ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆ: ವಿಮೆ ಕಂತು ತುಂಬಲು ರೈತರಿಗೆ ಸೂಚನೆ

ಕಲಬುರಗಿ,ನ.16:ಕಲಬುರಗಿ ಜಿಲ್ಲೆಯಲ್ಲಿ 2022ರ ಹಿಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಜಿಲ್ಲೆಯ ಎಲ್ಲಾ ರೈತರು ಕೆಳಕಂಡ ಪ್ರಮುಖ ಬೆಳೆಗಳಿಗೆ ವಿಮಾ ಕಂತು ತುಂಬಿ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಬೇಕೆಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಬೆಂಗಳೂರಿನ ಯುನಿವರ್ಸಲ್ ಸೊಂಪೊ ಜೆನೆರಲ್ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ ವಿಮಾ ಸಂಸ್ಥೆ ನಿಗದಿಪಡಿಸಲಾಗಿದೆ. ನಿರ್ಧರಿತ ಬೆಳೆಗಳ ವಿವರ ಇಂತಿದೆ. ಜೋಳ (ಮಳೆಯಾಶ್ರಿತ), ಜೋಳ (ನೀರಾವರಿ), ಕಡಲೆ (ಮಳೆಯಾಶ್ರಿತ), ಸೂರ್ಯಕಾಂತಿ (ಮಳೆಯಾಶ್ರಿತ), ಸೂರ್ಯಕಾಂತಿ (ನೀರಾವರಿ) ಹಾಗೂ ಕುಸುಮೆ (ಮಳೆಯಾಶ್ರಿತ) ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಲು 2022ರ ನವೆಂಬರ್ 30 ಕೊನೆಯ ದಿನವಾಗಿದೆ. ಕಡಲೆ (ನೀರಾವರಿ) ಬೆಳೆಗೆ ನೋಂದಣಿ ಮಾಡಿಕೊಳ್ಳಲು 2022ರ ಡಿಸೆಂಬರ್ 16 ಕೊನೆಯ ದಿನವಾಗಿದೆ. ಗೋಧಿ (ಮಳೆಯಾಶ್ರಿತ), ಗೋಧಿ (ನೀರಾವರಿ) ಹಾಗೂ ಭತ್ತ (ನೀರಾವರಿ) ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಲು 2022ರ ಡಿಸೆಂಬರ್ 31 ಕೊನೆಯ ದಿನವಾಗಿದೆ.
ಪ್ರಸಕ್ತ ಸಾಲು ಮತ್ತು ಹಿಂಗಾರು ಹಂಗಾಮಿನಲ್ಲಿ ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಥವಾ ಸ್ಧಳ, ನಿರ್ದಿಷ್ಟ, ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಗಾಸ್ಫೋಟ ಮತ್ತು ಗುಡುಗು ಮಿಂಚುಗಳಿಂದಾಗಿ ಉಂಟಾಗುವ ಬೆಂಕಿ ಅವಗಡ ಸಂದರ್ಭದಲ್ಲಿ ಬೆಳೆ ನಷ್ಟವುಂಟಾದ ರೈತರು ಬೆಳೆ ವಿಮೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ರೈತರು ಉಳಿದ ಬೆಳೆಗಳ ಆಯ್ಕೆಗೆ ಆಯಾ ತಾಲೂಕಿನ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಹಾಗೂ ನೋಂದಣಿಗಾಗಿ ಹತ್ತಿರದ ಬ್ಯಾಂಕುಗಳಿಗೆ ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘÀಗಳಿಗೆ ಸಂಪರ್ಕಿಸಿ ಬೆಳೆ ವಿಮೆ ನೋಂದಣಿಯ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ರೈತರು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 1800-200-5142 / 1800-200-4030 ತಮ್ಮ ಆಯಾ ತಾಲೂಕಿನ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಹಾಗೂ ಬೆಂಗಳೂರಿನ ಯುನಿವರ್ಸಲ್ ಸೊಂಪೊ ಜನರಲ್ ಇನ್ಸುರೆನ್ಸ್ ಕಂಪನಿ ಲಿ. ವಿಮಾ ಸಂಸ್ಥೆ ಈ ಕೆಳಕಂಡ ವಿಮಾ ಪ್ರತಿನಿಧಿಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಕಲಬುರಗಿ ಜಿಲ್ಲೆ-ಮೊಬೈಲ್ ಸಂಖ್ಯೆ 8147603315, ಅಫಜಲಪೂರ-9902356434, ಆಳಂದ-9702944943/ 9620006812, ಚಿಂಚೋಳಿ-8095384057, ಕಾಳಗಿ-9000481448, ಶಹಾಬಾದ-9113985051, ಚಿತ್ತಾಪೂರ-7996369510, ಜೇವರ್ಗಿ-9845661193, ಕಲಬುರಗಿ-8867508750/ 8147603315, ಸೇಡಂ-7204579007, ಕಮಲಾಪುರ-7259754689 ಹಾಗೂ ಯಡ್ರಾಮಿ-9880222988 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.