ಕರ್ನಾಟಕ ರಾಜ್ಯೋತ್ಸವ ಮೆರವಣಿಗೆಗೆ ಜಿಲ್ಲಾಧಿಕಾರಿಗಳಿಂದ ಚಾಲನೆ

ಸಂಜೆವಾಣಿ ವಾರ್ತೆ
ಮಂಡ್ಯ: ನ.01:- 68ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಜಿಲ್ಲಾಧಿಕಾರ ಗೃಹ ಕಚೇರಿಯಿಂದ ತಾಯಿ ಭುವನೇಶ್ವರಿ ರಥಕ್ಕೆ ಜಿಲ್ಲಾಧಿಕಾರಿ ಡಾ. ಕುಮಾರರವರು ಚಾಲನೆ ನೀಡಿದರು.
ಮೆರವಣಿಗೆಗೆ ಮೆರಗು ಚೆಲ್ಲಲು ಕಲಾ ತಂಡಗಳಾದ ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ, ಗಾರುಡಿ ಗೊಂಬೆ, ಪೂರ್ಣ ಕುಂಭ, ಸ್ತಬ್ಧ ಚಿತ್ರಗಳಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ಹಾಗೂ ಇನ್ನಿತರ ಇಲಾಖೆಯ ಸ್ತಬ್ಧ ಚಿತ್ರಗಳು ಭಾಗಿಯಾಗಿದ್ದವು.
68 ನೇ ಕನ್ನಡ ರಾಜ್ಯೋತ್ಸವದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ,ನಾಗರೀಕ ಪುರುಷ ಪೆÇಲೀಸ್ ಪಡೆ, ನಾಗರೀಕ ಮಹಿಳಾ ಪೆÇಲೀಸ್ ಪಡೆ, ಗೃಹರಕ್ಷಕ ದಳ ಪುರುಷ, ಅಬಕಾರಿ ದಳ, ಅರಣ್ಯ ಇಲಾಖೆ,
ಮಂಡ್ಯ ವಿ ವಿ ಸರ್ಕಾರಿ ಬಾಲಕರ ಕಾಲೇಜು (ಎನ್.ಸಿ.ಸಿ), ಮಂಡ್ಯ ವಿ ವಿ ಸರ್ಕಾರಿ ಬಾಲಕಿಯರ ಕಾಲೇಜು (ಎನ್.ಸಿ.ಸಿ), ಪಿಇಎಸ್ ಬಾಲಕರ ಕಾಲೇಜು (ಎನ್.ಸಿ.ಸಿ), ಪಿ.ಇ.ಎಸ್ ಬಾಲಕಿಯ ಕಾಲೇಜು (ಎನ್.ಸಿ.ಸಿ), ಅನಿಕೇತನ ಪ್ರೌಢ ಶಾಲೆ (ಎನ್.ಸಿ.ಸಿ ಬಾಲಕರ ತಂಡ),
ರೋಟರಿ ಪ್ರೌಢ ಶಾಲೆ (ಸ್ಕೌಟ್ಸ್ & ಗೈಡ್ಸ್) ಬಾಲಕಿಯರ ತಂಡ, ಲಕ್ಷ್ಮೀ ಜನಾರ್ಧನ (ಸ್ಕೌಟ್ಸ್ & ಗೈಡ್ಸ್), ಬಾಲಕಿಯರ ತಂಡ, ಕಾರ್ಮೆಲ್ ಕಾನ್ವೆಂಟ್ ಪ್ರೌಢ ಶಾಲೆ, ಬಾಲಕಿಯರ ತಂಡ, ಡಫೆÇೀಡಿಲ್ಸ್ ಪ್ರೌಢ ಶಾಲೆ ಬಾಲಕರ ತಂಡ, ಆದರ್ಶ ಪ್ರೌಢ ಶಾಲೆ, ಬಾಲಕಿಯರ ತಂಡ, ಸೆಂಟ್ ಜೋಸೆಫ್ ಪ್ರೌಢ ಶಾಲೆ, ಬಾಲಕಿಯರ ತಂಡ, ಕರ್ನಾಟಕ ಪಬ್ಲಿಕ್ ಶಾಲೆ, ಕಾರ್ಮೆಲ್ ಕಾನ್ವೆಂಟ್ ಪ್ರಾಥಮಿಕ ಶಾಲೆ ಬಾಲಕಿಯರ ತಂಡ, ಸೆಂಟ್ ಜೋಸೆಫ್ ಶಾಲೆ ಪ್ರಾಥಮಿಕ ಬಾಲಕಿಯರ ತಂಡದ ತುಕಡಿಗಳು ಭಾಗವಹಿಸಿದವು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಯಾದ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್ ನಾಗರಾಜು, ಉಪವಿಭಾಗಾಧಿಕಾರಿ ಶಿವಮೂರ್ತಿ, ತಾಲ್ಲೂಕು ತಹಶೀಲ್ದಾರ್ ಶಿವಕುಮಾರ್ ಬಿರಾದಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.