ಕರ್ನಾಟಕ ವಿಧಾನಸಭಾ ಚುನಾವಣೆ-2023ಬಳ್ಳಾರಿ ಜಿಲ್ಲೆಯಲ್ಲಿ ಶೇ. 76.24 ರಷ್ಟು ಮತದಾನನಾಳೆ 56 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ


ಬಳ್ಳಾರಿ,ಮೇ 12- ಕರ್ನಾಟಕ ವಿಧಾನಸಭಾ ಚುನಾವಣೆ 2023 ರ ಅಂಗವಾಗಿ ಬಳ್ಳಾರಿ ಜಿಲ್ಲಾ ವ್ಯಾಪ್ತಿಯ 05 ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 10 ರಂದು ಮತದಾನವು ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಅಂತಿಮ ವರದಿಯಂತೆ ಒಟ್ಟು ಶೇ.76.24 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 11,52,411 ಮತದಾರರಿದ್ದು, ಇದರಲ್ಲಿ ಪುರುಷ-567319, ಮಹಿಳೆ-584920 ಹಾಗೂ ಲೈಂಗಿಕ ಅಲ್ಪಸಂಖ್ಯಾತ-172 ಮತದಾರರಿದ್ದಾರೆ.  ಮೇ. 10 ರಂದು ನಡೆದ ಮತದಾನದಲ್ಲಿ 4,39,609-ಪುರುಷರು, 4,38,928-ಮಹಿಳೆಯರು ಹಾಗೂ 67-ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಸೇರಿದಂತೆ ಒಟ್ಟು 8,78,604 ಜನ ತಮ್ಮ ಹಕ್ಕು ಚಲಾಯಿಸಿದ್ದು, ಶೇ.76.24 ರಷ್ಟು ಮತದಾನವಾಗಿದೆ.
*ಕ್ಷೇತ್ರವಾರು ಮತದಾನ ವಿವರ:*
*ಕಂಪ್ಲಿ ವಿಧಾನಸಭಾ ಕ್ಷೇತ್ರ:*
91-ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟಾರೆ ಶೇ.84.43 ರಷ್ಟು ಮತದಾನವಾಗಿದೆ.  ಈ ಕ್ಷೇತ್ರದಲ್ಲಿ 1,06,528-ಪುರುಷ, 1,07,882-ಮಹಿಳಾ ಮತದಾರರು ಹಾಗೂ 29 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿದಂತೆ ಒಟ್ಟು 2,14,439 ಮತದಾರರಿದ್ದಾರೆ. ಒಟ್ಟು 240 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 1,81,048 ಜನ ಮತ ಚಲಾಯಿಸಿದ್ದು,  ಈ ಪೈಕಿ 91,036-ಪುರುಷರು, 89,994-ಮಹಿಳೆಯರು ಹಾಗೂ 18-ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಮತ ಚಲಾಯಿಸಿದ್ದಾರೆ.
*ಸಿರುಗುಪ್ಪ ವಿಧಾನಸಭಾ ಕ್ಷೇತ್ರ:*
92-ಸಿರುಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತದಾನದಲ್ಲಿ ಶೇ.77.03 ರಷ್ಟು ಮತದಾನವಾಗಿದೆ. ಈ ಕ್ಷೇತ್ರದಲ್ಲಿ 1,06,789-ಪುರುಷರು, 1,10,354-ಮಹಿಳಾ ಮತದಾರರು ಹಾಗೂ 38-ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಸೇರಿದಂತೆ ಒಟ್ಟು 2,17,181 ಮತದಾರರಿದ್ದಾರೆ.  ಈ ಕ್ಷೇತ್ರದ 227 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 1,67,287 ಜನ ಮತ ಚಲಾಯಿಸಿದ್ದು,  ಈ ಪೈಕಿ  84,434-ಪುರುಷರು, 82,839– ಮಹಿಳೆಯರು ಹಾಗೂ 14-ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಮತ ಚಲಾವಣೆ ಮಾಡಿದ್ದಾರೆ.
*ಬಳ್ಳಾರಿ ಗಾಮೀಣ ವಿಧಾನಸಭಾ ಕ್ಷೇತ್ರ:*
93-ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತದಾನದಲ್ಲಿ ಶೇ.76.09 ರಷ್ಟು ಮತದಾನವಾಗಿದೆ.  ಈ ಕ್ಷೇತ್ರದಲ್ಲಿ 1,16,096-ಪುರುಷ, 1,22,181-ಮಹಿಳಾ ಮತದಾರರು ಹಾಗೂ 49-ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಸೇರಿದಂತೆ ಒಟ್ಟು 2,38,326 ಮತದಾರರಿದ್ದಾರೆ.  ಈ ಕ್ಷೇತ್ರದ 242 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 1,81,354 ಜನ ಮತ ಚಲಾಯಿಸಿದ್ದು, ಈ ಪೈಕಿ 89,593-ಪುರುಷರು, 91,745–ಮಹಿಳೆಯರು ಹಾಗೂ 16-ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಮತ ಚಲಾವಣೆ ಮಾಡಿದ್ದಾರೆ.
*ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ:*
94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತದಾನದಲ್ಲಿ ಶೇ.68.22 ರಷ್ಟು ಮತದಾನವಾಗಿದೆ.  ಈ ಕ್ಷೇತ್ರದಲ್ಲಿ 1,26,067-ಪುರುಷ, 1,33,087- ಮಹಿಳಾ ಮತದಾರರು, 30-ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಸೇರಿದಂತೆ ಒಟ್ಟು 2,59,184 ಮತದಾರರಿದ್ದಾರೆ.  ಈ ಕ್ಷೇತ್ರದ 262 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 1,76,821 ಜನ ಮತ ಚಲಾಯಿಸಿದ್ದು, ಅದರಲ್ಲಿ 86,640-ಪುರುಷರು, 90,170– ಮಹಿಳೆಯರು ಹಾಗೂ 11-ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಮತ ಚಲಾವಣೆ ಮಾಡಿದ್ದಾರೆ.
*ಸಂಡೂರು ವಿಧಾನಸಭಾ ಕ್ಷೇತ್ರ:*
95-ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತದಾನದಲ್ಲಿ ಶೇ.77.08 ರಷ್ಟು ಮತದಾನವಾಗಿದೆ.  ಈ ಕ್ಷೇತ್ರದಲ್ಲಿ 1,11,837-ಪುರುಷ, 1,11,416-ಮಹಿಳಾ ಮತದಾರರು ಹಾಗೂ 26-ಲಿಂಗತ್ವ ಅಲ್ಪ ಸಂಖ್ಯಾತ ಮತದಾರು ಸೇರಿದಂತೆ ಒಟ್ಟು 2,23,281 ಮತದಾರರಿದ್ದಾರೆ.  ಈ ಕ್ಷೇತ್ರದ 251 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 1,72,094 ಜನ ಮತ ಚಲಾಯಿಸಿದ್ದು, ಅದರಲ್ಲಿ 87,906-ಪುರುಷರು, 84,180–ಮಹಿಳೆಯರು ಹಾಗೂ 8-ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಮತ ಚಲಾವಣೆ ಮಾಡಿದ್ದಾರೆ.
*56 ಅಭ್ಯರ್ಥಿಗಳ ಭವಿಷ್ಯ ಮತಪಟ್ಟಿಗೆಯಲ್ಲಿ ಭದ್ರ:* ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ 1,222 ಮತ ಕೇಂದ್ರಗಳಲ್ಲಿ ಮೇ 10 ರಂದು ನಡೆದ ಮತದಾನ ದಿನದಂದು ಜಿಲ್ಲೆಯ 05 ವಿಧಾನಸಭಾ ಕ್ಷೇತ್ರಗಳ 56 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಎಲ್ಲರ ಚಿತ್ತ ಮೇ 13 ರಂದು ನಗರದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರ ತಾಂತ್ರಿಕ ಇಂಜಿನಿಯರ್ ಮಹಾವಿದ್ಯಾಲಯದಲ್ಲಿ ನಡೆಯುವ ಮತ ಎಣಿಕೆ ದಿನದ ಮೇಲೆ ಕೇಂದ್ರೀಕೃತವಾಗಿದೆ.  ಅಂದು 56 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
*2018 ರ ಶೇಕಡವಾರು ಮತದಾನ:*
ಕಳೆದ 2018 ರಲ್ಲಿ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಂಪ್ಲಿ ಕ್ಷೇತ್ರದಲ್ಲಿ ಶೇ.77.65, ಸಿರುಗುಪ್ಪ ಕ್ಷೇತ್ರ-ಶೇ.74.59, ಬಳ್ಳಾರಿ ಗ್ರಾಮೀಣ-ಶೇ.74.25, ಬಳ್ಳಾರಿ ನಗರ-ಶೇ.64.44 ಮತ್ತು ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.74.44 ರಷ್ಟು ಅಂದರೆ ಒಟ್ಟಾರೆ ಜಿಲ್ಲೆಯಲ್ಲಿ ಶೇ.73.07 ರಷ್ಟು ಮತದಾನವಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.