ಕರ್ನಾಟಕ ರಾಜ್ಯ ಪೋಲಿಸ್ ಸುವರ್ಣ ಮಹೋತ್ಸವ: ವಾಕ್‌ಥಾನ್ ಸ್ಪರ್ಧೆ

(ಸಂಜೆವಾಣಿ ವಾರ್ತೆ)
ಸಿಂಧನೂರು.ಮಾ.೧೦- ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆ ಐವತ್ತು ವರ್ಷಗಳನ್ನು ಪೂರೈಸಿದ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ‘ವಾಕ್‌ಥಾನ್ ಸ್ಪರ್ಧೆ’ ಯನ್ನು ರಾಯಚೂರು ಜಿಲ್ಲಾ ಪೋಲಿಸ್ ಅಡಿಯಲ್ಲಿ, ಸಿಂಧನೂರು ಉಪ ವಿಭಾಗ, ಸಿಂಧನೂರು ನಗರ ಪೋಲಿಸ್ ಠಾಣೆ, ಗ್ರಾಮೀಣ ಠಾಣೆ, ಸಂಚಾರಿ ಠಾಣೆ, ಬಳಗಾನೂರ ಠಾಣೆ, ತುರವಿಹಾಳ ಠಾಣೆಯ ಪೋಲಿಸರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕ ರಾಜ್ಯ ಪೋಲಿಸ್ @ ೫೦ ಸುವರ್ಣ ಮಹೋತ್ಸವ ‘ವಾಕ್‌ಥಾನ್ ಸ್ಪರ್ಧೆ’ ಯು ಇಂದು ಬೆಳಗ್ಗೆ ೭-೦೦ ಗಂಟೆಗೆ ಸಿಂಧನೂರು ನಗರ ಠಾಣೆಯಿಂದ ಪ್ರಾರಂಭವಾಗಿ ನಗರದ ಕುಷ್ಟಗಿ ರಸ್ತೆಯಲ್ಲಿನ ಸರ್ಕ್ಯೂಟ್ ಹೌಸ್ ವರೆಗೆ ನಗರದ ಗಾಂಧಿ ವೃತ್ತ, ಎಪಿಎಂಸಿ ಮೂಲಕ ಸಾಗಿತು.ಇದರಲ್ಲಿ ಸುಮಾರು ನೂರು ಐವತ್ತು ಪೋಲಿಸ್ ಇಲಾಖೆ ಅಧಿಕಾರಿಗಳು,ಸಿಬ್ಬಂದಿ ಹಾಗೂ ಸಾರ್ವಜನಿಕರು, ಮಕ್ಕಳು ಈ ಸ್ಪರ್ಧೆ ಯಲ್ಲಿ ಭಾಗವಹಿಸಿದ್ದರು.
ವಾಕ್ ಥಾನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹೆಚ್.ಸಿ ಲೋಕೇಶ ದ್ವೀತಿಯ ಸ್ಥಾನವನ್ನು ವೆಂಕಟೇಶ ಹೆಚ್.ಸಿ, ತೃತೀಯ ಸ್ಥಾನ ಪೋಲಿಸ್ ರೇಣುಕಾ ರಡ್ಡಿ ಪಡೆದರು. ಹೆಚ್ಚುವರಿ ಜಿಲ್ಲಾ ಪೋಲಿಸ್ ಅಧಿಕಕರಾದ ಶಿವಕುಮಾರ ಅವರು ಸ್ಪರ್ಧೆ ಯಲ್ಲಿ ಗೆಲುವು ಪಡೆದುಕೊಂಡವರಿಗೆ ಮೆಡಲ್ ನೀಡಿ ಪ್ರಶಂಸಿದರು.
ಇದೇ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಬೀರಪ್ಪ ಶಂಬೋಜಿ, ಡಾ.ಚನ್ನನಗೌಡ ಪಾಟೀಲ್, ಡಿವೈಎಸ್ಪಿ ಬಿ ಎಸ್ ತಳವಾರ, ಸಿಪಿಐ ಸುನೀಲ್ ಮೂಲಿಮನಿ, ಪಿಐ ಸುದೀರ್ ಬೆಂಕಿ, ಪಿಎಸ್‌ಐ ಮಹಮ್ಮದ್ ಇಷಾಕ್, ಹುಸೇನಪ್ಪ ನಾಯಕ ಸೇರಿದಂತೆ ಪೋಲಿಸರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.