ಕರ್ನಾಟಕ ವಸತಿ ಶಿಕ್ಷಣ ಪ್ರವೇಶ ಪರೀಕ್ಷೆ ೧೫೮೬೪ ವಿದ್ಯಾರ್ಥಿಗಳು ನೋಂದಣಿ

ಮಾನ್ವಿ,ಮಾ.೧೨- ಇಂದು ರಾಜ್ಯದ್ಯಂತ ನಡೆದ ಕರ್ನಾಟಕ ವಸತಿ ಶಿಕ್ಷಣ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ೬ ನೇ ತರಗತಿಯ ಪ್ರವೇಶ ಪರೀಕ್ಷೆಗೆ ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕುಗಳು ಸೇರಿದಂತೆ ಒಟ್ಟು ೧೫೮೬೪ ವಿದ್ಯಾರ್ಥಿಗಳ ನೊಂದಣಿಯಾಗಿ ಇಂದು ಎಲ್ಲ ಪರೀಕ್ಷೆ ಕೇಂದ್ರಗಳಲ್ಲಿ ಸುರಕ್ಷಿತವಾಗಿ ಪರೀಕ್ಷೆಗಳು ನಡೆದಿವೆ ಎಂದು ರಾಯಚೂರು ಜಿಲ್ಲಾ ಉಪನಿರ್ದೇಶಕ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿ ರಾಜಶೇಖರ ಪಟ್ಟಣಶೆಟ್ಟಿ ಹೇಳಿದರು..
ಕರ್ನಾಟಕ ರಾಜ್ಯ ಪರೀಕ್ಷಾ ಪ್ರಾಧಿಕಾರ ಇಲಾಖೆಯ ಅಧೀನದಲ್ಲಿ ನಡೆಯುವ ಈ ಪ್ರವೇಶ ಪರೀಕ್ಷೆಯಲ್ಲಿ ಮಾನವಿ ತಾಲೂಕಿನ ಎಸ್ ವಿ ಎಸ್ ಪಿಯು ಕಾಲೇಜು, ಕಾಳಿಂಗಕಾಲೇಜು, ಸರ್ಕಾರಿ ಬಾಲಕಿಯರ ಕಾಲೇಜು, ಎಸ್ ಪಿ ವಿ ಕಾಲೇಜು, ಸರ್ಕಾರಿ ಬಾಲಕರ ಕಾಲೇಜು, ಲೊಯೋಲಾ ಕಾಲೇಜು, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಶಾರದ ಕಾಲೇಜು ಸೇರಿದಂತೆ ಒಟ್ಟು ೮ ಕಾಲೇಜುಗಳಿಂದ ಒಟ್ಟು ೨೯೫೨ ವಿದ್ಯಾರ್ಥಿಗಳು ಸೇರಿದಂತೆ ದೇವದುರ್ಗ ತಾಲೂಕಿನಲ್ಲಿ ೪೦೬೬, ಲಿಂಗಸ್ಗೂರು ೪೦೬೮, ರಾಯಚೂರು ೧೬೦೮, ಸಿಂಧನೂರು ೩೧೭೦, ಸೇರಿದಂತೆ ಒಟ್ಟು ರಾಯಚೂರು ಜಿಲ್ಲೆಯ ೪೧ ಪರೀಕ್ಷೆ ಕೇಂದ್ರಗಳಲ್ಲಿ ೧೫೮೬೪ ವಿದ್ಯಾರ್ಥಿಗಳು ಪರೀಕ್ಷೆಗಾಗಿ ನೊಂದಣೆಯಾಗಿದ್ದು ಎಲ್ಲ ತಾಲೂಕಿನ ಪರೀಕ್ಷೆಗಳು ಸ್ಥಳೀಯ ಪ್ರಾಚಾರ್ಯರ, ಉಪನ್ಯಾಸಕರ,ಶಿಕ್ಷಕರ ಪ್ರಮುಖವಾಗಿ ಪೋಲಿಸರ ಸಹಕಾರದಿಂದ ಬಹಳ ಸುರಕ್ಷಿತವಾಗಿ ಪರೀಕ್ಷೆಗಳು ನಡೆದಿವೆ ಆದರೆ ಪರೀಕ್ಷೆ ಮುಗಿದ ನಂತರ ಸಂಜೆಯೊಳಗೆ ಪರೀಕ್ಷೆಗೆ ಗೈರಾಗಿರುವ ವಿದ್ಯಾರ್ಥಿಗಳ ಸಂಖ್ಯೆ ತಿಳಿಯುತ್ತದೆ ಅಧಿಕಾರಿ ರಾಜಶೇಖರ ಪಟ್ಟಣಶೆಟ್ಟಿ ಹೇಳಿದರು.