ಕರ್ನಾಟಕ ಸೇರಿ ಹಲವೆಡೆ ಮಳೆ

ನವದೆಹಲಿ.ಏ.೨೩- ದೇಶದಲ್ಲಿ ಪ್ರತಿದಿನ ಹವಾಮಾನದಲ್ಲಿ ವೈಪರೀತ್ಯ ಕಂಡು ಬಂದಿದ್ದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಾಗಲಿದೆ.
ಈಶಾನ್ಯ ಬಾಂಗ್ಲಾದೇಶದ ಮೇಲೆ ಚಂಡಮಾರುತ್ತದ ಪರಿಚಲನೆ ರೂಪಗೊಂಡಿದೆ. ಬಾಂಗ್ಲಾದೇಶದಿಂದ ವಾಯುವ್ಯ ಬಂಗಾಳ ಹಾಗೂ ಕೊಲ್ಲಿಯವರೆಗೂ
ವ್ಯಾಪಿಸಿದೆ. ಇದರ ಮಧ್ಯೆ ಈಶಾನ್ಯ ಅಸ್ಸಾಂನಲ್ಲಿ ಚಂಡಮಾರುತದ ಪರಚನೆಯಿಂದಾಗಿ ಈಶಾನ್ಯ ಭಾರದತಲ್ಲಿ ಸಾಧಾರಣ ಮಳೆಯಾಗಲಿದೆ ಎಂದು
ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಇಂದು ಮತ್ತು ನಾಳೆ ಕರ್ನಾಟಕ ಮತ್ತು ಕೇರಳದ ಒಳನಾಡಲ್ಲಿ ತುಂತುರು ಮಳೆ ಬೀಳಬಹುದು. ಹಾಸನ, ಮಂಗಳೂರು ಮಡಿಕೇರಿಯಲ್ಲಿ ಸಾಧಾರಣ ಮಳೆಯಾಗುವ
ಸಾಧ್ಯತೆ ಹೆಚ್ಚಿದೆ.
ಏ.೨೩ರಿಂದ ೨೬ರವರೆಗೆ ಮಧ್ಯ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ ಜಾರ್ಖಂಡ್, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಸಿಕ್ಕಿಂನಲ್ಲಿ ಲಘುವಾಗಿ ಮಳೆಯಾಗಲಿದೆ.
ಉತ್ತರ ಪಂಜಾಬ್,ಉತ್ತರ ಹರ್ಯಾಣದಲ್ಲಿ ಗುಡುಗು, ಭಾರೀ ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.
ಮುಂದಿನ ೨೪ ಗಂಟೆಯಲ್ಲಿ ಜಮ್ಮುಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆ ಜತೆಗೆ ಹಿಮಪಾತವಾಗುವ ಸಾಧ್ಯತೆ ಇದೆ.