ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಸಾಹುಕಾರ್‍ಗೆ ಸನ್ಮಾನ

ಕಲಬುರಗಿ,ಜೂ.9- ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‍ಸಿ) ಅಧ್ಯಕ್ಷರಾದ ಶಿವಶಂಕರಪ್ಪ ಸಾಹುಕಾರ್ ಅವರಿಗೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಹಾಗೂ ವೀರಶೈವ ಮಹಾಸಭೆಯ ಯುವ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನಿಸಿ ಮಾತನಾಡಿದ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ ಎಸ್ ಪಾಟೀಲ್ ನರಿಬೋಳ, ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಪಡೆದಿರುವ ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಒಂದು ಹಳ್ಳಿ ಯವರು ಇಂದು ಈ ಉನ್ನತ ಹುದ್ದೆಗೆ ಬಂದಿದ್ದು, ಇಡೀ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಮ್ಮೆಯ ವಿಷಯ ಎಂದರು.
ಲೋಕಸೇವಾ ಆಯೋಗದ ಇತಿಹಾಸದಲ್ಲಿ ನಂಬರ್1 ಅಧ್ಯಕ್ಷರಾಗಿ ಅವರು ಹೆಸರು ಗಳಿಸುತ್ತಾರೆ ಎಂಬ ನಂಬಿಕೆ ನಮಗಿದೆ. ವಿಶೇಷವಾಗಿ ಸಂಬಂಧಿಕರಾಗಿರುವ ಶಿವಶಂಕರಪ್ಪ ಸಾಹುಕಾರ ರವರಿಗೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ವತಿಯಿಂದ ವಿಶೇಷ ಅಭಿನಂದನೆಗಳನ್ನು ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ವೀರಶೈವ ಮಹಾಸಭೆಯ ಜಿಲ್ಲಾ ಯುವ ಘಟಕದ ಅಧ್ಯಕ್ಷ ಉದಯ ಪಾಟೀಲ್ ಮಾತನಾಡಿ, ಶಿವಶಂಕರಪ್ಪ ಸಾಹುಕಾರರು ಕಲ್ಯಾಣ ಕರ್ನಾಟಕ ಪ್ರದೇಶದವರ ಅಷ್ಟೇ ಅಲ್ಲದೆ ಲಿಂಗಾಯತ ಸಮುದಾಯದ ವರಾಗಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಲಿಂಗಾಯತ ಸಮುದಾಯಕ್ಕೆ ಕೀರ್ತಿ ತರುವಂಥ ಕೆಲಸ ಸಾಹುಕಾರರು ಮಾಡುತ್ತಾರೆ ಎಂಬ ನಂಬಿಕೆ ನಮಗಿದೆ ಎಂದರು.
ಈ ಸಂದರ್ಭದಲ್ಲಿ ವಿಸ ಜ್ಯೋತಿ ಪ್ರತಿಷ್ಠಾನ ಅಧ್ಯಕ್ಷರಾದ ವಿಜಯಕುಮಾರ್ ಪಾಟೀಲ್ ತೆಗಲ್ತಿಪ್ಪಿ ಮಹಾಸಭೆಯ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷರಾದ ಮಂಜುನಾಥ್ ಅಂಕಲಗಿ ತಾತಗೌಡ ಪಾಟೀಲ್ ಶರಣಗೌಡ ಪಾಟೀಲ್ ನರಿಬೋಳ ದೇವಿಂದ್ರ ಜವಳಿ ನರಿಬೋಳ ಮಲ್ಲಿಕಾರ್ಜುನ್ ಪಾಟೀಲ್ ಇದ್ದರು.