ಕರ್ನಾಟಕ ಲೋಕಾಯುಕ್ತ ಎಸ್.ಪಿ.ಯಾಗಿಆ್ಯಂಟನಿ ಜಾನ್ ಕರನೂರ್ ಅವರು ಅಧಿಕಾರ ಸ್ವೀಕಾರ

ಕಲಬುರಗಿ:ಡಿ.27::ಕರ್ನಾಟಕ ಲೋಕಾಯುಕ್ತ ಕಲಬುರಗಿ ವಿಭಾಗೀಯ ಕಚೇರಿಯ ಪೊಲೀಸ್ ಅಧೀಕ್ಷಕರ ಹುದ್ದೆಯ ಪ್ರಭಾರವನ್ನು ಆ್ಯಂಟನಿ ಜಾನ್ ಕರ್‍ನೂರ್ ಅವರು ಬುಧವಾರ (ಡಿಸೆಂಬರ 27 ರಂದು) ವಹಿಸಿಕೊಂಡಿರುತ್ತಾರೆ.
ಕಲಬುರಗಿ ಹಾಗೂ ಬೀದರ ಜಿಲ್ಲೆಗಳ ಸಾರ್ವಜನಿಕರು ತಮ್ಮ ದೂರು/ ಕುಂದುಕೊರತೆಗಳನ್ನು ನೇರವಾಗಿ ಕಲಬುರಗಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಆಧೀಕ್ಷಕರ ಗಮನಕ್ಕೆ ತರಬಹುದಾಗಿದೆ.
ಕಚೇರಿ ವಿಳಾಸ ಇಂತಿದೆ. ಪೊಲೀಸ್ ಅಧೀಕ್ಷಕರವರ ಕಚೇರಿ, ಕರ್ನಾಟಕ ಲೋಕಾಯಕ್ತ, ಐವಾನ್ ಶಾಹಿ ಕಂಪೌಂಡ್, ಕಲಬುರಗಿ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ/ ಫ್ಯಾಕ್ಸ್ ಸಂಖ್ಯೆ 08472-295364ಗೆ ಸಂಪರ್ಕಿಸಲು ಕೋರಲಾಗಿದೆ.