ಕರ್ನಾಟಕ ರಾಜ್ಯ ಜಿ.ಪಿ.ಟಿ ಶಿಕ್ಷಕರ ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆ

ಕಡಬ, ಜೂ.೪- ಪ್ರಾಥಮಿಕ ಶಿಕ್ಷಕರು ಪ್ರೌಢಶಾಲೆ ಗ್ರೇಡ್ -೨ ಬಡ್ತಿಗೆ ಅರ್ಹರಲ್ಲ ಈಗಾಗಲೇ ಕೊಟ್ಟ ಮುಂಬಡ್ತಿ ಹಿಂಪಡೆಯಲು ಕೆಎಟಿ ಅದೇಶದ ನೀಡಿದ ಬೆನ್ನಲ್ಲೆ ಜಿಪಿಟಿ ಶಿಕ್ಷಕರು ಮುಂದಿನ ನ್ಯಾಯಲಯದ ಹೋರಾಟಕ್ಕೆ ರೂಪರೇಷೆ ಸಿದ್ದಪಡಿಸಲು ಕರ್ನಾಟಕ ರಾಜ್ಯ ಜಿಪಿಟಿ ಶಿಕ್ಷಕರ ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆ ಬಂದಿದೆ.
ಈ ಅದೇಶವನ್ನು ಅನುಷ್ಠಾನಗೊಳಿಸಿ, ಕರ್ನಾಟಕದ ಸಮಸ್ತ ಜಿ.ಪಿ.ಟಿ ಶಿಕ್ಷಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ವಿವಿಧ ಜಿಲ್ಲೆಗಳಿಂದ ವೈಯಕ್ತಿಕವಾಗಿ ನ್ಯಾಯಲಯದ ಮೊರೆ ಹೋಗಿರುವ ಸಮಾನ ಮನಸ್ಕ ಜಿಪಿಟಿ ಶಿಕ್ಷಕರು ಒಟ್ಟುಗೂಡಿ ಕರ್ನಾಟಕ ರಾಜ್ಯ ಜಿ.ಪಿ.ಟಿ ಶಿಕ್ಷಕರ ಹಿತರಕ್ಷಣಾ ವೇದಿಕೆ ಹುಟ್ಟುಹಾಕಿದ್ದು, ಇದರಡಿಯಲ್ಲಿ ನ್ಯಾಯಲಯಲ್ಲಿ ಮುಂದಿನ ಹೆಜ್ಚಿ ಇಡಲು ರೂಪುರೇಷೆಗಳನ್ನು ಮಾಡಿಕೊಳ್ಳಲಾಗುತ್ತದೆ.
ಕರ್ನಾಟಕ ರಾಜ್ಯದಲ್ಲಿ ಆರ್.ಟಿ.ಇ ಕಾಯಿದೆಯಡಿಯಲ್ಲಿ ೨೦೧೬ ರ ನಂತರ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿಷಯವಾರು ಬೋಧನೆ ಮಾಡಲು ವೃಂದ ಮತ್ತು ನೇಮಕಾತಿ ನಿಯಮದ ೬೬ ಎ ಅಡಿಯಲ್ಲಿ ಪದವೀಧರ ಪ್ರಾಥಮಿಕ ಶಿಕ್ಷಕರನ್ನು (೬-೮ ಜಿ.ಪಿ.ಟಿ ಶಿಕ್ಷಕರು) ನೇಮಕಾತಿ ಮಾಡಲಾಗುತ್ತಿದೆ. ಈಗಾಗಲೇ ಮೂರು ಬಾರಿ ಜಿ.ಪಿ.ಟಿ ಶಿಕ್ಷಕರ ನೇಮಕಾತಿ ನಡೆದು ಒಟ್ಟು ೧೩,೦೦೦ ಜಿ.ಪಿ.ಟಿ ಶಿಕ್ಷಕರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
೨೦೧೬ ರಲ್ಲಿ ನೇಮಕಾತಿ ಹೊಂದಿದ ಶಿಕ್ಷಕರು ಐದು ವರ್ಷಗಳ ಸೇವೆ ಸಲ್ಲಿಸಿದರೂ ಈವರೆಗೆ ಬಡ್ತಿ ನೀಡದೆ ಈ ವೃಂದದ ಶಿಕ್ಷರನ್ನು ಬಡ್ತಿಯಿಂದ ವಂಚಿರತಾನ್ನಾಗಿ ಮಾಡಿದೆ. ೨೦೧೭ರಲ್ಲಿ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳು ಜಾರಿಯಾಗಿದ್ದರೂ, ೨೦೧೬ರ ಪ್ರೌಢ ಶಾಲಾ ಸಹ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಈ ಹೊಸ ಜಿ.ಪಿ.ಟಿ ಶಿಕ್ಷಕರ ಬಡ್ತಿ ವಿಚಾರಗಳ ಅಂಶಗಳ ಬಗ್ಗೆ ತಿದ್ದುಪಡಿ ಮಾಡಿ ಅವಕಾಶವನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಈ ಕಾರ್ಯವು ನಡೆಯದೆ ೨೦೧೭ರಲ್ಲಿ ಪ್ರಾಥಮಿಕ ಶಾಲಾ ಹಂತದಲ್ಲಿ ಜಿ.ಪಿ.ಟಿ ಶಿಕ್ಷಕರ ವೃಂದವು ಸೃಜನೆಯಾದ ನಂತರವು ಪ್ರಾಥಮಿಕ ಶಾಲಾ ಶಿಕ್ಷಕರನ್ನು (೧-೫) ಪ್ರೌಢಶಾಲಾ ಸಹ ಶಿಕ್ಷಕರನ್ನು ಬಡ್ತಿಗೆ ಪರಿಗಣಿಸಲಾಗುತ್ತಿದೆ. ಇದರಿಂದ ನೊಂದ ಹಲವು ಜಿಲ್ಲೆಗಳ ಜಿ.ಪಿ.ಟಿ ಶಿಕ್ಷಕರು ತಮಗೆ ಬಡ್ತಿಯಲ್ಲಿ ಆಗಿರುವ ಆನ್ಯಾಯದ ಬಗ್ಗೆ ಕೆ.ಎ.ಟಿಯ ಮೊರೆ ಹೋಗಿದ್ದರು. ಕೆ.ಎ.ಟಿಯಲ್ಲಿ ಜಿ.ಪಿಟಿ ಶಿಕ್ಷಕರ ಪರವಾಗಿ ವಕೀಲರಾದ ಮದನಗೌಡ ಪಾಟೀಲ್ ಮಾರ್ಗದರ್ಶನಲ್ಲಿ ಸುಮಾರು ಎರಡು ವರ್ಷಗಳ ಸುಧಿರ್ಘ ಹೋರಾಟದ ಫಲವಾಗಿ ನ್ಯಾಯಲಾಯಲವು ೨೦೧೭ ನಂತರ ನೀಡಿರುವ ಬಡ್ತಿಗಳನ್ನು ರದ್ದುಪಡಿಸಿ, ಜಿ.ಪಿ.ಟಿ ಶಿಕ್ಷಕರಿಗೆ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆ ಬಡ್ತಿ ನೀಡುವಂತೆ ಆದೇಶ ಮಾಡಿರುತ್ತದೆ.
ವೇದಿಕೆಯ ಕೇಂದ್ರ ಶಾಖೆಯ ಮೊದಲ ಸಭೆಯಲ್ಲಿ ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಓಂತ್ರಡ್ಕ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಜಿಪಿಟಿ ಶಿಕ್ಷಕ ದಿಲೀಪ್ ಕುಮಾರ್ ಎಸ್ ಅಧ್ಯಕ್ಷರಾಗಿ, ಗದಗ ಜಿಲ್ಲೆ ನವಲಗುಂದ ಪ್ರಶಾಂತ್ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು ೨೫ ಸದಸ್ಯರನ್ನು ಹೊಂದಿರುತ್ತದೆ. ಬಡ್ತಿ ವಿಚಾರದಲ್ಲಿ ಯಾವುದೇ ಸಲಹೆಗಳಿಗೆ ಈ ವೇದಿಕೆಯನ್ನು ಸಂಪರ್ಕಿಸಿ ವೇದಿಕೆಯ ಉಚಿತ ಸಹಾಯ ಪಡೆಯಬಹುದು. ಈ ವೇದಿಕೆಯು ಯಾವುದೇ ಸಂಘಟನೆಗಳಿಗೆ ಪರ್ಯಾಯ
ವಲ್ಲಎಂದು ವೇದಿಕೆಯು ಸ್ಪಷ್ಟಪಡಿಸಿದೆ.

ಕೆ.ಎ.ಟಿ ಆದೇಶವು ಜಿ.ಪಿ.ಟಿ ಶಿಕ್ಷಕರ ಬಡ್ತಿ ವಿಚಾರದಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿದ್ದು, ಸರ್ಕಾರ ಮತ್ತು ಇಲಾಖೆ ಈ ಅದೇಶದ ಆನ್ವಯ ಕ್ರಮ ಕೈಗೊಳ್ಳಲು ಒತ್ತಾಯ ಮಾಡಲು ವೇದಿಕೆಯು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲಿದೆ. ಜಿ.ಪಿ.ಟಿ ಶಿಕ್ಷಕರು ಯಾವುದೇ ಕಾರಣಕ್ಕೂ ಗೊಂದಲಕ್ಕೆ ಒಳಗಾಗಬಾರದು.ಎಲ್ಲಾ ಶಿಕ್ಷಕ ಸಂಘಗಳು ಎಲ್ಲಾ ವೃಂದದ ಶಿಕ್ಷಕರನ್ನು ಶತ್ರುಗಳಂತೆ ಕಾಣದೆ, ನ್ಯಾಯದ ಹಾದಿಯಲ್ಲಿ ನಡೆಯಬೇಕಾಗಿದೆ.
ದಿಲೀಪ್ ಕುಮಾರ್ ಎಸ್,

ಅಧ್ಯಕ್ಷ, ಕರ್ನಾಟಕ ರಾಜ್ಯ ಜಿ.ಪಿ.ಟಿ ಶಿಕ್ಷಕರ ಹಿತರಕ್ಷಣಾ ವೇದಿಕೆ

ಕೆ.ಎ.ಟಿ ಯು ಜಿ.ಪಿ.ಟಿ ಗಳಿಗೆ ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಬೇಕು ಎಂದು ಆದೇಶ ಮಾಡಿರುವುದು ನ್ಯಾಯ ಸಮ್ಮತ್ತವಾಗಿದ್ದು, ಜಿ.ಪಿ.ಟಿ ಗಳಿಗೆ ಬಡ್ತಿಯಲ್ಲಿ ಆಗಿರುವ ಆನ್ಯಾಯದ ಬಗ್ಗೆ ಎಲ್ಲಾ ಆಂಶಗಳನ್ನು ಮಂಡಿಸಲಾಗಿದ್ದು, ನ್ಯಾಯಾಲಯವು ಎಲ್ಲಾ ಅಂಶಗಳನ್ನು ಪರಿಶೀಲಿಸಿ ಆದೇಶ ನೀಡಿರುವುದರಿಂದ ಇದೊಂದು ಐತಿಹಾಸಿಕ ತೀರ್ಪು.
ಮದನ್‌ಗೌಡ ಪಾಟೀಲ್,

ಜಿ.ಪಿ.ಟಿ ಶಿಕ್ಷಕರ ಪರ ವಕೀಲರು