ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಪಾಲಿಕೆ ಚುನಾವಣಾ ಕಣಕ್ಕೆ:ರೆಡ್ಡಿ

ಬಳ್ಳಾರಿ, ಏ.02: ಈ ತಿಂಗಳು ನಡೆಯಲಿರುವ ಇಲ್ಲಿನ ಮಹಾನಗರ ಪಾಲಿಕೆಯ 39 ವಾರ್ಡುಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡ ರವಿ ಕೃಷ್ಣಾರೆಡ್ಡಿ ಪ್ರಕಟಿಸಿದ್ದರೆ.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ಭ್ರಷ್ಠಾಚಾರ ರಹಿತ ಆಡಳಿತ, ಆಮಿಷವಿಲ್ಲದೆ ಚುನಾವಣೆ ಎದುರಿಸಲು ಸಿದ್ದರಾಗಿದ್ದೇವೆ. ಸದ್ಯ ಪಿ.ನಾರಾಯಣಕುಮಾರ್, ತಸ್ಲಿಮಾ, ಎ.ಕೃಷ್ಣಾಬಾಯಿ, ಹೇಮಾವತಿ, ಜಾನಕಿ ಯಾದವ್, ವಿಜಯಲಕ್ಷ್ಮಿ, ಅರುಣ ಪ್ರಿಯಾ, ಜಯಲಕ್ಷ್ಮಿ ಚಂದ್ರಪ್ಪ, ಲೋಕೇಶ್, ಶ್ರೀನಿವಾಸರೆಡ್ಡಿ, ಭಾಗ್ಯಮ್ಮ, ಮಲ್ಲಯ್ಯ, ಚಿದಾನಂದ, ವೆಂಕಟೇಶಬಾಬು, ಕಾಳಮ್ಮ ಇವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಏ.5ರ ನ್ಯಾಯಾಲಯದ ತೀರ್ಪು ನೋಡಿ ಯಾರು ಯಾವ ವಾರ್ಡಿನಲ್ಲಿ ಸ್ಪರ್ಧಿಸಬೇಕೆಂಬುದು ನಿರ್ಧರಿಸಲಿದೆ. ಅಲ್ಲದೇ ಉಳಿದ ವಾರ್ಡುಗಳ ಅಭ್ಯರ್ಥಿಗಳನ್ನು ಸಹ ಆಯ್ಕೆ ಮಾಡಲಿದೆಂದರು.
ಹಣ ವೆಚ್ಚ ಮಾಡುವ ಅಭ್ಯರ್ಥಿ ನಮಗೆ ಬೇಕಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವವರಾಗಬೇಕು ಎಂದ ಅವರು, ಬಳ್ಳಾರಿ ನಗರದ ಅಸ್ವಚ್ಛತೆ, ಕುಡಿಯುವ ನೀರು, ಚರಂಡಿ ಸಮಸ್ಯೆ ಬಗ್ಗೆ ಈ ವರೆಗೆ ಆಡಳಿತ ನಡೆಸಿದವರ ನಿರ್ಲಕ್ಷದ ಬಗ್ಗೆ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಅಭ್ಯರ್ಥಿಗಳು, ಮುಖಂಡರು ಹಾಜರಿದ್ದರು.