ಕರ್ನಾಟಕ 50 ಸಂಭ್ರಮದ ಆಚರಣೆಗೆ ನಿರ್ಧಾರಕಾಟಾಚಾರಕ್ಕೆ ಸಭೆ ನಡೆಸಿದ ಆಡಳಿತಾಧಿಕಾರಿ ಎಂದು ಕನ್ನಡಾಭಿಮಾನಿಗಳ ಆಕ್ರೋಶ

ಔರಾದ್ : ಜ.17:ಕರ್ನಾಟಕ ನಾಮಕರಣ 50ರ ಸಂಭ್ರಮಾಚರಣೆ ಅಂಗವಾಗಿ ಡಿಸೆಂಬರ್ 20ರಂದು ಪಟ್ಟಣದಲ್ಲಿ ‘ಕನ್ನಡ ಜ್ಯೋತಿ ರಥಯಾತ್ರೆಗೆ’ ಸ್ವಾಗತಿಸಿ ಸಮಾರಂಭ ಆಯೋಜಿಸಲಾಗಿದೆ ಎಂದು ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಹೇಳಿದರು.

ತಹಸೀಲ್ ಕಛೇರಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಅಧಿಕಾರಿಗಳ ಹಾಗೂ ಕನ್ನಡಪರ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಜೊತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅಂದು ಕೌಠಾ ಗ್ರಾಮದಲ್ಲಿ ರಥಯಾತ್ರೆಗೆ ಬರಮಾಡಿಕೊಳ್ಳಲಾಗುವುದು.

ಔರಾದ್ ರಸ್ತೆ ಮಧ್ಯದಲ್ಲಿರುವ ಲಾಧಾ, ಸಂತಪೂರ, ಎಕಲಾರ ಗ್ರಾಪಂಗಳಿಂದ ಜ್ಯೋತಿ ರಥಯಾತ್ರೆಗೆ ಸ್ವಾಗತಿಸುವಂತೆ ತಾಪಂ ಇಒ ಅವರಿಗೆ ತಿಳಿಸಲಾಗಿ, ಔರಾದ್ ಪಟ್ಟಣದಲ್ಲಿ ಭವ್ಯವಾದ ಮೆರವಣಿಗೆ ನಡೆಸಲು ನಿರ್ಧರಿಸಲಾಯಿತು.

ಮೆರವಣಿಗೆಯಲ್ಲಿ ಆಕರ್ಷಣೀಯವಾಗಿ ಸಾವಿರ ಮೀಟರ್ ಉದ್ಧದ ಕನ್ನಡ ಧ್ವಜ, ಎರಡು ಮಹಿಳಾ ಕಲಾವಿದರ ತಂಡಗಳು ಬವಾಗವಹಿಸಲಿದ್ದು, ಸ್ಥಳಿಯ ಶಾಲಾ ಕಾಲೇಜು ಮಕ್ಕಳು ಪಾಲ್ಗೊಳ್ಳಲು ಬಿಇಒ ಅವರಿಗೆ ಸೂಚಿಸಲಾಯಿತು.

ಕನ್ನಡಾಂಬೆ ವೃತ್ತದಿಂದ ಅಮರೇಶ್ವರ ದೇವಸ್ಥಾನ ವರೆಗೆ ಮೆರವಣಿಗೆ ನಡೆಸಿ ಅಮರೇಶ್ವರ ಕಲ್ಯಾಣ ಮಂಟಪದಲ್ಲಿ ವೇದಿಕೆ ಕಾರ್ಯಕ್ರಮ ಏರ್ಪಡಿಸಲಾಗುವುದು. ನಾಡು ನುಡಿ ಕುರಿತು ಉಪನ್ಯಾಸಕ್ಕೆ ಶಿಕ್ಷಕ ಶಿವಲಿಂಗ ಹೇಡೆ ಅವರ ಹೆಸರು ಅಂತಿಮಗೊಳಿಸಲಾಯಿತು.

ಕಲ್ಯಾಣ ಮಂಟಪದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಆಯೋಜಿಸಿ ರಥಯಾತ್ರೆಗೆ ಭವ್ಯವಾದ ಸ್ವಾಗತ ಕೋರಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲು ತಾಲೂಕಿನ ಹಿರಿಯ ಸಾಹಿತಿಗಳು, ಸಂಘಟಕರು, ಚಿಂತಕರು, ಕನ್ನಡಪರ ಹೋರಾಟಗಾರರು ಸಹಕರಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಶಾಲಿವಾನ ಉದಗಿರೆ, ದಾಸ ಸಾಹಿತ್ಯ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಬಿ.ಎಂ ಅಮರವಾಡಿ, ಜಾನಪದ ಪರಿಷತ್ ಅಧ್ಯಕ್ಷ ಸಂಜೀವಕುಮಾರ್ ಜುಮ್ಮಾ, ಕರವೇ ಅಧ್ಯಕ್ಷ ಅನೀಲ ದೇವಕತೆ, ರತ್ನದೀಪ ಕಸ್ತೂರೆ, ಸುನೀಲ ಮಿತ್ರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


ನಾಮಕಾವಾಸ್ತೆ ಸಭೆ ಕನ್ನಡಾಭಿಮಾನಿಗಳ ಆಕ್ರೋಶ

ಔರಾದ್ : ತಹಸೀಲ್ ಕಚೇರಿಯಲ್ಲಿ ಕರ್ನಾಟಕ ನಾಮಕರಣ 50ರ ಸಂಭ್ರಮಾಚರಣೆ ಕುರಿತು ಮಂಗಳವಾರ ನಡೆದ ಸಭೆ ನಾಮಕಾವಾಸ್ತೆ ನಡೆದಿದೆ. ಸಭೆಯಲ್ಲಿ ಕನ್ನಡಾಭಿಮಾನಿಗಳಿಗೆ, ಕನ್ನಡಪರ ಸಂಘಟನೆಗಳಿಗೆ ಆಹ್ವಾನಿಸಿಲ್ಲ ಎಂದು ಕೆಲವರು ಸಭೆಯಲ್ಲಿಯೇ ಆಕ್ರೋಶ ಹೊರಹಾಕಿದರು. ಕರ್ನಾಟಕ ನಾಮಕರಣ 50ರ ಸಂಭ್ರಮ ಎಲ್ಲರ ಮನೆ ಹಬ್ಬವಾಗಿ ಆಚರಣೆ ಮಾಡಬೇಕಿದೆ. ಆದರೆ ಸಭೆಯಲ್ಲಿ ತಾಲೂಕು ಮಟ್ಟದ ಕೆಲ ಜನ ಅಧಿಕಾರಿಗಳು ಮಾತ್ರ ಹಾಜರಾಗಿದ್ದಾರೆ. ಇನ್ನೂ 3-4 ಸಂಘಟನೆಯರು ಮಾತ್ರ ಭಾಗವಹಿಸಿದ್ದಾರೆ ಎಂದು ಕನ್ನಡ ಹೋರಾಟರಾದ ಸುನಿಲ ಮೇತ್ರಾ ತಾಲೂಕು ಆಡಳಿತ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು.

ತಹಸೀಲ್ದಾರ ಅವರು ಕೆಲವರ ಮಾತುಗಳು ಕೇಳಿಕೊಂಡು ಕೆಲಸ ಮಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಪತ್ರಕರ್ತರಿಗೂ ಆಹ್ವಾನಿಸಿ ಎಂದು ದೂರಿದರು.

ಈ ವೇಳೆ ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಮಾತನಾಡಿ, ಸಭೆಯಲ್ಲಿ ಕೆಲ ದೋಷಗಳು ನಡೆದಿವೆ. ಆದರೆ ಇನ್ಮೂಂದು ಇಂತಹ ದೋಷಗಳು ನಡೆಯದಂತೆ ನೋಡಿಕೊಳ್ಳುವದಾಗಿ ಮನವಲಿಸುವಲ್ಲಿ ಯಶಸ್ವಿಯಾದರು.