ಕರ್ನಾಟಕ ರಾಜ್ಯೋತ್ಸವ: ಸನ್ಮಾನ ಕಾರ್ಯಕ್ರಮ

ಧಾರವಾಡ,ನ3: 67ನೆಯ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಯ ಕರ್ನಾಟಕ ಸಂಘಟನೆ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಕಡಪಾ ಮೈದಾನದಲ್ಲಿ ಸಾಧಕರಿಗೆ, ದೇಶ ಕಾಯೋ ವೀರ ಯೋಧರಿಗೆ, ಅನ್ನ ನೀಡೋ ರೈತರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಹಾಗೂ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಕನ್ನಡದ ಹಾಡುಗಳ ಡಿಜೆ ಸೌಂಡ್ ಸಿಸ್ಟಮ್ ಗೆ ಕಾಂಗ್ರೆಸ್ ಮುಖಂಡ ದೀಪಕ್ ಚುಂಚೋರೆ, ಇಸ್ಮಾಯಿಲ್ ತಮಟಗಾರ, ಡಾ. ಮಯೂರ ಮೋರೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸುಧೀರ್ ಮುಧೋಳ, ಚಂದ್ರು ಅಂಗಡಿ, ಲಕ್ಷ್ಮಣ್ ದೊಡ್ಡಮನಿ, ಅಜ್ಗರ್ ಮುಲ್ಲಾ, ಮಂಜುನಾಥ ಸುತಗಟ್ಟಿ, ಮುತ್ತು ಕುಲಕರ್ಣಿ ಸೇರಿದಂತೆ ಜಯ ಕರ್ನಾಟಕ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಇದ್ದರು.