ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾ  ಅಧ್ಯಕ್ಷರಾಗಿ ಚಿದಾನಂದಪ್ಪ ಆಯ್ಕೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.14: ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾಗಿ ಬಳ್ಳಾರಿಯ ಕೆ.ಇ.ಚಿದಾನಂದಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
 ಒಕ್ಕೂಟದ ರಾಜ್ಯ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಅವರು  ಇತ್ತೀಚೆಗೆ ನಡೆದ ಒಕ್ಕೂಟದ ಸಮಾವೇಶದಲ್ಲಿ ಚಿದಾನಂದಪ್ಪ ಅವರಿಗೆ ನೇಮಕಾತಿ  ಆದೇಶ ಪತ್ರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ  ನೀಡಿದರು.
ಒಕ್ಕೂಟದ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಕೆರೆಕೋಡಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ರಾಮರಾಜು, ಉಪಾಧ್ಯಕ್ಷರಾಗಿ ಯು.ಎರ್ರಿಸ್ವಾಮಿ, ಪದ್ಮಾ ಹಾಗೂ ಪ್ರಭಾಕರ್ ಅವರನ್ನು, ಖಜಾಂಚಿಯಾಗಿ ಧನಂಜಯ್ ಅವರನ್ನು, ಸಂಘಟನಾ ಕಾರ್ಯದರ್ಶಿಗಳಾಗಿ ಸತ್ಯನಾರಾಯಣಸ್ವಾಮಿ, ಲಕ್ಷ್ಮಣ ಆದೋನಿ ಹಾಗೂ ಬಾಲಕೃಷ್ಣ ಅವರನ್ನು  ನೇಮಕಗೊಂಡಿದ್ದಾರೆ.
ನೂತನ  ಸಮಿತಿಯು ಜಿಲ್ಲೆಯ ಹಿಂದುಳಿದ ವರ್ಗಗಳ ಶ್ರಯೋಭಿವೃದ್ಧಿಗಾಗಿ ಶ್ರಮಿಸಲು ಮತ್ತು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಹಿಂದುಳಿದ ವರ್ಗಗಳ ಘಟಕಗಳನ್ನು ರಚಿಸಿ, ರಾಜ್ಯ ಘಟಕದ ನಿರ್ದೇಶನದಂತೆ ಹಿಂದುಳಿದ ಸಮುದಾಯಗಳ ನ್ಯಾಯಕ್ಕಾಗಿ ಶ್ರಮಿಸುವಂತೆ ರಾಜ್ಯಾಧ್ಯಕ್ಷರು ನೂತನ ಪದಾಧಿಕಾರಿಗಳಿಗೆ ಸೂಚಿಸಿದ್ದಾರೆ.