದ ಕಾರಣ ಬಸ್‌ಗಳು ರಸ್ತೆಗೆ ಇಳಿಯ ಲಿಲ್ಲ ಹೀಗಾಗಿ ಹೊಸ, ಹಳೆ ಬಸ್ ನಿಲ್ದಾಣಗಳ ಬಳಿ ಪ್ರಯಾಣಿಕರಿಲ್ಲದೆ ಬೀಕೋ ಎನ್ನುತಿದ್ದವು ಬೇರೆನಗರ ಪ್ರದೇಶಗಳಿಂದ ಬಂದಿದ್ದ ಜನ ಆಟೋ, ಟಂಟಂಗಳ ಮೂಲಕ ತಮ್ಮ ಗ್ರಾಮಗಳನ್ನು ಸೇರಿಕೊಂಡರು. ಕರ್ಫ್ಯೂ ಹಿನ್ನೆಲೆಯಲ್ಲಿ ಬೆಳಗ್ಗೆ ೬ ರಿಂದ ೧೦ ವರೆಗೆ ಸಾರ್ವಜನಿಕರಿಗೆ ಕಿರಾಣಿ, ತರಕಾರಿ ಇನ್ನಿತರ ಅಗತ್ಯ ವಸ್ತುಗಳ ಖರೀದಿಗೆ ಅನುವು ಮಾಡಿ ಕೊಡ ಲಾಗಿತ್ತು ಅಗತ್ಯ ವಸ್ತುಗಳ ಖರೀದಿ ಸಮಯ ಕೊನೆ ಗೊಂಡ ನಂತರ ಪುರಸಭೆ ಅಧಿಕಾರಿಗಳು ರಸ್ತೆಗೆ ಇಳಿದು ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿಸಿದರು ೧೦ ಗಂಟೆ ನಂತರ ಅಂಗಡಿ ತೆರೆದಿದ್ದ ವರ್ತಕರಿಗೆ ಬುದ್ದಿ ಮಾತು ಹೇಳಿ ಅಂಗಡಿಗಳನ್ನು ಲಾಕ್ ಮಾಡಿಸಿದರು. ಬಿಸಿಲು ಪ್ರತಾಪ ಹೆಚ್ಚಾದ ಕಾರಣ ಜನರು ಮನೆ ಬಿಟ್ಟು ಹೊರ ಬರಲಿಲ್ಲ ಮಧ್ಯಾಹ್ನ ನಂತರ ಮುಖ್ಯ ಮಾರು ಕಟ್ಟೆಗಳ ರಸ್ತೆಗಳು ಭಣ ಗುಡುತ್ತಲಿದ್ದವು ಮೊದಲ ದಿನದ ಕರ್ಫ್ಯೂಗೆ ಮಸ್ಕಿ ಮಂದಿ ಯಿಂದ ಉತ್ತಮ ಬೆಂಬಲ ವ್ಯಕ್ತವಾಯಿತು ಉಪ ಚುನಾವಣೆ ನಂತರ ಕೋವಿಡ್ ಪ್ರಕರಣಗಳು ಕ್ಷೇತ್ರದ ನಾನಾ ಗ್ರಾಮಗಳಲ್ಲಿ ಕಂಡು ಬರುತ್ತಿರುವ ಕಾರಣ ಜನ ಆತಂಕ ಗೊಂಡಿದ್ದಾರೆ. ರಾಯಚೂರಲ್ಲಿ ಮೇ ೨ ರಂದು ಉಪ ಚುನಾವಣೆ ಮತ ಎಣಿಕೆ ಕಾರ್ಯ ನಡೆಯಲಿದೆ ಮತ ಎಣಿಕೆ ಏಜೆಂಟ್ ನೇಮಕ ಗೊಂಡಿರುವ ಎಲ್ಲ ಪಕ್ಷಗಳ ೧೧೮ ಜನ ಮತ ಎಣಿಕೆ ಏಜೆಂಟ್‌ಗಳ ಗಂಟಲು ದ್ರವ ಪರೀಕ್ಷೆ ಡಿಗ್ರಿ ಕಾಲೇಜು ಬಳಿ ಮಾಡಲಾಯಿತು ಕೋವಿಡ್ ಪರೀಕ್ಷೆ ನೆಗೆಟಿವ್ ವರದಿ ಬಂದರೆ ಮತ ಎಣಿಕೆ ಏಜೆಂಟ್‌ಗಳಿಗೆ ಜಿಲ್ಲಾಡಳಿತ ಪಾಸ್ ನೀಡಲಿದೆ.