ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ – ಮಹತ್ವದ ನಿರ್ಧಾರ

@12bc = 200 ಕೋಟಿ ರಿಂಗ್ ರೋಡ್‌ ಯೋಜನೆಗೆ ಒಪ್ಪಿಗೆ
ರಾಯಚೂರು.ನ.12- ನಗರದ ಜನರ ಬಹು ನಿರೀಕ್ಷಿತ ಬೇಡಿಕೆಯಾದ ರಾಯಚೂರು ರಿಂಗ್ ರೋಡ್ ನಿರ್ಮಾಣಕ್ಕೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಸಭೆ ಒಪ್ಪಿಗೆ ನೀಡಿದೆಂದು ಶಾಸಕ ಡಾ.ಶಿವರಾಜ ಪಾಟೀಲ್ ಅವರು ಹೇಳಿದರು.
ಅವರಿಂದು ಬೆಂಗಳೂರಿನಲ್ಲಿ ನಡೆದ ಸಭೆ ನಂತರ ಈ ವಿಷಯ ತಿಳಿಸಿದರು. ರಾಜ್ಯಾಧ್ಯಕ್ಷ ಕೆ.ಶಿವನಗೌಡ ನಾಯಕ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಈ ಪ್ರಸ್ತಾವನೆ ಮಂ‌ಡಿಸಿದರು. 40 ಕಿ.ಮೀ. ರಿಂಗ್ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಪ್ರಸ್ತಾವನೆ ಸಿದ್ಧಗೊಂಡಿದೆ. ನಿಗಮದಿಂದ ಈ ಯೋಜನೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಲಾಯಿತು. ಅಧ್ಯಕ್ಷರಾದ ಕೆ.ಶಿವನಗೌಡ ನಾಯಕ ಅವರು ಈ ಯೋಜನೆಗೆ ಪೂರಕವಾಗಿ ಸ್ಪಂದಿಸುವ ಮೂಲಕ ಉದ್ದೇಶಿತ ಯೋಜನೆಗೆ ಒಪ್ಪಿಗೆ ದೊರೆಯುವಂತೆ ಮಾಡಲಾಗಿದೆ.
ಡಿಪಿಆರ್ ಸಿದ್ಧಪಡಿಸಿದ ರಾಜ್ಯ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಲು ಸಭೆ ತೀರ್ಮಾನಿಸಿತು. ರಾಯಚೂರಿನಲ್ಲಿ ರಿಂಗ್ ನಿರ್ಮಾಣಕ್ಕೆ ಕಳೆದ ಅನೇಕ ವರ್ಷಗಳಿಂದ ತೀವ್ರ ಬೇಡಿಕೆಯಿತ್ತು. ಈಗಾಗಲೇ ಹೈದ್ರಾಬಾದ್ ರಸ್ತೆಯಿಂದ ಲಿಂಗಸೂಗೂರು ರಸ್ತೆಯ ಸಂಪರ್ಕ ಬೈಪಾಸ್ ರಸ್ತೆ ನಿರ್ಮಾಣಗೊಂಡಿದೆ. ಉಳಿದ ರಸ್ತೆ ನಿರ್ಮಾಣಗೊಳ್ಳದಿರುವುದರಿಂದ ರಿಂಗ್ ರೋಡ್ ಯೋಜನೆ ನೆನೆಗುದಿಗೆ ಬಿದ್ದಿತ್ತು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಈ ಯೋಜನೆ ಸಾಕಾರಕ್ಕೆ ಮುಂದಾಗಿದ್ದು, ಇದಕ್ಕೆ ಅಧ್ಯಕ್ಷರಾದ ಕೆ.ಶಿವನಗೌಡ ನಾಯಕ ಅವರ ಸಹಕಾರ ಉದ್ದೇಶಿತ ಯೋಜನೆ ಅಸ್ತಿತ್ವದ ಅನುಷ್ಠಾನಕ್ಕೆ ಅವಕಾಶ ದೊರೆತಂತಾಗಿದೆ.
ಸುಮಾರು 150 ರಿಂದ 200 ಕೋಟಿ ರೂ. ವೆಚ್ಚದ ಈ ಮಹತ್ವದ ಯೋಜನೆ ಜಿಲ್ಲಾ ಕೇಂದ್ರವಾದ ನಗರದಲ್ಲಿ ಹೊಸ ಇತಿಹಾಸ ಬರೆಯಲಿದೆ. ಗದ್ವಾಲ್ ರಸ್ತೆ, ಮಂತ್ರಾಲಯ ರಸ್ತೆ, ಲಿಂಗಸೂಗೂರು ಕೂಡು ರಸ್ತೆಗಳಿಗೆ ಜಂಕ್ಷನ್ ಅಭಿವೃದ್ಧಿ ಸೇರಿದಂತೆ ವಿಸ್ತೃತ ಯೋಜನೆ ಸಿದ್ಧಪಡಿಸಲಾಗಿದೆಂದು ಹೇಳಿದ ಅವರು, 150 ರಿಂದ 200 ಕೋಟಿ ಯೋಜನೆಗೆ ಹಣಕಾಸು ಇಲಾಖೆ ಅನುಮೋದನೆ ಅಗತ್ಯವಾಗಿದೆ. ಹಣಕಾಸು ಇಲಾಖೆ ನಂತರ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಒಪ್ಪಿಗೆ ಪಡೆಯುವ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ.
ನಗರಕ್ಕೆ ರಿಂಗ್ ರಸ್ತೆ ನಿರ್ಮಾಣ ಮಾಡುವುದು ನನ್ನ ಗುರಿಯಾಗಿದೆ. ಈಗಾಗಲೇ ಭೂ ಸ್ವಾಧೀನ ಸೇರಿದಂತೆ ಜಂಕ್ಷನ್ ಅಭಿವೃದ್ಧಿಗಾಗಿ ರಸ್ತೆ ಅಭಿವೃದ್ಧಿ ನಿಗಮದಿಂದ ಅನುಮೋದನೆ ಪ‌ದಿರುವುದರಿಂದ ಸರ್ಕಾರ ಮಟ್ಟದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ, ಉದ್ದೇಶಿತ ಯೋಜನೆ ಶೀಘ್ರವೇ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆಂದು ತಿಳಿಸಿದರು.