ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದಿಂದ ಶೈಕ್ಷಣಿಕ ಕಾರ್ಯಗಾರ


ಸಂಜೆವಾಣಿ ವಾರ್ತೆ
ಸಂಡೂರು:ಜ:21:  ಸಂಡೂರು: ವಿದ್ಯೆಯಿಂದ ವಿನಯ ಲಭಿಸುತ್ತದೆ, ವಿನಯ ಸಮಾಜದಲ್ಲಿ ಗೌರವ ತಂದುಕೊಡುತ್ತದೆ, ತನ್ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗುತ್ತದೆ, ಜ್ಞಾನ ಸಮಾಜವನ್ನು ಮುನ್ನಡೆಸುತ್ತದೆ,ಎಷ್ಟೇ ಕಲಿತರೂ ಜ್ಞಾನ ಭಾರವಾಗದು.ಆದರೆ ನಾವು ಗಳಿಸಿದ ಸಂಪತ್ತು ನಮಗೆ ಭಾರವಾಗುವುದು. ಹಗುರವಾದ ವಿದ್ಯೆಯನ್ನು ಪಸರಿಸುತ್ತಿರುವ ತಮಗೆಲ್ಲರಿಗೂ ವಂದನೆಗಳು. ಎಂದು ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಷಡಕ್ಷರಯ್ಯ ತಿಳಿಸಿದರು.
ಅವರು ಪಟ್ಟಣದ ಗುರುಭವನದಲ್ಲಿ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ ದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶೈಕ್ಷಣಿಕ ಕಾರ್ಯಗಾರ ಹಾಗೂ ಸಂಡೂರು ಶಿಕ್ಷಣ ರತ್ನ ಪುರಸ್ಕಾರ ಸಮಾರಂಭದಲ್ಲಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿ ಮಕ್ಕಳು ಶಿಕ್ಷಕರೊಂದಿಗೆ ದಿನದ ಹೆಚ್ಚು ಕಾಲ ಕಳೆಯುತ್ತಾರೆ ಹಾಗಾಗಿ ಮುಂದಿನ ಭವಿಷ್ಯವನ್ನು ಕಟ್ಟುವ ನಿಮ್ಮ ಜವಾಬ್ದಾರಿ ಹೆಚ್ಚಿದೆ ಹಳ್ಳಿಗಳ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಕೊರತೆ ಇದೆ ಇಂಗ್ಲೀಷ್ ಗಣಿತ ವಿಜ್ಞಾನಗಳಂತಹ ವಿಷಯಗಳಲ್ಲಿ ಅವರು ಹೆಚ್ಚು ಆಸಕ್ತಿಯನ್ನು ಹೊಂದುವಂತೆ ಮಾಡುವ ಜವಾಬ್ದಾರಿ ನಿಮ್ಮೆಲ್ಲರದು ನಂಜುಂಡಪ್ಪ ವರದಿ ಪ್ರಕಾರ ತಾಲೂಕು ಹಿಂದುಳಿದ ಪ್ರದೇಶ ಈ ಕಳಂಕದಿಂದ ಹೊರಬರಲು ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು .
ತಾಲೂಕು ದಂಡಾಧಿಕಾರಿಗಳಾದ ಅನಿಲ್ ಕುಮಾರ್ ಮಾತನಾಡಿ ಸಮಾಜಕ್ಕೆ ಶಿಕ್ಷಕರ ಕೊಡುಗೆ ಅಪಾರ ಶಿಕ್ಷಕರಿಲ್ಲದ ಹೊರತು ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಅಸಾಧ್ಯ ಪ್ರತಿಯೊಬ್ಬರ ಜೀವನದಲ್ಲೂ ಗುರುಗಳು ಮಹತ್ವವಾದ ಪಾತ್ರ ಹೊಂದಿರುತ್ತಾರೆ ಅಂತಹ ಗುರುವಿನ ಸ್ಥಾನದಲ್ಲಿರುವ ನಿಮ್ಮೆಲ್ಲರಿಗೂ ಅಭಿನಂದನೆಗಳು ಎಂದರು.
 ನಿವೃತ್ತ ಕನ್ನಡ ಉಪನ್ಯಾಸಕರಾದ ಸಿ.ಎಂ ಶಿಗ್ಗಾವಿಯವರು ಗುರುಗಳು ನಡೆದುಕೊಳ್ಳಬೇಕಾದ ರೀತಿ ಅವರ ಮುಂದಿರುವ ಸವಾಲುಗಳು ಮತ್ತಿತರ ವಿಷಯವಾಗಿ ಉಪನ್ಯಾಸ ನೀಡಿದರು.
 ಬಿಕೆಜಿ ಸಮೂಹ ಸಂಸ್ಥೆಗಳ ಮಾಲೀಕ ಬಿ. ನಾಗನಗೌಡರು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್.ಅಕ್ಕಿ. ಶಾಸಕ ಈ ತುಕಾರಾಮ್ ಅವರ ಆಪ್ತ ಕಾರ್ಯದರ್ಶಿ ಎಸ್ ವಿ ಹಿರೇಮಠ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು ವಿರಕ್ತ ಮಠದ. ಮು. ನಿ. ಪ್ರ. ಪ್ರಭು ಮಹಾಸ್ವಾಮಿಗಳು ಶಿಕ್ಷಕರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು. ಕ. ರಾ.ಖಾಸಗಿ ಶಿಕ್ಷಕರ ಬಳಗದ ಗೌರವಾಧ್ಯಕ್ಷ ವಿ. ಎಂ. ನಾಗಭೂಷಣ್ ಪ್ರಾಸ್ತಾವಿಕ ನುಡಿಗಳನ್ನಾಡಿದರು .ಅಧ್ಯಕ್ಷ ಪುರುಷೋತ್ತಮ್ ಟಿ.ಎಂ. ಎಂ.ಡಿ ರಮೇಶ್. ಕಾರ್ಯದರ್ಶಿ ಕೆ ನಾಗರಾಜಪ್ಪ ಸೇರಿದಂತೆ ತಾಲೂಕಿನ ಖಾಸಗಿ ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ಜಿ.ಹೆಚ್ ಹನುಮೇಶ್ ಕುಮಾರ್ ಪ್ರಾರ್ಥನೆಯ ನೆರವೇರಿಸಿದರು ನೀಲಕಂಠ ಆಚಾರಿ ಕಮ್ಮಾರ್ ಅತಿಥಿಗಳನ್ನ ಸ್ವಾಗತಿಸಿದರು ಪರಶುರಾಮ್ ಬಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕರ ಆಪ್ತ ಕಾರ್ಯದರ್ಶಿ ಎಸ್ ವಿ ಹಿರೇಮಠ್ ಅವರ ಮುಖೇನ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ತಾಲೂಕಿನ ವಿವಿಧ ಖಾಸಗಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ 30 ಜನ ಶಿಕ್ಷಕರಿಗೆ ಸಂಡೂರು ಶಿಕ್ಷಣ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪಟ್ಟಣದ ಗುರುಭವನದಲ್ಲಿ ಸಿದರು