ಕರ್ನಾಟಕ ಸೇನಾಪಡೆಯ ವತಿಯಿಂದ ಕನ್ನಡ ಧ್ವಜ – ಜಾಗೃತಿ ಅಭಿಯಾನಕ್ಕೆ ಚಾಲನೆ

ಮೈಸೂರು, ಅ.31: ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಡಿನ ಜನರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮೈಸೂರಿನ ಅಗ್ರಹಾರ ವೃತ್ತದ ಎಲ್ಲಾ ಅಂಗಡಿ, ಕಚೇರಿಗಳ ಮೇಲೆ ಕನ್ನಡ ಧ್ವಜ ಹಾಕಿಸುವ ಮೂಲಕ – “ ಕನ್ನಡ ಧ್ವಜ – ಜಾಗೃತಿ ಅಭಿಯಾನ “ ಕ್ಕೆ ಕರ್ನಾಟಕ ಸೇನಾಪಡೆಯ ವತಿಯಿಂದ ( ಅಂಗಡಿ ಮನೆಮನೆಗೂ ಕನ್ನಡ ಧ್ವಜ – ಮನಮನದಲ್ಲಿ ಕನ್ನಡ ಪದ ) ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕರಾದ ಡಿ ಟಿ ಪ್ರಕಾಶ್ ಮಾತನಾಡಿ ದೇಶದಲ್ಲಿ ಹರಿದು ಹಂಚಿ ಹೋಗಿದ್ದ, ಭಾರತದ ಸಂಸ್ಥಾನಗಳನ್ನು ಭಾರತ ಒಕ್ಕೂಟದಲ್ಲಿ ಸೇರಿಸಿ, ಒಗ್ಗೂಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್. ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ, 1956 ರಲ್ಲಿ ಕನ್ನಡ ಭಾಷೆ ಮಾತನಾಡುವ 4 ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿ, ಮೈಸೂರು ರಾಜ್ಯ ಎಂದು ಹೆಸರಿಸಲಾಗಿತ್ತು.
ನಂತರ ಮಾತನಾಡಿದ ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ 1956 ನೇ ನವಂಬರ್ 1ರಂದು ಕರ್ನಾಟಕ ರಾಜ್ಯ ಉದಯವಾಗಿ, ವಿಶಾಲ ಮೈಸೂರು ರಾಜ್ಯ ಎಂದು ಹೆಸರಾಗಿತ್ತು. ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಅನೇಕ ಮಹಾನ್ ವ್ಯಕ್ತಿಗಳು, ಸಂಘ-ಸಂಸ್ಥೆಗಳು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಹೋರಾಟ ನಡೆಸಬೇಕಾಯಿತು. ಅದರಲ್ಲಿ ಬಹುಮುಖ್ಯವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಆಲೂರು ವೆಂಕಟರಾಯರು, ಬಿಎಂ ಶ್ರೀಕಂಠಯ್ಯ, ಕುವೆಂಪು, ಮೈಸೂರು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ ನಂತವರು ಕರ್ನಾಟಕ ಏಕೀಕರಣಕ್ಕಾಗಿ ವಿಶೇಷವಾಗಿ ಶ್ರಮಿಸಿದರು.
ಯುವ ಮುಖಂಡರಾದ ಎನ್ ನವೀನ್ ಕುಮಾರ್ ಮಾತನಾಡಿ ನಂತರ ರಾಜ್ಯದ ಇತಿಹಾಸ, ಸಂಸ್ಕೃತಿ, ಪರಂಪರೆಗಳ ಆಧಾರದ ಮೇಲೆ ಕರ್ನಾಟಕ ಎಂಬ ಹೆಸರೇ ಸೂಕ್ತವೆಂದು 1973 ನೇ ಇಸವಿಯ ನವೆಂಬರ್ 1 ರಂದು ಶ್ರೀ ಡಿ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕರ್ನಾಟಕ ಎಂಬ ಹೆಸರು ಮರು ನಾಮಕರಣವಾಯಿತು.
ಈಗಿನ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದ ಜನತೆ ಕನ್ನಡವನ್ನು ಹೆಚ್ಚು ಹೆಚ್ಚು ಬಳಸಿ ಬೆಳೆಸಬೇಕು. ಹೊರ ರಾಜ್ಯದವರಿಗೂ ಕನ್ನಡ ಕಲಿಸಬೇಕು. ಎಲ್ಲಾ ಕನ್ನಡಿಗರು ಸ್ವಯಂ ಪ್ರೇರಿತವಾಗಿ ಅವರವರ ಮನೆ, ಅಂಗಡಿ, ಕಛೇರಿಗಳ ಮೇಲೆ ಕನ್ನಡದ ಧ್ವಜವನ್ನು ಹಾರಿಸಬೇಕು ಹಾಗು ಅಂಗಡಿ, ಕಛೇರಿಗಳ ನಾಮ ಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಶೇ. 60 ಭಾಗ ಪ್ರಧಾನ ವಾಗಿ ಬಳಸಬೇಕು ಎಂದು ಒತ್ತಾಯಿಸಿ ಈ ಜಾಗೃತಿ ಅಭಿಯಾನ.
ಈ ಜಾಗೃತಿ ಅಭಿಯಾನದಲ್ಲಿ ಮಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ಶ್ರೀ ಡಿ ಟಿ ಪ್ರಕಾಶ್, ಡಾ. ರಘುರಾಂ ಕೆ ವಾಜಪೇಯಿ, ಡಾ. ರಾಜಕುಮಾರ್ ಅಭಿಮಾನಿಗಳ ಬಳಗ ದ ಸಂಸ್ಥಾಪಕ ಅಧ್ಯಕ್ಷರಾದ ಎಂ. ರಾಮೇಗೌಡ, ಯುವ ಮುಖಂಡರಾದ ಎನ್. ಎಂ ನವೀನ್ ಕುಮಾರ್, ವಿಷ್ಣುವರ್ಧನ್ ಅಭಿಮಾನಿ ಬಳಗದ ಎಂ ಡಿ. ಪಾರ್ಥಸಾರಥಿ, ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಕೆ. ಎಂ. ಪಿ. ಕೆ ಟ್ರಸ್ಟ್ ನ ವಿಕ್ರಮ್ ಅಯ್ಯಂಗಾರ್, ಡಾ. ಪಿ. ಶಾಂತರಾಜೇಅರಸ್, ವಿಜಯೇಂದ್ರ, ರವಿತೇಜ,ರಾಕೇಶ್ ಕುಂಚಿಟಿಗ , ಪ್ರಜೀಶ್ ಪಿ, ಪ್ರಭುಶಂಕರ್ ಎಂ ಬಿ, ಕುಮಾರ್ ಗೌಡ, ಬಂಗಾರಪ್ಪ, ಸ್ವಾಮಿ, ಪರಿಸರ ಚಂದ್ರು, ಶಾಂತಮೂರ್ತಿ, ನಂಜುಂಡಸ್ವಾಮಿ,ಗುರುಮಲ್ಲಪ್ಪ, ಆನಂದ್, ರಮಾಬಾಯಿ ನಗರದ ಮಲ್ಲೇಶ್- ಸುಂದರ್- ಸೋಮಶೇಖರ್ ಉಪಸ್ಥಿತರಿದ್ದರು.