ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಕೊರೋನಾ ಲಸಿಕೆ ನೀಡಿಕೆ ಹೆಚ್ಚಳ

ನವದೆಹಲಿ, ಮಾ.27- ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ 8 ರಾಜ್ಯದಲ್ಲಿ ಹೆಚ್ಚು ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚಿನ ಮಂದಿಗೆ ಲಸಿಕೆ ನೀಡಲಾಗಿದೆ.ಈ ರಾಜ್ಯಗಳು ಸೇರಿದಂತೆ 8 ರಾಜ್ಯದಲ್ಲಿ ಒಟ್ಟಾರೆ ಲಸಿಕೆಯ ಶೇ.60 ರಷ್ಡು ಲಸಿಕೆ ಹಾಕಲಾಗಿದೆ ಎಂದು ತಿಳಿಸಲಾಗಿದೆ.

ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ತಲಾ 50 ಲಕ್ಷ ಮಂದಿಗೆ ಕೊರೋನಾ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

  • ಮಹಾರಾಷ್ಟ್ರ ದಲ್ಲಿ 54 ಲಕ್ಷ ಮಂದಿಗೆ ಕೊರೋನಾ ಲಸಿಕೆ ಹಾಕಲಾಗಿದ್ದು ದೇಶದ ಒಟ್ಟಾರೆ ಲಸಿಕೆಯಲ್ಲಿ ಶೇ.9.46 ರಷ್ಟು ಪ್ರಗತಿ ಸಾಧಿಸಿದೆ.
  • ರಾಜಸ್ಥಾನ ದಲ್ಲಿ 53 ಲಕ್ಷ ಮಂದಿ ಗೆ ಲಸಿಕೆ ಹಾಕಲಾಗಿದೆ‌ ದೇಶದಲ್ಲಿ ಲಸಿಕೆ ಹಾಕುವುದರಲ್ಲಿ ಶೇ.9.13 ರಷ್ಟು ಇದೆ‌
  • ಉತ್ತರ ಪ್ರದೇಶದಲ್ಲಿ 52 ಲಕ್ಷ ಮಂದಿಗೆ ಲಸಿಕೆ ನೀಡಿಕೆ ಒಟ್ಟರೆ ಶೇ.9.02 ರಷ್ಟು ಪ್ರಗತಿ ಕಂಡಿದೆ.
  • ಗುಜರಾತ್ 50 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ.ಶೇ.8.45 ರಷ್ಟು ಲಸಿಕೆ ಹಾಕಲಾಗಿದೆ
  • ಪಶ್ಚಿಮ ಬಂಗಾಳ 46 ಲಕ್ಷ ಮಂದಿಗೆ‌ ಲಸಿಕೆ: ಶೇ.8.07 ರಷ್ಟು ಲಸಿಕೆ
  • ಕರ್ನಾಟಕದಲ್ಲಿ 32 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ‌ ಒಟ್ಟಾರೆ ಶೇ.5.65 ಪಾಲು ಹೊಂದಿದೆ.
  • ಮದ್ಯ ಪ್ರದೇಶದಲ್ಲಿ 30 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ.
  • ಕೇರಳದಲ್ಲಿ 29 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಒಟ್ಟಾರೆ ಪೈಕಿ ಶೇ. 5 ರಷ್ಟು ಪಾಲು ಹೊಂದಿದೆ.

ದೇಶದಲ್ಲಿಯೇ ನಿತ್ಯ ಕೊರೋನಾ ಸೋಂಕು ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು ಈ ನಡುವೆ ಲಸಿಕೆ ನೀಡಿಕೆ ಪ್ರಮಾಣವನ್ನು ‌ಕೂಡ ಹೆಚ್ಚು ಮಾಡಲಾಗಿದೆ‌

ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಮಾಡಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಕ್ಕೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ‌.