ಕರ್ಪೂ ; ಕುರುಗೋಡಿನಲ್ಲಿ ವ್ಯಾಪಕ ಬೆಂಬಲ

ಕುರುಗೋಡು.ಏ.25 : ಮಹಾಮಾರಿ ಕೋರೋನಾ ನಿಯಂತ್ರಣಸಲುವಾಗಿ ರಾಜ್ಯ ಸರ್ಕಾರ ಹೊರಡಿಸಿರುವ ವಾರಾಂತ್ಯದ ಕರ್ಪೂ ಘೋಷಣೆಗೆ ಕಳೆದ 2ದಿನಗಳಿಂದ ಕುರುಗೋಡು ಜನರಿಂದ ವ್ಯಾಪಾಕವಾಗಿ ಬೆಂಬಲ ವ್ಯಕ್ತವಾಗಿದೆ. ಕರ್ಪೂನಿಂದಾಗಿ ಕಂಪ್ಲಿರಸ್ತೆ, ಮುಖ್ಯವ್ರುತ್ತ, ಗೆಣಿಕೆಹಾಳುರಸ್ತೆ, ಬಳ್ಳಾರಿರಸ್ತೆ,ತೇರುಬೀದಿರಸ್ತೆಗಳು ಬಿಕೋ ಎನ್ನುತ್ತಿವೆ.
ಈ ಕುರಿತು ಕುರುಗೋಡು ಸಿಪಿಐ ಚಂದನ್‍ಗೋಪಾಲ್ ಮಾತನಾಡಿ, ನಿತ್ಯ ಅವಶ್ಯಕತೆ ಇರುವ ಮೆಡಿಕಲ್‍ಶಾಪ್, ಹಾಲು ಹೊರತುಪಡಿಸಿ ಉಳಿದೆಲ್ಲಾ ಅಂಗಮುಂಗಟ್ಟುಗಳ ಮಾಲಿಕರು ತಮ್ಮ ವ್ಯವಹಾರ-ವಹಿವಾಟನ್ನು ಬಂದ್ ಮಾಡಿ ಕರ್ಪೂಗೆ ಬೆಂಬಲವ್ಯಕ್ತಪಡಿಸಿದ್ದಾರೆ, ಜೊತೆಗೆ ನಾಗರಿಕರು ಕರ್ಪೂವೇಳೆಯಲ್ಲಿ ಅನಗತ್ಯವಗಿ ಅಡ್ಡಾ-ದಿಡ್ಡಿಯಾಗಿ ಸಂಚಾರ ಮಾಡಬಾರದೆಂದು ಮನವಿಮಾಡಿದರು. ಒಂದು ವೇಳೆ ಸಂಚಾರಮಾಡಿದರೆ ದಂಡ ಖಚಿತ ಎಂದು ಪುನರುಚ್ಚರಿಸಿದರು.
ಕುರುಗೋಡು ಪಿಎಸ್‍ಐ ಮೌನೇಶರಾಥೋಡ್ ಮಾತನಾಡಿ, ಜನರ ಆರೋಗ್ಯದ್ರುಷ್ಟಿಯಿಂದ ಕರ್ಪೂವೇಳೆಯಲ್ಲಿ ಅನಗತ್ಯವಾಗಿ ಸಂಚಾರ ಮಾಡುವವರೆಗೆ ಮಾತ್ರ ದಂಡ ವಿಧಿಸಲಾಗುವುದು ಎಂದು ನುಡಿದರು. ಪ್ರೋಬೆಷನರಿ ಪಿಎಸ್‍ಐ.ಶಾಂತಮೂರ್ತಿ, ಸೇರಿದಂತೆ ಕುರುಗೋಡು ಪೋಲೀಸರು ಇದ್ದರು.
ಮಜ್ಜಿಗೆ ವಿತರಣೆ; ಕರ್ಫೂವೇಳೆಯಲ್ಲಿ ಉರಿಬಿಸಲನ್ನು ಲೆಕ್ಕಿಸದೇ ಕರ್ತವ್ಯ ಮಾಡುವ ಪೋಲೀಸ್‍ಸಿಬ್ಬಂದಿ, ಪುರಸಭೆ ಸಿಬ್ಬಂದಿಗೆ ಸಮಜದ ಸೇವಕ ಚಾನಾಳುಅಂಬರೇಷ್, ಮತ್ತು ನೇಕಾರ ಸಮಾಜದ ಅದ್ಯಕ್ಷ ಚೇಗೂರುಷಣ್ಮುಖಪ್ಪನವರು ಮಜ್ಜಿಗೆ ನೀಡಿ ಮಾನವೀಯತೆ ಮೆರೆದರು.