ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ರಚನೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಮಾ.12 ಪಟ್ಟಣದ ಗುರುಭವನದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ತಾಲೂಕು  ಘಟಕದ  ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬಿಇಒ  ಎಂ ಸಿ ಆನಂದ್ ನೆರವೇರಿಸಿ ಮಾತನಾಡಿದರು. ಶಿಕ್ಷಕರು ತಮ್ಮ ಬೋಧನೆಯ ಜೊತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ಹೊರ  ಹಾಕುವ ಮೂಲಕ ಒಬ್ಬ ಮಾದರಿ ಶಿಕ್ಷಕರಾಗಿ ಬೆಳೆಯಬೇಕು ಎಂದರು.
 ಕಾರ್ಯಕ್ರಮದಲ್ಲಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ಗುರುಗಳಿಗೆ , ಗುರುಮಾತೆಯರಿಗೆ ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ  ಕ್ಷೇತ್ರ ಸಮನ್ವಯ ಅಧಿಕಾರಿಯಾದ ಎಂ ಎಸ್ ಪ್ರಭಾಕರ್ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಎಲ್ ಡಿ ರವಿನಾಯ್ಕ,  ಜಿಲ್ಲಾ ಯೋಜನಾಧಿಕಾರಿಗಳಾದ ಶೇಖರಪ್ಪ ಎಂ ಹೊರಪೇಟೆ ಮಾತನಾಡಿದರು ಪರಿಷತ್ತಿನ ಅಧ್ಯಕ್ಷರಾದ ಎ. ಸೋಮನಗೌಡ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಸಿ ನಿಂಗಪ್ಪ,ಮಾತನಾಡಿದರು. ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸಿ .ಕೊಟ್ರೇಶ್ , ಇಸಿಓ ಮುಸ್ತಾಕ್ ಅಹಮದ್, ಶಿವಲಿಂಗ ಸ್ವಾಮಿ ತಾಲೂಕು ಪ್ರಧಾನ ಕಾರ್ಯದರ್ಶಿ ಬಿ. ಕೊಟ್ರಪ್ಪ, ನೌಕರ ಸಂಘದ ಅಧ್ಯಕ್ಷ ಎಂಪಿಎಂ ಮಂಜುನಾಥ ಹೆಚ್ .ಸುರೇಶ್ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದರು. ವೇದಿಕೆ ಮೇಲಿರುವ ಅತಿಥಿಗಳಿಗೆ ಪ್ರಧಾನ ಕಾರ್ಯದರ್ಶಿ ಟಿ. ಸೋಮಶೇಖರ ಸ್ವಾಗತ ಕೋರಿದರು, ಉಪಾಧ್ಯಕ್ಷರಾದ ಕೆ ಹುಸೇನ್ ಸಾಹೇಬ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಶಾರದಮ್ಮ ಮಂಜುನಾಥ್ ಪ್ರಾರ್ಥಿಸಿದರು. ಪರಿಷತ್ತಿನ ಪದಾಧಿಕಾರಿಗಳಾದ ಡಿಎಂ ಶಾರದಮ್ಮ ಬಿ.ಗೀತಾ, ಡಿ ಸುಧಾ, ಶಕುಂತಲಾ ಹೂಗಾರ್, ಎಮ್ ರಾಜು, ಮುನೀರ್ ಭಾಷಾ, ದಯಾನಂದ, ಬಿ ಪ್ರಕಾಶ್, ಯಂಕನಾಯ್ಕ ,  ಯು ಗೋಣಿಬಸಪ್ಪ, ಎಂ ನವೀನ್ ಕುಮಾರ,  ಎಚ್ ಕೊಟ್ರಪ್ಪ,  ಸಿ.ವೈ ಮೊರ್ನಾಳ್ ,  ಭರಮಪ್ಪ , ಆಂಜನೇಯ, ಎಲ್ ರವಿಚಂದ್ರ ನಾಯ್ಕ , ಶಂಬಣ್ಣ,  ರಾಜಶೇಖರ್ ಗೌಡ , ಶಾಂತನಗೌಡ, ಹಿರ್ಯನಾಯ್ಕ,  ವೀರನಗೌಡ ,ಶ್ರೀನಾಥ್ ಆಚಾರ್, ದಾದಿಬೀ,  ಶಾಂತಕುಮಾರಿ, ನಿರ್ಮಲ ,ದೀಪಿಕಾ, ಹರೀಶ, ಎಲ್ ರೆಡ್ಡಿ ನಾಯ್ಕ, ಹನುಮರೆಡ್ಡಿ ಇಟಗಿ ಮಂಜುನಾಥ ಇಟಗಿ ಪ್ರಭಾಕರ ಇತರರಿದ್ದರು