ಕರ್ನಾಟಕ ಸಂಘ:,ಡಿಸಿ ಧ್ವಜಾರೋಹಣ

ರಾಯಚೂರು.ನ.೧.ಕನ್ನಡ ರಾಜ್ಯೋತ್ಸವದ ಅಂಗವಾಗಿ ನೂತನ ಜಿಲ್ಲಾಧಿಕಾರಿ ಡಾ.ಅವಿನಾಶ ಮೆನನ್ ಅವರು ಕರ್ನಾಟಕ ಸಂಘದಲ್ಲಿ ಧ್ವಜಾರೋಹಣ ಮಾಡಿದರು.
ಜಿಲ್ಲಾಡಳಿತ,ಜಿಪಂ,ನಗರಸಭೆ,ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಧಿಕಾರಿ ಡಾ.ಅವಿನಾಶ ಮೆನನ್ ಅವರು ನಗರದ ಕರ್ನಾಟಕ ಸಂಘದಲ್ಲಿ ಧ್ವಜಾರೋಹಣ ಮಾಡಿ ತಾಯಿ ಭುವನೇಶ್ವರಿ ದೇವಿಯ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಡಾ.ಶಿವರಾಜ ಪಾಟೀಲ್, ಬಸವನಗೌಡ ದದ್ದಲ್,ಸಿಇಒ ಶೇಖ್ ತನ್ವಿರ್ ಆಸೀಫ್, ಎಸ್ಪಿ ನಿಖಿಲ್ ಬಿ,ಅಪಾರ ಜಿಲ್ಲಾಧಿಕಾರಿ ದುರ್ಗೆಶ್, ಎಸಿ ಸಂತೋಷ್ ಕಾಮಗೌಡ,ಆರ್ ಡಿ ಎ ಅಧ್ಯಕ್ಷ ವೈ.ಗೋಪಾಲರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.