ಕರ್ನಾಟಕ ಲಿಂಬ್ರಾ ಗಾಂಧಿ ಕಟ್ಟಡ ಕಾರ್ಮಿಕರ ಸಂಘ ಉದ್ಘಾಟನೆ

ಹೊನ್ನಾಳಿ ಮಾ.16; ಕರ್ನಾಟಕ ಲಿಂಬ್ರಾ ಗಾಂಧಿ ಕಟ್ಟಡ ಕಾರ್ಮಿಕರ ಸಂಘದ ಮತ್ತು ಭಾರತ್ ಜನ ಸೇವಾ ಚಾರಿಟೇಬಲ್ ಟ್ರಸ್ಟ್  ಹೊನ್ನಾಳಿ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಲಿಂಬ್ರಾ ಗಾಂಧಿ ಕಟ್ಟಡ ಕಾರ್ಮಿಕರ ಸಂಘದ ಉದ್ಘಾಟನೆ ಮತ್ತು ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಕನಕದಾಸ ರಂಗ ಮಂದಿರ ಹೊನ್ನಾಳಿಯಲ್ಲಿ ನಡೆಯಿತು ಸಮಾರಂಭದ ಅಧ್ಯಕ್ಷರಾಗಿ ಶ್ರೀಮತಿ ನಗಿನ ಬಾನು ದಾದಾಪೀರ್. ರೇಣುಕಾಚಾರ್ಯ ಶಾಸಕರ ಅನುಪ ಸ್ಥಿತಿಯಲ್ಲಿ ಪುರಸಭೆ ಅಧ್ಯಕ್ಷರಾದ ಸುಮಾ ಮಂಜುನಾಥ್ ಮಾತನಾಡಿದರು ಕಟ್ಟಡ ಕಾರ್ಮಿಕರಿಗೆ ನಮ್ಮ ಬಿಜೆಪಿ ಸರ್ಕಾರದಿಂದ ಬಹಳಷ್ಟು ಸೌಕರ್ಯಗಳನ್ನು ಕೊಟ್ಟಿದ್ದು ಕಾರ್ಮಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಬೇಕು ಹಾಗೆ ಇನ್ನು ಹೆಚ್ಚಿನ ಅನುದಾನ ಹಣವನ್ನು ಬಿಡುಗಡೆ ಮಾಡಿದ್ದು ತಾವು ಅದರ ಸದುಪಯೋಗ ಪಡೆದುಕೊಳ್ಳಬೇಕು. ಓದುವಂತ ವಿದ್ಯಾರ್ಥಿಗಳಿಗೆ ಟ್ಯಾಬ್ ಮತ್ತು ಸ್ಕಾಲರ್ಶಿಪ್ ನಮ್ಮ ಸರಕಾರದಿಂದ ಬಿಡುಗಡೆ ಮಾಡಲಾಗಿದೆ ಎಂದರು.ಅಧ್ಯಕ್ಷರಾದ ನಗಿನ ಬಾನು ದಾದಾಪೀರ್ ಮಾತನಾಡಿ ಕಟ್ಟಡದ ಕಾರ್ಮಿಕರಿಗೆ  ಸೌಲಭ್ಯಗಳನ್ನು ನೀಡಲು ಹಳ್ಳಿಹಳ್ಳಿ ಗಳಿಗೆ ಪ್ರಯಾಣ ಮಾಡಿ ಅದರ ಸದುಪಯೋಗವನ್ನು ಮಾಡಿಕೊಳ್ಳಲು ಶ್ರಮಿಸಿದ್ದೇನೆ ಮದುವೆ ಕಾರ್ಯಗಳಿಗೂ ಮಕ್ಕಳ ವಿದ್ಯಾಭ್ಯಾಸ ಕಟ್ಟಡ ಮನೆಗಳಿಗೂ ಸಹಾಯಧನ ಬರುವುದನ್ನ ಪ್ರತಿಯೊಬ್ಬರಿಗೂ ತಿಳಿಸಿದ್ದೇನೆ ಇನ್ನೂ ಆದರೂ ಸಹ ಇದರ ಬಗ್ಗೆ ನಮ್ಮ ಕಟ್ಟಡ ಕಾರ್ಮಿಕರಿಗೆ ಮಾಹಿತಿಯ ಕೊರತೆ ಇದ್ದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಂಘದವರು ಪ್ರತಿಯೊಬ್ಬ ಕಟ್ಟಡ ಕಾರ್ಮಿಕರಿಗೂ ಸಿಗಬೇಕಾದ ಸೌಲತ್ತುಗಳನ್ನು ಆದಷ್ಟು ಬೇಗ ತಿಳಿಸಲು ಪ್ರಯತ್ನ ಪಡುತ್ತಿವೆ ಕಟ್ಟಡ ಕಾರ್ಮಿಕರು ಗೊತ್ತಿರುವ ಕಾರ್ಮಿಕರಿಗೆ ಸರಿಯಾದ ಮಾಹಿತಿಯನ್ನು ಕೊಟ್ಟು ಸರಕಾರದಿಂದ ಬರುವಂತ ಎಲ್ಲಾ ಸವಲತ್ತುಗಳನ್ನು ತೆಗೆದುಕೊಳ್ಳಬೇಕಾಗಿ ವಿನಂತಿಸಿಕೊಂಡರು.ಭಾರತ್ ಜನ ಸೇವಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀನಿವಾಸ್ ಮಾತನಾಡಿ ಕಟ್ಟಡ ಕಾರ್ಮಿಕರಿಗೆ ಸಿಗುವಂತ ಸವಲತ್ತುಗಳು ಸರಿಯಾಗಿ ಸಿಗುತ್ತಿಲ್ಲ ಈಗಿನ ರಾಜಕಾರಣದಲ್ಲಿ ಕಾರ್ಮಿಕರಿಗೆ ಯಾವ ಸೌಲತ್ತು ಇದೆ ಎಂಬುದು ತಿಳಿಸುವುದಿಲ್ಲ ಎಲೆಕ್ಷನ್ ಬಂದಾಗ ಓಟಿ ಗೋಸ್ಕರ ಕೆಲಸ ಮಾಡುತ್ತಾರೆ ಹಾಗಂತ ಎಲ್ಲರು ಹಾಗೆ ಮಾಡುವುದಿಲ್ಲ ಈಗಲಾದರೂ ಕಟ್ಟಡ ಕಾರ್ಮಿಕರಿಗೆ ಏನೆಲ್ಲಾ ಸವಲತ್ತು ಸಿಗುತ್ತದೆ ಎಂಬುದರ ಬಗ್ಗೆ ಜನಪ್ರತಿನಿಧಿಗಳು ಒದಗಿಸಿ ಕೊಡಬೇಕು  ಎಂದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ.ಸುರೇಶ್ ಹೊಸಕೇರಿ. ರಾಜು ಕಣಗಣ್ಣರ.ಬಿ ಸಿದ್ದಪ್ಪ. ಎಂ ಸುರೇಶ್ ಪುರಸಭೆ ಮುಖ್ಯ ಅಧಿಕಾರಿ ವೀರಭದ್ರಯ್ಯ ಕಂದಾಯ ಅಧಿಕಾರಿ ವಸಂತ್ ಹಾಗೆ ಕಾರ್ಮಿಕ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ಸಂಘದ ಪದಾಧಿಕಾರಿ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.