ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಷನ್ ಅಮ್ಮುಂಜೆ ಸೆಕ್ಟರ್ ವಾರ್ಷಿಕ ಮಹಾಸಭೆ

ಮಂಗಳೂರು, ಜ.೨- ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಷನ್ ಅಮ್ಮುಂಜೆ ಸೆಕ್ಟರ್ ಇದರ ವಾರ್ಷಿಕ ಮಹಾ ಸಭೆಯು  ಸೈಫುಲ್ಲಾ ಸಖಾಫಿ ಬಡಕಬೈಲ್ ಇವರ ಅಧ್ಯಕ್ಷತೆಯಲ್ಲಿ  ತಾಜುಲ್ ಉಲೇಮ ಸುನ್ನಿ ಸೆಂಟರ್ ಅಮ್ಮುಂಜೆಯಲ್ಲಿ ಇತ್ತೀಚಿಗೆ ನಡೆಯಿತು.

ಮೂಡಬಿದ್ರಿ ಡಿವಿಷನ್ Sಔ ಉಬೈದುಲ್ಲಾ ಸಾಖಾಫಿ ಉದ್ಘಾಟಿಸಿ, ಹಂಝ ಹಮೀದ್. ಟಿ. ಹೆಚ್ ಸ್ವಾಗತಿಸಿ  ವಾರ್ಷಿಕ ವರದಿ ವಾಚಿಸಿದರು. ಹಕೀಮ್ ವರಕ್ಕೋಡಿ ಲೆಕ್ಕ ಪತ್ರ ಮಂಡಿಸಿದರು.

ನಂತರ ಡಿವಿಷನ್ ಕಾರ್ಯದರ್ಶಿ   ಸಿದ್ದಿಕ್ ಬಜ್ಪೆ, ಡಿವಿಷನ್ ಅಧ್ಯಕ್ಷರು ರಿಯಾಜ್ ಸಹದಿ ಇವರ ಉಪಸ್ಥಿತ ರೊಂದಿಗೆ ನೂತನ ಸಮೀತಿ ರಚನೆ ಮಾಡಲಾಯಿತು.

ಅಧ್ಯಕ್ಷರಾಗಿಸೈಫುಲ್ಲಾ ಸಖಾಫಿ ಬಡಕಬೈಲ್, ಪ್ರಧಾನ ಕಾರ್ಯದರ್ಶಿ ಯಾಗಿ ಹಕೀಮ್ ವಾರಕ್ಕೊಡಿ, ಕೋಶಾಧಿಕಾರಿ ಯಾಗಿ ಖಲೀಲ್ ರಹೀಮಾನ್ ಅಬ್ಬೆಟ್ಟು ಉಪಾಧ್ಯಕ್ಷರುಗಳಗಿ ನೌಫಾಲ್ ದೆಮ್ಮಲೆ, ನೌಷಾದ್ ಮಲ್ಲುರು,  ಸೆಕ್ರೆಟರಿಸ್ ಗಳಾಗಿ  ಮುಹಮ್ಮದ್ ಶರೀಫ್ ಬಡಕಬೈಲ್, ಅಬ್ದುಲ್ ಫಾತಹಾ ಅಮ್ಮುಂಜೆ, ಹಂಝ ಹಮೀದ್ ತಾಳಿಪ್ಪಾಡಿ, ಮುಹಮ್ಮದ್ ನಿಝಮ್ ಅಮ್ಮುಂಜೆ, ಮೂಸಾ ಶಾಕೀರ್ ಉದ್ದಬೆಟ್ಟು. ಅಬ್ದುಲ್ ಸಮೀರ್ ಮಲ್ಲುರು ಹಾಗೂ ೧೪ ಮಂದಿ ಕಾರ್ಯ ಕಾರಿ ಸದಸ್ಯರನ್ನು  ಆಯ್ಕೆ ಮಾಡಲಾಯಿತು. ವೆಸ್ಟ್ ಝೋನ್ ಸದಸ್ಯರಾದ ಮನ್ಸೂರ್ ಅಮ್ಮುಂಜೆ, SಙS ನಾಯಕರಾದ ಇಕ್ಬಾಲ್ ಅಮ್ಮುಂಜೆ ಹಮೀದ್ ಬದ್ರಿಯಾ ನಗರ ಉಪಸ್ಥಿತರಿದ್ದರು.