ಕರ್ನಾಟಕ ರೆಡ್ಡಿ ಜನ ಸಂಘದ ನಿರ್ದೇಶಕರಾಗಿಗಣಪಾಲ ಐನಾಥರೆಡ್ಡಿ ಅವಿರೋಧ ಆಯ್ಕೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.13: ಕರ್ನಾಟಕ ರೆಡ್ಡಿ ಜನ ಸಂಘದ ನಿರ್ದೇಶಕರಾಗಿ ಗಣಪಾಲ ಐನಾಥರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕರ್ನಾಟಕ ರೆಡ್ಡಿ ಜನ ಸಂಘದ  ಆಡಳಿತ ಮಂಡಳಿಯ ಮುಂದಿನ ಮೂರು ವರ್ಷಗಳ ಅವಧಿಯ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿತ್ತು.
ನಿಗಧಿತ ಸ್ಥಾನಗಳಿಗಿಂತ ಹೆಚ್ಚಿನ ಜನ ಆಯ್ಕೆ ಬಯಸಿದ್ದರು. ಆದರೆ ನಂತರ ಮುಖಂಡರೆಲ್ಲರೂ  ಸೇರಿ ಅವಿರೋಧ ಆಯ್ಕೆ ನಡೆಸಿದರು.
ಆಯ್ಕೆಯಾದ ಬಹುತೇಖರು ಬೆಂಗಳೂರು ಭಾಗದವರಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಿಂದ ಐನಾಥರೆಡ್ಡಿ ಒಬ್ಬರೇ ಆಯ್ಕೆಯಾಗಿದ್ದಾರೆ.
ಸಂಘದ ಮುಖಂಡರೊಂದಿಗಿನ ಸಂಪರ್ಕ ಮತ್ತು ಬಳ್ಳಾರಿಯಲ್ಲಿ ವೇಮನ ಪೀಠದ ಅಧ್ಯಕ್ಷರಾಗಿ ಕೈಗೊಂಡ ಕಾರ್ಯಕ್ರಮಗಳನ್ನು ಪರಿಗಣಿಸಿ ಈ ಅವಕಾಶ ದೊರೆತಿದೆ ಎನ್ನಬಹುದು.