ಕರ್ನಾಟಕ ರತ್ನ ಡಾ ಶ್ರೀ ಶಿವಕುಮಾರ ಸ್ವಾಮೀಜಿಯ ಪುಣ್ಯ ಸ್ಮರಣೆ – ಮೌನೇಶ

ಮಾನ್ವಿ,ಜ.೨೧- ತಾಲೂಕಿನ ನಮ್ಮ ಮಾನ್ವಿ ಪತ್ತಿನ ಸಹಕಾರ ಬ್ಯಾಂಕಿನಲ್ಲಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆಯನ್ನು ಮಾಡಿ, ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಧ್ಯಕ್ಷ ಮೌನೇಶ ಹರಟೆನೂರು ಹೇಳಿದರು.
ಈ ಸಂದರ್ಭದಲ್ಲಿ ಸಹಕಾರಿಯ ಉಪಾಧ್ಯಕ್ಷ ಡಿ. ಅಮರೇಶ, ನಿರ್ದೇಶಕರಾದ ಗಂಗಾಧರ ಸ್ವಾಮಿ, ಶಿವಪ್ಪ ಮಾಲಿ ಪಾಟೀಲ್, ನಾಗರಾಜ್, ಅಮಾತ್ಯೇಪ್ಪ ಹಾಗೂ ಸಹಕರಿಯ ಮುಖ್ಯ ಕಾರ್ಯನಿರ್ವಾಹಕ ಮಂಜುನಾಥ ಹೆಚ್ ಹಾಗೂ ಸಹಕರಿಸಿ ಸಿಬ್ಬಂದಿಗಳು ರಾಜಶೇಖರ್ ಅರುಣ್, ಉಷಾ ಗೌರಿ, ಸುರೇಶ, ರಾದಮ್ಮ ಇದ್ದರು.