
ಸಂಜೆವಾಣಿ ವಾರ್ತೆ
ಹರಿಹರ ಜು 22 ; ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಹಾಗೂ ಎಲ್ಲಾ ಜಿಲ್ಲಾ ಮತ್ತು ತಾಲೂಕು ಶಾಖೆಗಳ ಮೇಲೆ ಸುಳ್ಳು ಆರೋಪ ಮಾಡಿರುವ ನೌಕರರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಹರಿಹರ ತಾಲೂಕಿನ ತಹಶೀಲ್ದಾರ್ ಅವರಿಗೆ ಹರಿಹರ ತಾಲೂಕು ಸರ್ಕಾರಿ ನೌಕರರ ಸಂಘದಿಂದ ಮನವಿಯನ್ನು ಸಲ್ಲಿಸಲಾಯಿತು.ಈ ಕಾರ್ಯಕ್ರಮದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಭೂಮೇಶ್ ಖಜಾಂಚಿಗಳಾದ ರೇವಣಸಿದ್ದಪ್ಪ ಅಂಗಡಿ ಗೌರವಾಧ್ಯಕ್ಷರಾದ ಎಂ ಉಮಣ್ಣ. ಕಾರ್ಯದರ್ಶಿ ಎಂ ಬಿ ಮಂಜುನಾಥ್. ಉಪಾಧ್ಯಕ್ಷರಾದ ಪ್ರಕಾಶ್. ಶೋಭಾ ನಾರಾಯಣ ರೆಡ್ಡಿ. ಡಿಟಿ ಮಂಜಪ್ಪ. ವಿಜಯ ಪ್ರಕಾಶ್. ಖಜಾನಾಧಿಕಾರಿಗಳಾದ ಮಂಜುನಾಥ್. ಮಹಮ್ಮದ್ ರಫಿ. ತುಕಾರಾಂ. ಹೇಮಂತ್ ಕುಮಾರ ತಾಲೂಕು ಕಚೇರಿಯ ಸೋಮಶೇಖರ್. ನರಸಮ್ಮ ಸೌಮ್ಯ ಅಶೋಕ್ ಉಮೇಶ್ ಆರಿಫ್ ಸಿಬ್ಬಂದಿಗಳು ಹಾಗೂ ಇತರೆ ಇಲಾಖೆಗಳ ನೌಕರರು ಹಾಜರಿದ್ದರು.