ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆ: ಪ್ರಚಾರ ವಾಹನಗಳಿಗೆ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಚಾಲನೆ

ವಿಜಯಪುರ:ನ.17: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆಯ ಪ್ರಚಾರ ಫಲಕಗಳನ್ನೊಳಗೊಂಡ ಪ್ರಚಾರ ವಾಹನಗಳಿಗೆ ಮಂಗಳವಾರಿ ಅಪರ ಜಿಲ್ಲಾಧಿಕಾರಿಗಳಾದ ರಮೇಶ ಕಳಸದ ಅವರು ಚಾಲನೆ ನೀಡಿದರು.
ಪ್ರಸಕ್ತ 2022-23ನೇ ಸಾಲಿನ ಹಿಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆಯ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿದ್ದು, ಅದರಂತೆ ಜಿಲ್ಲೆಯ ಎಲ್ಲ ತಾಲೂಕಿಗೆ ಒಂದರಂತೆ ಒಟ್ಟು 10 ಪ್ರಚಾರ ವಾಹನಗಳ ಮೂಲಕ ಈ ಯೋಜನೆ ಪ್ರಚಾರ ಕೈಗೊಳ್ಳಲಾಗುತ್ತಿದ್ದು, ಈ ವಾಹನಗಳಿಗೆ ಮಂಗಳವಾರ ಚಾಲನೆ ನೀಡಲಾಗಿದ್ದು, ಮುಸುಕಿನ ಜೋಳ(ನೀ) ಮತ್ತು ಈರುಳ್ಳಿ (ನೀ) ಬೆಳಿಗೆಳಿಗೆ 2022ರ ನವೆಂಬರ್ 30, ಕಡಲೆ ನೀರಾವರಿ ಮತ್ತು ಮಳೆ ಆಶ್ರಿತ ಬೆಳೆಗಳಿಗೆ 2022ರ ಡಿಸೆಂಬ್ 31 ಹಾಗೂ ನೀರಾವರಿ ಸೂರ್ಯಕಾಂತಿ, ಶೇಂಗಾ ಮತ್ತು ಈರುಳ್ಳಿ ಬೆಳೆಗಳಿಗೆ ದಿನಾಂಕ : 28-02-2023 ನೊಂದಣಿಗೆ ಕೊನೆಯ ದಿನವಾಗಿದ್ದು, ಎಲ್ಲ ಹಳ್ಳಿಗಳಲ್ಲಿ ಹೆಚ್ಚಿನ ಪ್ರಚಾರ ಕೈಗೊಂಡು ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಹೆಚ್ಚಿನ ರೈತರು ನೋಂದಾಯಿಸಿಕೊಳ್ಳುವಂತೆ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅಗ್ರಿಕಲ್ಚರ್‍ಲ್ ಇನ್ಸೂರೆನ್ಸ್ ಕಂಪನಿಯ ಅಧಿಕಾರಿಗಳು ಸೇರಿದಂತೆ ಕೃಷಿ ಇಲಾಖೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.