ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಘದ ರಾಜ್ಯ ಘಟಕದ‌ ಪದಾಧಿಕಾರಿಗಳ ಪದಗ್ರಹಣ

ವಿಜಯಪುರ,ಡಿ.17- ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಘದ ರಾಜ್ಯ ಘಟಕದ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು.
ನಗರದ ಹೊಟೇಲ್ ಮಧುವನ ಇಂಟರ್ ನ್ಯಾಶನಲ್ಲಿಂದು ಆಯೋಜಿಸಿದ್ದ ವಿಶೇಷ ಸರ್ವ ಸದಸ್ಯರ ಸಭೆ ಹಾಗೂ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಜ್ಯ ಘಟಕದ ನೂತನ ಪದಾಧಿಕಾರಿಗ ಪದಗ್ರಹಣ ಸಮಾರಂಭ ಜರುಗಿತು.
ರಾಜ್ಯ ಉಪಾಧ್ಯಕ್ಷರಾಗಿ ಹೆಚ್.ಎಲ್.ಸುರೇಶ ಸಂಪಾದಕರು ವಾಸ್ತವ ಕರ್ನಾಟಕ ಕನ್ನಡ ದಿನಪತ್ರಿಕೆ ಬಂಗಾರಪೇಟೆ,ಪ್ರಧಾನ ಕಾರ್ಯದರ್ಶಿಗಳಾಗಿ ಮುರುಗೇಶ ಬಿ ಅಳಗವಾಡಿ ಸಂಪಾದಕರು ಜೇಷ್ಠ ಕನ್ನಡ ದಿನಪತ್ರಿಕೆ ಬಾಗಲಕೋಟೆ,ಕಾರ್ಯಕಾರಿ ಸಮಿತಿಯ ನಿರ್ದೇಶಕರಾಗಿ ಕಲಬುರಗಿಯ ವಿಶ್ವಪ್ರಚಾರ ಕನ್ನಡ ದಿನಪತ್ರಿಕೆ ಸಂಪಾದಕರಾದ ವೆಂಕಟರಾವ ಖಮೀತಕರ್ ಹಾಗೂ ರಬಕವಿ- ಬನಹಟ್ಟಿ ನೀಲಕಂಠ ವಾಮನ ದಾತಾರ ಸಂಪಾದಕರು ದಢಲ್ ಬಾಜಿ ಕನ್ನಡಿ ದಿನಪತ್ರಿಕೆ‌ ಸಂಪಾದಕರು ಪದಗ್ರಹಣ‌ ಮಾಡಿದರು.
ನೂತನ ಪದಾಧಿಕಾರಿಗಳಿಗೆ ಸಂಘದ ಅಧ್ಯಕ್ಷ ಸಿದ್ದು ಸುಬೇದಾರ 2020-2023 ರ ಅವಧಿಗ ನೇಮಕಾತಿ ಪತ್ರ ನೀಡಿ ಈ ಸಂಘವು 1981 ರಲ್ಲಿ ಸ್ಥಾಪನೆಗೊಂಡು ರಾಜ್ಯ ಸರಕಾರದಿಂದ ಮಾನ್ಯತೆ ಪಡೆದ ರಾಜ್ಯದ ಏಕೈಕ ಸಂಘವಾಗಿದ್ದು,ನಲವತ್ತು ವರ್ಷಗಳ ಸುಧೀರ್ಘ ಇತಿಹಾಸ ಹೊಂದಿದೆ.
ಅಂದಿನ ಮುಖ್ಯಮಂತ್ರಿ ದಿ.ಗುಂಡುರಾವ ಅವರಿಂದ ಪ್ರಶಂಸೆ ಪಡೆದು ಮಾನ್ಯತೆ ಪಡೆದಿದೆ, ಸಂಘದ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಘದ ಮತ್ತು ಸದಸ್ಯರ ಆಶಯಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುವಂತೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ,ಎಸ್.ಎಸ್.ವಿ.ಟಿವಿ ಮಾಲೀಕರು ಹಾಗೂ ಕಲಬುರಗಿ ಜಿಲ್ಲಾ ರೋಟರಿ ಕ್ಲಬ್ ನೂತನ ಅಧ್ಯಕ್ಷ ಶಂಕರ ಕೋಡ್ಲಾ ಅವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸಭೆಯಲ್ಲಿ ನಿಕಟ ಪೂರ್ವ ರಾಜ್ಯಾಧ್ಯಕ್ಷ ಚಿತ್ರದುರ್ಗದ ಶ.ಮಂಜುನಾಥ,ಹಿರಿಯರು ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಸತ್ಯಕಾಮ ಪತ್ರಿಕೆ ಸಂಪಾದಕರಾದ ಪಿ.ಎಂ.ಮಣ್ಣೂರ,ಕಲಬುರಗಿಯ ಶರಣಬಸಪ್ಪ ಜಿಡಗಾ,ಅಜೀಜುಲ್ಲಾ ಸರಮಸ್ತ,ಗುರುರಾಜ ಕುಲಕರ್ಣಿ,ಸಿದ್ದಣ್ಣಗೌಡ ಪಾಟೀಲ,ವಿಜಯಪುರದ ರಶ್ಮಿ ಪಾಟೀಲ,ಲಕ್ಷ್ಮಿ ವಾಲಿಕಾರ,ಶರದಕುಮಾರ ಅರ್ಜುನಗಿ,ಮೋಹನ ಕುಲಕರ್ಣಿ,ಬಾಗಲಕೋಟೆಯ ವಿರೇಶ ಹಿರೇಮಠ,ಹೆಚ್.ಎಸ್.ಮುದಕವಿ,ಎಮ್.ಸಾಲಗಾರ,ಹನಪ್ಪ ಕಡಿವಾಲ್,ರಾಘವೇಂದ್ರ ಕಲಾದಗಿ.ಹರಿಹರದ ಶಾಂಭವಿ ನಾಗರಾಜ ಹಾಗೂ ಇನ್ನಿತರರು ಉಪಸ್ಥಿತರಿದ್ದರು.