ಕರ್ನಾಟಕ ರಾಜ್ಯ ಸರ್ಕಾರ ವಿಧಾನಸೌಧ ಬೆಂಗಳೂರು

ರಾಯಚೂರು.ಡಿ.೦೪-ದೇಶದ ಕಟ್ಟಡ ನಿರ್ಮಾಣ ವಲಯವು ೨೦೧೬ ನವಂಬರ್‌ನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ನೋಟು ಅಮಾನ್ನಿಕರಣ ಬಳಿಕ ಜಾರಿ ಮಾಡಲಾದ ಸರಕು ಸೇವಾ ತೆರಿಗೆ ನೀತಿಯಿಂದಾಗಿ ತೀವ್ರ ಬಿಕ್ಕಟ್ಟಿಗೆ ಸಿಲುಕಿತು. ಇದಾದ ಬಳಿಕ ೨೦೨೦ ಮಾರ್ಚ್‌ನಲ್ಲಿ ದಾಳಿ ಮಾಡಿದ ಕರೋನ ರೋಗವು ಈ ಕ್ಷೇತ್ರವನ್ನು ಮತ್ತಷ್ಟು ಸಂಕಷ್ಟಕ್ಕೆ ಇಡುಮಾಡಿದೆ. ಇತ್ತೀಚೆಗೆ ಏರಿಕೆಯಾಗುತ್ತಿರುವ ಡಿಸೇಲ್ ಹಾಗೂ ಪೆಟ್ರೋಲಿಯಂ ತೈಲ ಬೆಲೆಗಳು ನಿರ್ಮಾಣ ವಲಯದ ಮೇಲೆ ಗಂಭೀರ ಪರಿಣಾಮ ಬೀರಿ ಲಕ್ಷಾಂತರ ಉದ್ಯೋಗಗಳ ನಾಶಕ್ಕೆ ಕಾರಣವಾಗುತ್ತಿವೆ. ನಮ್ಮ ದೇಶದಲ್ಲಿ ಕೃಷಿ ಕ್ಷೇತ್ರದ ಬಳಿಕ ಅತಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಠಿಸಿರುವ ನಿರ್ಮಾಣ ವಲಯದಲ್ಲಿ ಸುಮಾರು ೧೦ ಕೋಟಿ ಜನರು ಕೆಲಸ ಮಾಡುತ್ತಿದ್ದಾರೆ. ಕೊರೋನಾ ಲಾಕ್‌ಡೌನ್‌ನಲ್ಲಿ ಅತಿ ಹೆಚ್ಚು ತೊಂದರೆಗೊಳಪಟ್ಟ ಶ್ರಮ ಜೀವಿಗಳು ಆದರೆ ಕೋರೋನತ್ತರ ಕಾಲಘಟ್ಟದಲ್ಲಿ ಅವರ ಸಂಕಷ್ಟಗಳು ದೂರವಾಗಿಲ್ಲ.
ಈ ಹಿನ್ನಲೆಯಲ್ಲಿ ಕನಸ್ಟ್ರಕ್ಷನ್ ವರ್ಕರ್‍ಸ್ ಫೆಡರೇಷನ್ ಆಫ್ ಇಂಡಿಯಾ (ಸಿ.ಡಬ್ಲ್ಯೂ ಎಫ್.ಐ.) ರಾಯಚೂರು ಸಮಿತಿಯು ಈ ಕೆಳಕಂಡ ಬೇಡಿಕೆಗಳಿಗಾಗಿ ರಾಷ್ಟ್ರೀಯ ಮುಷ್ಕರದ ಹಿನ್ನಲೆಯಲ್ಲಿ ಇಂದು ಪ್ರತಿಭಟನೆ ನಡೆಸಿ ಕೆಳಗಿನ ಬೇಡಿಕೆಗಳಿಗೆ ಸರ್ಕಾರವನ್ನು ಒತ್ತಾಯಿಸುತ್ತದೆ.
ಬೇಡಿಕೆಗಳು :-
ದೇಶದ್ಯಾದಂತ ಕಾನೂನುಬದ್ಧವಾಗಿ ರಚನೆಯಾಗಿರುವ ಕಲ್ಯಾಣ ಮಂಡಳಿ ಉಳಿಯಬೇಕು. ಕಟ್ಟಡ ಉದ್ಯಮವನ್ನು ರಕ್ಷಿಸಬೇಕು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾನೂನು ೧೯೯೬ ಹಾಗೂ ಸೆಸ್ ಕಾನೂನನ್ನು ಪುನಃ ಸ್ಥಾಪಿಸಬೇಕು.
ರೂ. ೩೦೦೦/- ಲಾಕ್‌ಡೌನ್ ನಗದು ಪರಿಹಾರ ಅರ್ಜಿ ಹಾಕಿದ ಎಲ್ಲರಿಗೂ ಕೂಡಲೇ ಪಾವತಿ ಮಾಡಬೇಕು.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಶೈಕ್ಷಣಿಕ ಸಹಾಯಧನ ತಂತ್ರಾಂಶ ಕೂಡಲೇ ಆರಂಭಿಸಿ ಅರ್ಜಿಗಳ ವಿಳಂಬ ವಿಲೆವಾರಿ ನಿಲ್ಲಬೇಕು.
ಮದುವೆ ಸಹಾಯಧನ ವಿಳಂಬ ಮತ್ತು ಬಾಂಡ್ ವಿತರಣೆ ಸರಿಪಡಿಸಿ ಸಹಜ ಮರಣ ಪರಿಹಾರದ ಮೊತ್ತವನ್ನು ರೂ. ೨.೦೦ ಲಕ್ಷಕ್ಕೆ ಹೆಚ್ಚಿಸಬೇಕು. ಅಪಘಾತ ಮರಣ ಪರಿಹಾರದ ಮೊತ್ತವನ್ನು ರೂ. ೧೦.೦೦ ಲಕ್ಷಕ್ಕೆ ಹೆಚ್ಚಿಸಬೇಕು.
ತೆರಿಗೆ ಭತ್ಯೆಯನ್ನು ಪುರುಷ ಫಲಾನುಭವಿಯ ಪತ್ನಿಗೂ ವಿಸ್ತರಿಸಬೇಕು.
ಮನೆ ನಿರ್ಮಾಣಕ್ಕೆ ರೂ. ೫.೦೦ ಲಕ್ಷ ಸಹಾಯಧನ ಜಾರಿಗೊಳಿಸಬೇಕು.
ವೈದ್ಯಕೀಯ ಸಹಾಯಧನ ಹೆಚ್ಚಿಸಿ ಬಾಕಿ ಇರುವ ವೈದ್ಯಕೀಯ ಅರ್ಜಿಗಳು ಇತ್ಯರ್ಥವಾಗಬೇಕು.
ರೇಷನ್ ಕಿಟ್, ಟೂಲ್‌ಕಿಟ್, ಸುರಕ್ಷ ಕಿಟ್, ಬೂಸ್ಟರ್‌ಕಿಟ್ ಖರೀದಿಯಲ್ಲಿ ಪಾರದರ್ಶಕತೆ ಕಾಪಾಡದೆ ಇರುವುದು ಹಾಗೂ ಮಂಡಳಿಯ ನಿಯಮಾವಳಿ, ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಕಾರ್ಮಿಕ ಇಲಾಖೆ ನಿರ್ದೇಶನ ಉಲ್ಲಂಘನೆ ಈ ವಿಚಾರದಲ್ಲಿ ತನಿಖೆಗೆ ಒತ್ತಾಯ.
ಬೋಗಸ್ ಕಾರ್ಡುಗಳಿಗೆ ನಿಯಂತ್ರಣ ಹಾಕಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಪ್ರತ್ಯೇಕ ಸಾಫ್ಟವೇರ್ ಅಳವಡಿಕೆ ಶಿಘ್ರವಾಗಲಿ.
ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ನೋಂದಣಿಗೆ ಪ್ರತ್ಯೇಕ ಐ.ಡಿ. ಜಾರಿಯಾಗಲಿ ಕಲ್ಯಾಣ ಮಂಡಳಿಯಲ್ಲಿ ಸಿ.ಐ.ಟಿ.ಯು.ಗೆ ಕಾರ್ಮಿಕ ಪ್ರಾತಿನಿಧ್ಯ ನೀಡಬೇಕು.
೨೦೧೬ ರಿಂದ ನವೀಕರಣಗೊಳ್ಳದಿರುವ ಕಾರ್ಮಿಕರಿಗೆ ನವೀಕರಣಕ್ಕೆ ಅವಕಾಶ ನೀಡಬೇಕು.
ಮಂಡಳಿ ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು.
ಅಂತರರಾಜ್ಯ ವಲಸೆ ಕಾರ್ಮಿಕರ ಕಾನೂನು ೧೯೭೯ ರ ಪರಿಣಾಮ ಕಾರಿ ಜಾರಿ ಮಾಡಬೇಕು.