ಕರ್ನಾಟಕ ವಿಧಾನಸಭೆ ಭರವಸೆಗಳ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಪ್ರವಾಸ

ಕಲಬುರಗಿ.ಜ.6:ಕರ್ನಾಟಕ ವಿಧಾನಸಭೆ ಭರವಸೆಗಳ ಸಮಿತಿಯ ಅಧ್ಯಕ್ಷರಾದ ಕೆ. ರಘುಪತಿ ಭಟ್ ನೇತೃತ್ವದ 13 ಜನರನ್ನೊಳಗೊಂಡ ಸಮಿತಿಯ ಸದಸ್ಯರು ಗುರುವಾರ ಜನವರಿ 7 ರಂದು ಬೆಂಗಳೂರಿನಿಂದ ಸ್ಟಾರ್‍ಏರ್ ವಿಮಾನದ ಮೂಲಕ ಬೆಳಿಗ್ಗೆ 9.45 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು.

ಈ ಸಮಿತಿಯು ಅಂದು ಬೆಳಿಗ್ಗೆ 10.45 ಗಂಟೆಗೆ ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿ ಹಾಗೂ ಚರ್ಚೆ ನಡೆಸಲಿದೆ. ನಂತರ ಈ ಸಮಿತಿಯು ಮಧ್ಯಾಹ್ನ 12 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ಬೀದರಿಗೆ ಪ್ರಯಾಣಿಸಲಿದೆ. ನಂತರ ಈ ಸಮಿತಿಯು ಅಂದು ರಾತ್ರಿ 8 ಗಂಟೆಗೆ ಬೀದರದಿಂದ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡಲಿದೆ. ಜನವರಿ 8 ರಂದು ಬೆಳಿಗ್ಗೆ 8 ಗಂಟೆಗೆ ಕಲಬುರಗಿ ಸರ್ಕಾರಿ ವಸತಿ ಗೃಹದಲ್ಲಿ ಸಮಿತಿಯು ಆಂತರಿಕ ಚರ್ಚೆ ನಡೆಸಲಿದೆ. ನಂತರ ಮಧ್ಯಾಹ್ನ 12.25 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸಲಿದೆ.

ಕರ್ನಾಟಕ ವಿಧಾನಸಭೆ ಭರವಸೆಗಳ ಸಮಿತಿಯ ಸದಸ್ಯರು ಹಾಗೂ ವಿಧಾನಸಭೆಯ ಸದಸ್ಯರಾದ ಎಂ.ಬಿ. ಪಾಟೀಲ, ಎಸ್.ಎನ್. ನಾರಾಯಣಸ್ವಾಮಿ ಕೆ.ಎಂ., ಪ್ರಿಯಾಂಕ್ ಖರ್ಗೆ, ಎಸ್.ಎನ್. ಸುಬ್ಬಾರೆಡ್ಡಿ (ಚಿನ್ನಕಾಯಲಪಲ್ಲಿ), ದತ್ತಾತ್ರೇಯ ಪಾಟೀಲ ಸಿ. ರೇವೂರ, ಡಾ. ಕೆ. ಶ್ರೀನಿವಾಸಮೂರ್ತಿ, ಸೋಮನಗೌಡ ಬಿ. ಪಾಟೀಲ್ (ಸಾಸನೂರು), ಉದಯ ಬಿ. ಗರುಡಾಚಾರ್, ಎಸ್. ರಾಮಪ್ಪ, ರವೀಂದ್ರ ಶ್ರೀಕಂಠಯ್ಯ, ಹರೀಶ ಪೂಂಜ, ಸಂಜೀವ ಮಠಂದೂರು ಹಾಗೂ ವೆಂಕಟರೆಡ್ಡಿ ಮುದ್ನಾಳ ಸಮಿತಿಯ ಸದಸ್ಯರು ಉಪಸ್ಥಿತರಿರುವರು.