
ಹರಿಹರ.ಮಾ.10 ; ಕರ್ನಾಟಕದ ರತ್ನ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿಯನ್ನು ಸೋದರ ನಟ ರಾಘವೇಂದ್ರ ರಾಜಕುಮಾರ್ ಅವರು ಮಾ 12 ರಂದು ಸಂಜೆ 6 ಗಂಟೆಗೆ ಇಂದಿರಾ ನಗರದ ಉದ್ಯಾನವನದಲ್ಲಿ ಲೋಕಾರ್ಪಣೆಯನ್ನುಮಾಡಲಿದ್ದಾರೆ ಎಂದು ಪುನೀತ್ ಅಭಿಮಾನಿ ಬಳಗದ ಸಿದ್ದೇಶ್ ಬೇಡರ್ ಹೇಳಿದರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಂಧ್ರ ಪ್ರದೇಶದ ತೆನಾಲಿ ಎಂಬಲ್ಲಿ ಸುಮಾರು 2,25,000 ಲಕ್ಷ ವೆಚ್ಚದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಪುತ್ತಳಿಯನ್ನು ಸುಂದರವಾಗಿ ನಿರ್ಮಿಸಲಾಗಿದೆ. ಚಿತ್ರನಟ ಪುನೀತ್ ಸೋದರ ನಟ ರಾಘವೇಂದ್ರ ರಾಜಕುಮಾರ್. ನಟರುಗಳಾದ ಜೈ ಜಗದೀಶ್. ಶ್ರೀನಗರ ಕಿಟ್ಟಿ. ಯೋಗೇಶ್ ಲೂಜ್ ಮಾದ. ಅತಿಥಿ ಪ್ರಭುದೇವ್. ಚಲನಚಿತ್ರ ವಾಣಿಜ್ಯ ಮಂಡಳಿ ಸಂಘದ ಅಧ್ಯಕ್ಷ ಭಾಮ ಹರೀಶ್ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಚಲನಚಿತ್ರ ನಿರ್ಮಾಪಕ ಶಾಮ್ ರಾಜ್ ಜಿಗಳಿ. ಸೇರಿದಂತೆ ಹಲವಾರು ಕಲಾವಿದರು ಸ್ಥಳೀಯ ಶಾಸಕರು ಮಾಜಿ ಶಾಸಕರಗಳು ನಗರಸಭೆಯ ಸರ್ವ ಸದಸ್ಯರು ಅಧಿಕಾರಿ ವರ್ಗದವರು ಪುನೀತ್ ಅಭಿಮಾನಿ ಬಳಗದವರು ಭಾಗವಹಿಸಲಿದ್ದಾರೆ ಎಂದರು.ವಕೀಲರಾದ ಮಾರುತಿ ಬೇಡರ್ ಮಾತನಾಡಿ ಹುಟ್ಟು ಸಾವಿನ ಮಧ್ಯೆ ಒಳ್ಳೆಯ ಕೆಲಸ ಅಜರಾಮರಾಗಿ ಉಳಿಯುತ್ತವೆ ಎಂಬುದಕ್ಕೆ ಪುನೀತ್ ಅವರೇ ಸಾಕ್ಷಿ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಪ್ರೇರಣಾ ಶಕ್ತಿ ಇರುತ್ತದೆ. ಇದು ಇಂದಿನ ಯುವಕರಿಗೆ ಶಕ್ತಿ ಪ್ರೇರಣಾಶಕ್ತಿ ಆಗಬೇಕು ಉದ್ದೇಶದಿಂದ ಪುನೀತ್ ರಾಜಕುಮಾರ್ ಅವರು ನೇತ್ರದಾನ ಮಾಡಿದ್ದು ಅವರ ಪ್ರೇರಣಾಪನೆಯಿಂದ ನಾನು ಸೇರಿದಂತೆ ಹಲವಾರು ನೇತ್ರದಾನ ಮಾಡುವುದಕ್ಕೆ ಘೋಷಣೆಯನ್ನು ಮಾಡುತ್ತೇವೆ ಎಂದರು